Home News Hampi: ಹಂಪಿಯಲ್ಲಿ ‘ನಿರ್ಮಲಾ ಸೀತಾರಾಮನ್‌’ ದೇಶದ ಹೆಸರಲ್ಲಿ ಪೂಜೆ

Hampi: ಹಂಪಿಯಲ್ಲಿ ‘ನಿರ್ಮಲಾ ಸೀತಾರಾಮನ್‌’ ದೇಶದ ಹೆಸರಲ್ಲಿ ಪೂಜೆ

Hindu neighbor gifts plot of land

Hindu neighbour gifts land to Muslim journalist

Hampi: ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಐತಿಹಾಸಿಕ ಹಂಪಿಯ ವಿರುಪಾಕ್ಷೇಶ್ವರನ ಸನ್ನಿಧಿಗೆ (Virupaksha Temple) ಭೇಟಿ ನೀಡಿ, ಹಂಪಿಯ ವಿರುಪಾಕ್ಷೇಶ್ವರನಿಗೆ ದೇಶದ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

ಪೂಜೆ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್, ನನಗೆ ಬಹಳಷ್ಟು ಜನ ಹಂಪಿಯನ್ನ ವೀಕ್ಷಣೆ ಮಾಡಿ ಎಂದು ಹೇಳುತ್ತಿದ್ದರು. ಇಂದು ಆ ಅವಕಾಶ ನನಗೆ ಸಿಕ್ಕಿರೊದು ನನ್ನ ಅದೃಷ್ಟ. ಹಂಪಿಯ ಸಾಂಸ್ಕೃತಿಕ ಪರಂಪರೆಯನ್ನ ಕಣ್ತುಂಬಿಕೊಂಡಿರೋದು ತುಂಬಾ ಹೆಮ್ಮಯ ಅನುಭವ ಎಂದರು.

ಇಲ್ಲಿಯ ಕಲೆ ಸಂಸ್ಕೃತಿ ಈ ನಾಡಿನ ಪರಂಪರೆಯ ಪ್ರತೀಕವಾಗಿದೆ. ಯುನೆಸ್ಕೊ ಗುರುತಿಸಿರುವ ಐತಿಹಾಸಿಕ ತಾಣ ಹಂಪಿಯ ಪ್ರತಿಯೊಂದು ಶಿಲೆಯು ಇಲ್ಲಿನ ಪರಂಪರೆಯನ್ನ ಪ್ರತಿಬಿಂಬಿಸುವಂತಿದೆ.