Home News Airtel Recharge Plan: ಬಂತು ಏರ್​ಟೆಲ್​​ನಿಂದ ಹೊಸ ರೀಚಾರ್ಜ್​ ಪ್ಲಾನ್​; ಇಡೀ ಟೆಲಿಕಾಂ ಕಂಪನಿ ಒಮ್ಮೆ...

Airtel Recharge Plan: ಬಂತು ಏರ್​ಟೆಲ್​​ನಿಂದ ಹೊಸ ರೀಚಾರ್ಜ್​ ಪ್ಲಾನ್​; ಇಡೀ ಟೆಲಿಕಾಂ ಕಂಪನಿ ಒಮ್ಮೆ ತಿರುಗಿ ನೋಡೋ ಯೋಜನೆ!

Hindu neighbor gifts plot of land

Hindu neighbour gifts land to Muslim journalist

ಇದೀಗ ಏರ್ಟೆಲ್​​ ಹೊಸ ರೀಚಾರ್ಜ್​ ಯೋಜನೆ ರೂಪಿಸಿದೆ. ಏರ್​ಟೆಲ್ ತನ್ನ ಗ್ರಾಹಕರಿಗಾಗಿ ವರ್ಲ್ಡ್​ ಪಾಸ್ ಪಡೆಯುವಂತಹ ರೀಚಾರ್ಜ್ ಪ್ಲಾನ್ ಮಾಡಿದೆ. ಇನ್ನೂ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಈ ಹೊಸ ಯೋಜನೆಯಾದ ‘ವರ್ಲ್ಡ್ ಪಾಸ್’ (World Pass) Postpaid ಮತ್ತು Prepaid ಬಳಕೆದಾರರಿಗೆ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಯೋಜನೆಗಳನ್ನು ಪರಿಚಯಿಸುತ್ತಿದೆ. ಈ ಯೋಜನೆಗಳು ಒಟ್ಟು 184 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯ ವಿಶೇಷತೆ ಏನಂದ್ರೆ ಯಾವುದೇ ಬೇರೆ ರೀಚಾರ್ಜ್ ಮಾಡದೇ ಈ ಯೋಜನೆ ಮೂಲಕ ಎರಡಕ್ಕಿಂತ ಹೆಚ್ಚಿನ ದೇಶಗಳಿಗೆ ಪ್ರಯಾಣ ಮಾಡಬಹುದಾಗಿದೆ.

ಇನ್ನೂ ಈ ‘ವರ್ಲ್ಡ್ ಪಾಸ್’ ಏನು ಅಂದ್ರೆ, ಇದು ಏರ್​ಟೆಲ್​ ವರ್ಲ್ಡ್​ ಟ್ರಾವೆಲರ್​ ಗೆಂದು ಬಿಡುಗಡೆ ಮಾಡಿರುವ ರೋಮಿಂಗ್ ಪ್ಯಾಕ್ ಆಗಿದೆ. ದೇಶ-ವಿದೇಶಗಳಿಗೆ ಹೋಗುವ ಏರ್​ಟೆಲ್​ ಗ್ರಾಹಕರಿಗೆ ಈ ವರ್ಲ್ಡ್​ ಪಾಸ್​ ಯೋಜನೆ ತುಂಬಾ ಉಪಯುಕ್ತವಾಗಿದೆ. ಈ ಪ್ಯಾಕ್ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಎರಡು ಆಯ್ಕೆಗಳಲ್ಲೂ ಗ್ರಾಹಕರಿಗೆ ಲಭ್ಯವಿದ್ದು, ಪ್ಯಾಕ್ ಮುಗಿದ ನಂತರ ಡೇಟಾ ಬೇಕಾದರೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಬಳಸಿ, ಡೇಟಾವನ್ನು ಆ್ಯಡ್ ಮಾಡಿಕೊಳ್ಳಬಹುದು.

ಇನ್ನೂ ಏರ್​ಟೆಲ್​ ವರ್ಲ್ಡ್​ ಪಾಸ್​ ಯೋಜನೆಯ ಬೆಲೆ ವಿವರಗಳು ಹೀಗಿದೆ. ರೂ.649 ಪ್ರಿಪೇಯ್ಡ್ ಯೋಜನೆಯಲ್ಲಿ 649 ರೂಪಾಯಿಯ ರೀಚಾರ್ಜ್​ ಪ್ಲಾನ್ 1 ದಿನದ ವ್ಯಾಲಿಡಿಟಿಯನ್ನು ಮಾತ್ರ ಹೊಂದಿದೆ. ಹಾಗೂ 500MB ಡೇಟಾ ಕೂಡ ಇದರಲ್ಲಿ ಲಭ್ಯವಾಗಲಿದೆ. ಡೇಟಾ ಮುಗಿದ ಬಳಿಕವೂ ಅನ್ಲಿಮಿಟೆಡ್​ ಡೇಟಾವನ್ನು ಬಳಸಬಹುದು, ಆದರೆ ಕಡಿಮೆ ಇಂಟರ್​ನೆಟ್​ ವೇಗವಿರುತ್ತದೆ. ಹಾಗೇ ಇದರಲ್ಲಿ 10 SMS ಹಾಗೂ 100 ನಿಮಿಷಗಳ ಕಾಲ ಕಾಲ್​​ನಲ್ಲಿ ಮಾತಾಡಬಹುದಾಗಿದೆ.

ರೂ. 899 ಪ್ರಿಪೇಯ್ಡ್ ಯೋಜನೆಯಲ್ಲಿ 10 ದಿನಗಳ ಮಾನ್ಯತೆ, 20SMS, 1GB ಡೇಟಾ ಹಾಗೂ 100 ನಿಮಿಷಗಳ ಕಾಲದ ಕರೆಯಾಗಿದೆ. ಇನ್ನೂ ರೂ.2,998 ಪ್ರಿಪೇಯ್ಡ್ ಯೋಜನೆಯ ಬಗ್ಗೆ ಹೇಳಬೇಕಾದರೆ, ಈ ಯೋಜನೆಯಲ್ಲಿ 200 ನಿಮಿಷಗಳ ಕರೆಯ ಜೊತೆಗೆ 5GB ಡೇಟಾವನ್ನು 30 ದಿನಗಳವರೆಗೆ ನೀಡುತ್ತದೆ. ಹಾಗೇ 20 ಉಚಿತ SMS ಕೂಡ ಲಭ್ಯವಿದೆ. ರೂ.2,997 ಪ್ರಿಪೇಯ್ಡ್ ಯೋಜನೆಯಲ್ಲಿ 2GB ಡೇಟಾ, 100 ನಿಮಿಷಗಳ ಕರೆ ಜೊತೆಗೆ 365 ದಿನಗಳವರೆಗೆ 20 ಉಚಿತ SMS ಲಭ್ಯವಿದೆ.

ಇನ್ನೂ ಪೋಸ್ಟ್​ ಪೇಯ್ಡ್​ ಯೋಜನೆಗಳಲ್ಲಿ, ರೂ.649 ಪೋಸ್ಟ್ ಪೇಯ್ಡ್ ಯೋಜನೆಯು 500MB ಡೇಟಾವನ್ನು ನೀಡುತ್ತದೆ. ಹಾಗೂ ನೀವು ಕಡಿಮೆ ವೇಗದ ಅನಿಯಮಿತ ಡೇಟಾವನ್ನು ಕೂಡ ಬಳಸಬಹುದು. ಇದು ಕೇವಲ 1 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು,10 ಉಚಿತ SMS ಇದ್ದು, 100 ನಿಮಿಷಗಳ ಕಾಲ ಕಾಲ್​ನಲ್ಲಿ ಮಾತನಾಡಬಹುದಾಗಿದೆ.

ರೂ.2,999 ಪೋಸ್ಟ್ ಪೇಯ್ಡ್ ಯೋಜನೆಯಲ್ಲಿ, 10 ದಿನಗಳ ವ್ಯಾಲಿಡಿಟಿ ಇದ್ದು, ದಿನಕ್ಕೆ 100 ನಿಮಿಷಗಳಷ್ಟು ಕಾಲ್​ ಸೌಲಭ್ಯ ಇದೆ. ಇನ್ನೂ 20 ಉಚಿತ SMS ಜೊತೆಗೆ 5GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ರೂ.3,999 ಪೋಸ್ಟ್ ಪೇಯ್ಡ್ ಯೋಜನೆಯು 30 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ದಿನಕ್ಕೆ 100 ನಿಮಿಷಗಳು ಮಾತನಾಡಬಹುದು. ಹಾಗೂ 20 ಉಚಿತ SMS ಇದ್ದು, 12GB ಹೈ-ಸ್ಪೀಡ್ ಡೇಟಾ ಇರುತ್ತದೆ.

ಇನ್ನೂ ರೂ.5,999 ಪೋಸ್ಟ್ ಪೇಯ್ಡ್ ಯೋಜನೆಯಲ್ಲಿ, 900 ನಿಮಿಷಗಳಷ್ಟು ಕರೆಯಲ್ಲಿ ಮಾತಾಡಬಹುದು. 100 ಉಚಿತ SMS ಇದ್ದು, 2GB ಹೈ-ಸ್ಪೀಡ್ ಡೇಟಾವನ್ನು 90 ದಿನಗಳವರೆಗೆ ನೀಡುತ್ತದೆ.
ರೂ.14,999 ಪೋಸ್ಟ್ ಪೇಯ್ಡ್ ಯೋಜನೆ 365 ದಿನಗಳ ಮಾನ್ಯತೆ ಇದೆ. 100 ಉಚಿತ SMS ಲಭ್ಯವಿದ್ದು, 15GB ಡೇಟಾವನ್ನು ನೀಡುತ್ತದೆ. ಕಡಿಮೆ ವೇಗದಲ್ಲಿ ಅನಿಯಮಿತ ಡೇಟಾವನ್ನು ಕೂಡ ಬಳಸಬಹುದಾಗಿದೆ.