Home News ಹೊಸವರ್ಷಕ್ಕೆ ಕಂದಾಯ ಇಲಾಖೆಯಿಂದ ಬಂಪರ್ ಬಹುಮಾನ | ಆಸ್ತಿ ನೋಂದಣಿ ಮಾಡುವವರಿಗೆ 10% ಡಿಸ್ಕೌಂಟ್ !!

ಹೊಸವರ್ಷಕ್ಕೆ ಕಂದಾಯ ಇಲಾಖೆಯಿಂದ ಬಂಪರ್ ಬಹುಮಾನ | ಆಸ್ತಿ ನೋಂದಣಿ ಮಾಡುವವರಿಗೆ 10% ಡಿಸ್ಕೌಂಟ್ !!

Hindu neighbor gifts plot of land

Hindu neighbour gifts land to Muslim journalist

ಕಳೆದ ಎರಡು ವರ್ಷದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಹೊಸವರ್ಷಕ್ಕೆ ಕಂದಾಯ ಇಲಾಖೆ ಬಂಪರ್ ಗಿಫ್ಟ್ ನೀಡಿದೆ. ಆಸ್ತಿ ವಹಿವಾಟು ಸಂಬಂಧಿಸಿದಂತೆ, ಯಾರು ಖರೀದಿ ಮಾಡುತ್ತಾರೆ, ಅಂತಹವರಿಗೆ ರೆವಿನ್ಯೂ, ಸೈಟ್, ಫ್ಲಾಟ್ ಗೈಡೆನ್ಸ್ ವ್ಯಾಲ್ಯು 10% ಕಡಿಮೆ ಮಾಡಿ ಆದೇಶ ಹೊರಡಿಸಲಾಗಿದೆ. 

ಅಗ್ರಿಮೆಂಟ್ ಮಾಡಿರುವ, ರಿಜಿಸ್ಟ್ರೇಷನ್ ಮಾಡಿಸಲು ತಯಾರಾಗಿರುವವರಿಗೆ ಕಂದಾಯ ಇಲಾಖೆಯಿಂದ ಈ ಗಿಫ್ಟ್ ನೀಡಲಾಗಿದ್ದು, ಮೂರು ತಿಂಗಳವರೆಗೆ ಈ ಆಫರ್ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿಕೆ ನೀಡಿದ್ದಾರೆ.  

ರಾಜ್ಯದ ಲಕ್ಷಾಂತರ ಜನರಿಗೆ ಇದು ಅನ್ವಯವಾಗಲಿದ್ದು, 1-1-2022 ರಿಂದ 31-3-2022ರ ವರೆಗೂ ರಿಯಾಯಿತಿ ನೀಡಲು ನಿರ್ಧರಿಸಲಾಗಿದ್ದು,ರಾಜ್ಯದ ಸಚಿವರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.  ಆಯಾ ಪ್ರದೇಶದ ಗೈಡ್‌ಲೈನ್ಸ್ ವ್ಯಾಲ್ಯೂ ಪ್ರಕಾರ ಇದು ಅನ್ವಯ ಆಗಲಿದ್ದು, ಎಲ್ಲಾ ರೀತಿಯ ರಿಜಿಸ್ಟ್ರೇಷನ್‌ಗೆ ಇದು ಅನ್ವಯವಾಗಲಿದೆ ಎಂದು ಆದೇಶ ನೀಡಲಾಗಿದೆ.