Home News Navy Blue Peak Cap: ಬ್ರಿಟಿಷರ ಕಾಲದ ಟೋಪಿಗೆ ಟಾಟಾ! ಹೊಸ ಬಣ್ಣದ ಕ್ಯಾಪ್‌ಗೆ ಸರಕಾರ...

Navy Blue Peak Cap: ಬ್ರಿಟಿಷರ ಕಾಲದ ಟೋಪಿಗೆ ಟಾಟಾ! ಹೊಸ ಬಣ್ಣದ ಕ್ಯಾಪ್‌ಗೆ ಸರಕಾರ ಅಸ್ತು

Hindu neighbor gifts plot of land

Hindu neighbour gifts land to Muslim journalist

Navy Blue Peak Cap: ಬ್ರಿಟಿಷರ ಕಾಲದ ಟೋಪಿ ಬದಲಾವಣೆಗೆ ಕಾಲ ಕೂಡಿ ಬಂದಿದೆ. ಹಲವು ವರ್ಷಗಳಿಂದ ಪೊಲೀಸ್‌ ಸಿಬ್ಬಂದಿ ಟೋಪಿ ಬದಲಾವಣೆ ಕುರಿತು ಬೇಡಿಕೆಯಿಡುತ್ತಲೇ ಬಂದಿದ್ದರು. ಇದೀಗ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಹಳೆಯ ಮಾದರಿಯ ಸ್ಪೋಚ್‌ ಹ್ಯಾಟ್‌ ಬದಲಿಗೆ ರಾಜ್ಯ ಸರಕಾರ ಇದೀಗ ಅಧಿಕೃತವಾಗಿ ಹೆಡ್‌ಕಾನ್ಸ್ಟೇಬಲ್‌ ಮತ್ತು ಕಾನ್‌ಸ್ಟೇಬಲ್‌ಗಳ ಕ್ಯಾಪ್‌ ಬದಲಾವಣೆಗೆ ಅನುಮತಿ ನೀಡಿದೆ.

ನೇವಿ ಬ್ಲೂ ಪೀಕ್‌ ಕ್ಯಾಪ್‌ಗಳನ್ನು ವಿತರಿಸಲು ಸಹಮತಿ ನೀಡಿದ ರಾಜ್ಯ ಸರಕಾರ ಇಂದು (ಆಗಸ್ಟ್‌ 07) ಕೆಎಸ್‌ಆರ್‌ಪಿ ಎಡಿಜಿಪಿ ಅಧ್ಯಕ್ಷತೆಯನ್ನು ಸಭೆ ನಡೆಯಲಿದೆ.

ಸ್ಲೋಚ್‌ ಹ್ಯಾಟ್‌ ಬದಲಾವಣೆಗೆ ಕಾರಣ ಇಲ್ಲಿದೆ:
ಈ ಹ್ಯಾಟ್‌ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕುರಿತು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಪ್ರತಿಭಟನೆ, ರ್ಯಾಲಿ, ಅಪರಾಧಿಗಳನ್ನು ಬೆನ್ನತ್ತುವ ಸಂದರ್ಭದಲ್ಲಿ ಸ್ಲೋಚ್‌ ಹ್ಯಾಟ್‌ ಧರಿಸಿ ಕರ್ತವ್ಯ ನಿರ್ವಹಣೆ ಮಾಡುವುದು ಕಿರಿಕಿರಿಯುಂಟು ಮಾಡುತ್ತಿದ್ದು, ಹ್ಯಾಟ್‌ ಕೆಳಗೆ ಬಿದ್ದರೆ ಇಲಾಖೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಗಟ್ಟಿಯಾಗಿ ನಿಲ್ಲುವಂತಹ ಎಲಾಸ್ಟಿಕ್‌ ಮಾದರಿಯ ಕ್ಯಾಪ್‌ಗಳನ್ನು ನೀಡಿದರೆ ಉತ್ತಮ ಎನ್ನುವುದು ಪೊಲೀಸ್‌ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿತ್ತು.