Home latest ಕೋಳಿಯನ್ನು ತಿಂದ‌ ಬೆಕ್ಕು | 6 ಜನರ ವಿರುದ್ಧ ಪೊಲೀಸರು ಹಾಕಿದ್ರು ಕೇಸ್!!!

ಕೋಳಿಯನ್ನು ತಿಂದ‌ ಬೆಕ್ಕು | 6 ಜನರ ವಿರುದ್ಧ ಪೊಲೀಸರು ಹಾಕಿದ್ರು ಕೇಸ್!!!

Hindu neighbor gifts plot of land

Hindu neighbour gifts land to Muslim journalist

ಎಷ್ಟೊಂದು ಗಲಾಟೆಗಳು ಸಣ್ಣಪುಟ್ಟ ಕಾರಣಕ್ಕೆ ಆಗುತ್ತೆ. ಹಾಗೆನೇ ಇಲ್ಲೊಂದು ಕಡೆ ಕೋಳಿ ಬೆಕ್ಕಿನ ವಿಚಾರವಾಗಿ ಜಗಳ ಆಗಿದೆ. ನಂಬಲು ಕಷ್ಟ ಅಲ್ವಾ? ಆದರೆ ಇದು ನಿಜ. ಈ ಗಲಾಟೆ ಎಷ್ಟು ಜೋರಾಗಿತ್ತೆಂದರೆ ಪೊಲೀಸ್ ಠಾಣೆಗೆ ಹೋಗಿ, ಕೇಸ್ ಕೂಡಾ ಆಗಿದೆ. ಬನ್ನಿ ಈ ಘಟನೆ ಬಗ್ಗೆ ತಿಳಿದುಕೊಳ್ಳೋಣ.

ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಕೋಳಿ ಮತ್ತು ಬೆಕ್ಕು ವಿಚಾರವಾಗಿ ಅಕ್ಕ-ಪಕ್ಕದ ಮನೆಯವರ ನಡುವೆ ಜಗಳ ಏರ್ಪಟ್ಟಿದೆ. ಮೋಹನಪುರ ಗ್ರಾಮದ ನಿವಾಸಿ ಫರೀದಾ ತನ್ನ ಮನೆಯ ವಠಾರದಲ್ಲಿ ಕೋಳಿಗಳನ್ನು ಸಾಕಿದ್ದರು. ಅದೊಂದು ದಿನ ನೆರೆ ಮನೆಯಲ್ಲಿ ವಾಸವಾಗಿದ್ದ ನದೀಮ್ ಎಂಬುವವರು ಸಾಕಿದ್ದ ಬೆಕ್ಕು, ಫರೀದಾ ಅವರಿಗೆ ಸೇರಿದ ಕೋಳಿಯೊಂದನ್ನು ತಿಂದಿದೆ. ಇದು ಫರೀದಾ ಮತ್ತು ನದೀಮ್ ಅವರ ನಡುವೆ ಜಗಳಕ್ಕೆ ಕಾರಣವಾಗಿದೆ.

ಫರೀದಾ ತನ್ನ ಕೋಳಿಯನ್ನು ಬೆಕ್ಕು ತಿಂದಿದೆ ಎಂದು ಆರೋಪಿಸುತ್ತಿದ್ದಂತೆ ನದೀಮ್, ಆತನ ತಾಯಿ ಇನ್ನಾ, ಸಹೋದರಿಯರಾದ ಶಂಶುಲ್, ಶಬ್ದಮ್, ಶಾಬು ಮತ್ತು ಶಮಾ ಒಟ್ಟಾಗಿ ಸೇರಿಕೊಂಡು ಕೋಳಿ ಸಾಕಿದ್ದ ಮಹಿಳೆ ಫರೀದಾ ಜತೆಗೆ ಜಗಳವಾಡಿದ್ದಾರೆ. ಇದೀಗ ಈ ಜಗಳ ಬರೇಲಿಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ನದೀಮ್ ಸಾಕಿದ ಬೆಕ್ಕು ನನ್ನ ಕೋಳಿಯನ್ನು ತಿಂದಿದೆ. ಇದಾಗುತ್ತಿದ್ದಂತೆ ಆತನ ಮನೆಯವರು ಜಗಳವಾಡಿದ್ದಾರೆ. ನನ್ನ ಮಕ್ಕಳಾದ ಮುಜಾಹಿದ್ ಮತ್ತು ಶಾದಿಯಾ ಅವರನ್ನು ನಿಂದಿಸಿ, ಥಳಿಸಿದ್ದಾರೆ. ಜಗಳದಲ್ಲಿ ನನ್ನ ಸರ ಹಾಗೂ ಉಂಗುರ ಕಾಣೆಯಾಗಿದೆ ಫರಿದಾ ಆರೋಪಿಸಿದ್ದಾರೆ. ಈ ದೂರಿನ ಆಧಾರದಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.