Home News ದಾಖಲೆ ಮಾಡಲೆಂದೇ ಸೃಷ್ಟಿಯಾಗಿದೆ ಈ ಹೊಸ ಸ್ಮಾರ್ಟ್‌ವಾಚ್‌ | ಅಬ್ಬಬ್ಬಾ ಏನ್‌ ಫೀಚರ್‌ ಗುರು

ದಾಖಲೆ ಮಾಡಲೆಂದೇ ಸೃಷ್ಟಿಯಾಗಿದೆ ಈ ಹೊಸ ಸ್ಮಾರ್ಟ್‌ವಾಚ್‌ | ಅಬ್ಬಬ್ಬಾ ಏನ್‌ ಫೀಚರ್‌ ಗುರು

Hindu neighbor gifts plot of land

Hindu neighbour gifts land to Muslim journalist

ಜನರು ಹೆಚ್ಚಾಗಿ ಹೊಸತನವನ್ನು ಇಷ್ಟ ಪಡುತ್ತಾರೆ. ಹೌದು ಇತ್ತೀಚಿಗೆ ಸ್ಮಾರ್ಟ್ ವಾಚ್ ಗೆ ಬಹಳ ಬೇಡಿಕೆ ಇದ್ದು ಜೊತೆಗೆ ಈಗಿನ ಟ್ರೆಂಡ್ ಕೂಡ ಆಗಿದೆ. ಅದಲ್ಲದೆ ಮಾರುಕಟ್ಟೆಯಲ್ಲಿ ಸ್ಮಾರ್ಟ್​​ವಾಚ್​​ಗಳಿಗೆ ಬೇಡಿಕೆಯಿದ್ದಷ್ಟು ಬೇರೆ ಯಾವ ಸಾಧನಗಳಿಗೂ ಇಲ್ಲ ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವಂತಹ ಫೀಚರ್ಸ್​ ಆಗಿರಬಹುದು. ಇದೀಗ ಭಾರತದಲ್ಲಿ ಡಿಝೋ ಕಂಫನಿಯ ಹೊಸ ಸ್ಮಾರ್ಟ್​ವಾಚ್ ಬಿಡುಗಡೆಯಾಗಿದ್ದು ಇದಕ್ಕೆ ಡಿಝೋ ವಾಚ್​ ಡಿ ಪ್ರೋ ಎಂಬ ಹೆಸರನ್ನು ಇಡಲಾಗಿದೆ.

ಸ್ಮಾರ್ಟ್​ವಾಚ್​ಗಳು ತನ್ನ ಅದ್ಭುತ ವೈಶಿಷ್ಟ್ಯಗಳ ಮೂಲ ಜನರನ್ನು ತನ್ನತ್ತ ಆಕರ್ಷಿಸಿದೆ. ಈ ಮಧ್ಯೆ ಹಲವಾರು ಕಂಪನಿಗಳು ಕೂಡ ಹುಟ್ಟಿಕೊಂಡಿವೆ. ಬಗೆ ಬಗೆಯ ಸ್ಮಾರ್ಟ್​​ವಾಚ್ ಸಾಧನಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಸದ್ಯ ಡಿಝೋ ವಾಚ್​ ಡಿ ಪ್ರೋ ಸ್ಮಾರ್ಟ್​​ವಾಚ್​ ಡೋಂಟ್ ಡಿಸ್ಟರ್ಬ್ ಮೋಡ್, ಸ್ಲೀಪಿಂಗ್ ಟೈಮರ್​ ಈ ರೀತಿಯ ಫೀಚರ್ಸ್​ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಇದೇ ಜನವರಿ 9 ರಂದು ಲಾಂಚ್‌ ಆಗಲಿದೆ ಎಂಬ ಮಾಹಿತಿ ಇದೆ.

ಡಿಝೋ ವಾಚ್‌ ಡಿ ಪ್ರೋ ಸ್ಮಾರ್ಟ್‌ವಾಚ್‌ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಅನುಗುಣವಾಗಿ ಈ ಸ್ಮಾರ್ಟ್‌ವಾಚ್‌ 60Hz ರಿಫ್ರೆಶ್ ರೇಟ್‌ ಬೆಂಬಲಿಸುವ 1.85 ಇಂಚಿನ ಬಿಗ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಮೃದುವಾದ ಅನಿಮೇಷನ್‌ನೊಂದಿಗೆ ಬರಲಿದೆ ಎಂದು ಟೀಸರ್​ ಮುಖಾಂತರ ಕಂಪನಿ ಹೇಳಿದೆ.

ಡಿಝೋ ವಾಚ್ ಡಿ ಪ್ರೋ ಸ್ಮಾರ್ಟ್​ವಾಚ್ ವಿಶೇಷತೆಗಳು :

• ಇನ್ನು ಡಿಝೋ ವಾಚ್ ಡಿ ಪ್ರೋ ಸ್ಮಾರ್ಟ್​ವಾಚ್ ಡಿ1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4x RAM ಅನ್ನು ಒಳಗೊಂಡಿರಲಿದೆ ಎಂದು ಅಂದಾಜು ಮಾಡಿದ್ದಾರೆ.
ಇನ್ನು ಡಿಝೋ ವಾಚ್ ಡಿ ಪ್ರೋ ಸ್ಮಾರ್ಟ್​ವಾಚ್ ಡಿ1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4x RAM ಅನ್ನು ಒಳಗೊಂಡಿರಲಿದೆ ಎಂದು ಅಂದಾಜು ಮಾಡಿದ್ದಾರೆ.

  • ಡಿಝೋ ವಾಚ್‌ ಡಿ ಪ್ರೋ ಸ್ಮಾರ್ಟ್‌ವಾಚ್‌ ಡಿಝೋ ಓಎಸ್​ನೊಂದಿಗೆ ಡೈನಾಮಿಕ್, ಇಂಟರ್‌ ಆಕ್ಟಿವ್ ಮತ್ತು ಜಪ್ಪಿ ಆಪರೇಟಿಂಗ್ ಎಕ್ಸ್‌ಪೀರಿಯನ್ಸ್‌ ಅನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌ ಮೇಲ್ವಿಚಾರಣೆ ಮತ್ತು ರಕ್ತದ ಆಮ್ಲಜನಕದ ಮಟ್ಟವನ್ನು ಟ್ರ್ಯಾಕ್‌ ಮಾಡುತ್ತದೆ.
  • ಡಿಝೋ ವಾಚ್‌ ಡಿ ಪ್ರೋ ಸ್ಮಾರ್ಟ್‌ವಾಚ್‌ ಡಿಝೋ ಓಎಸ್​ನೊಂದಿಗೆ ಡೈನಾಮಿಕ್, ಇಂಟರ್‌ ಆಕ್ಟಿವ್ ಮತ್ತು ಜಪ್ಪಿ ಆಪರೇಟಿಂಗ್ ಎಕ್ಸ್‌ಪೀರಿಯನ್ಸ್‌ ಅನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌ ಮೇಲ್ವಿಚಾರಣೆ ಮತ್ತು ರಕ್ತದ ಆಮ್ಲಜನಕದ ಮಟ್ಟವನ್ನು ಟ್ರ್ಯಾಕ್‌ ಮಾಡುತ್ತದೆ. • ಇದರಲ್ಲಿ ಪ್ರಮುಖವಾಗಿ ವಾಚ್ ಫೇಸ್ ಕಸ್ಟಮೈಸೇಶನ್‌ಗಾಗಿ ಆರ್ಟ್ ಫಿಲ್ಟರ್, ಗಾಳಿಯ ವೇಗ, ಮತ್ತು ಮುಂದಿನ 3 ಗಂಟೆಗಳ ವೆದರ್‌ ಅಪ್ಡೇಟ್‌ ನೀಡುವ ಫೀಚರ್ಸ್‌ ಅನ್ನು ಒಳಗೊಂಡಿರಲಿದೆ.
  • ಇದರಲ್ಲಿ ಪ್ರಮುಖವಾಗಿ ವಾಚ್ ಫೇಸ್ ಕಸ್ಟಮೈಸೇಶನ್‌ಗಾಗಿ ಆರ್ಟ್ ಫಿಲ್ಟರ್, ಗಾಳಿಯ ವೇಗ, ಮತ್ತು ಮುಂದಿನ 3 ಗಂಟೆಗಳ ವೆದರ್‌ ಅಪ್ಡೇಟ್‌ ನೀಡುವ ಫೀಚರ್ಸ್‌ ಅನ್ನು ಒಳಗೊಂಡಿರಲಿದೆ ಡಿಝೋ ವಾಚ್​ ಡಿ ಪ್ರೋ ಸ್ಮಾರ್ಟ್​​ವಾಚ್​ನ ಸದ್ಯಕ್ಕೆ ಟೀಸರ್​ ಮಾತ್ರ ಬಿಡುಗಡೆಯಾಗಿದ್ದು, ಇನ್ನೂ ಹಲವಾರು ಫೀಚರ್ಸ್​ ಅನ್ನು ಇದು ಹೊಂದಿರಲಿದೆ. ಇನ್ನು ಈ ಸ್ಮಾರ್ಟ್​​ವಾಚ್​ನ ಬೆಲೆ ಮತ್ತು ಲಭ್ಯತೆ ಬಗ್ಗೆ ಇನ್ನೂ ಬಹಿರಂಗವಾಗಿಲ್ಲ. ಇವೆಲ್ಲವೂ ಲಾಂಚ್ ಆದ ನಂತರ ದೊರೆಯುತ್ತದೆ.

ಈಗಾಗಲೇ ಟೀಸರ್ ಮೂಲಕ ಡಿಝೋ ವಾಚ್​ ಡಿ ಪ್ರೋ ಸ್ಮಾರ್ಟ್​​ವಾಚ್​ನ ವಿಶೇಷತೆಯನ್ನು ತಿಳಿಸಿದ್ದು ಜನರು ಈ ಸ್ಮಾರ್ಟ್ ವಾಚ್ ಬಿಡುಗಡೆಗೆ ಕಾತುರದಿಂದ ಕಾಯಬೇಕಿದೆ. ಇನ್ನು ಕೇವಲ ಎರಡು ದಿನಗಳಲ್ಲಿ ಹೊಸ ಸ್ಮಾರ್ಟ್ ವಾಚ್ ಲಗ್ಗೆ ಇಟ್ಟು ತನ್ನದೇ ಹವಾ ತೋರಿಸಲಿದೆ.