Home Interesting ಇನ್ಮುಂದೆ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಹೇಳುವುದು ಕಡ್ಡಾಯ!

ಇನ್ಮುಂದೆ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಹೇಳುವುದು ಕಡ್ಡಾಯ!

Hindu neighbor gifts plot of land

Hindu neighbour gifts land to Muslim journalist

ಮುಂಬೈ: ಸಾಮಾನ್ಯವಾಗಿ ಫೋನ್ ಕಾಲ್ ಬಂದಾಗ ಎಲ್ಲರೂ ಹಲೋ ಎಂದು ಹೇಳುವ ಮೂಲಕ ಮಾತು ಪ್ರಾರಂಭಿಸುತ್ತೇವೆ. ಆದ್ರೆ, ಇನ್ನು ಮುಂದೆ ‘ವಂದೇ ಮಾತರಂ’ ಹೇಳಬೇಕು.

ಹೌದು. ಇಂತಹ ಒಂದು ಸೂಚನೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ನಿನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರದ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಸಾಂಸ್ಕೃತಿಕ ವ್ಯವಹಾರಗಳ ಸಚಿವರಾಗಿ ನೇಮಕಗೊಂಡ ಸುಧೀರ್ ಮುಂಗಂತಿವಾರ್ ಇಂಥದ್ದೊಂದು ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಕಚೇರಿಗಳಲ್ಲಿ ಫೋನ್ ಕರೆಗಳನ್ನು ತೆಗೆದುಕೊಳ್ಳುವಾಗ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಹೇಳಿ ಎಂದಿದ್ದಾರೆ. ಈ ಬಗ್ಗೆ ಆಗಸ್ಟ್ 18 ರೊಳಗೆ ಅಧಿಕೃತ ಸರ್ಕಾರಿ ಆದೇಶ ಬರಲಿದೆ ಎಂದು ಅವರು ಹೇಳಿದರು.

ನಿನ್ನೆ ಮಹಾರಾಷ್ಟ್ರದ ಸಚಿವ ಸಂಪುಟವನ್ನು ವಿಸ್ತರಣೆಯಾಗಿದ್ದು, ಮುಖ್ಯಮಂತ್ರಿಯಾದ 41 ದಿನಗಳ ನಂತರ ಮಂಗಳವಾರ ತಮ್ಮ ಇಬ್ಬರು ಸದಸ್ಯರ ಸಂಪುಟಕ್ಕೆ 18 ಮಂತ್ರಿಗಳನ್ನು ಸೇರಿಸಿಕೊಂಡಿದ್ದ ಶಿಂಧೆ, ಭಾನುವಾರ ಖಾತೆಗಳನ್ನು ಹಂಚಿಕೆ ಮಾಡಿದರು. ಉಪಮುಖ್ಯಮಂತ್ರಿಯಾದ ಮಾಜಿ ಸಿಎಂ ಬಿಜೆಪಿಯ ದೇವೇಂದ್ರ ಫಡ್ನವಿಸ್​ ಮಹತ್ವದ ಗೃಹ ಖಾತೆ ಪಡೆದಿರುವುದಲ್ಲದೆ ಪಕ್ಷದ ಇತರರಿಗೂ ಪ್ರಮುಖ ಖಾತೆಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಮೇಲುಗೈ ಪಡೆದಿದ್ದಾರೆ.