Home latest Cow slaughter: ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ಹುಷಾರ್: ತಿರುಗಿ ಬಿದ್ದ ಸಾಧು...

Cow slaughter: ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ಹುಷಾರ್: ತಿರುಗಿ ಬಿದ್ದ ಸಾಧು ಸಂತರ ದಂಡು !

Cow slaughter
Image source: Facebook

Hindu neighbor gifts plot of land

Hindu neighbour gifts land to Muslim journalist

Cow slaughter: ಗೋವು ಭಾರತೀಯ ಸಂಸ್ಕೃತಿಯ ಪ್ರತೀಕ. ಇದರ ಹತ್ಯೆ (Cow slaughter) ನ್ಯಾಯವಲ್ಲ. ಧರ್ಮ, ಸಂಸ್ಕೃತಿಯನ್ನು ಕಾಪಾಡುವ ಉದ್ದೇಶದಿಂದ, ವಿಶ್ವ ಹಿಂದು ಪರಿಷತ್ (Vishwa Hindu Parishad) ಮಲ್ಲೇಶ್ವರದ ಯದುಗಿರಿ ಯತಿರಾಜ ಮಠದಲ್ಲಿ ಸಮಾವೇಶವನ್ನು ನಡೆಸಲಾಗಿದೆ.

ಈಗಾಗಲೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಗೋಹತ್ಯೆ ನಿಷೇಧ ಕಾಯಿದೆ (Prevention of Cow Slaughter Act) ಹಾಗೂ ಮತಾಂತರ ನಿಷೇಧ ಕಾಯಿದೆ (Anti conversion law) ಪರವಾಗಿ ಈಗ ರಾಜ್ಯದ ವಿವಿಧ ಮಠದ ಸಾಧು-ಸಂತರು ನಿಂತಿದ್ದಾರೆ. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ರದ್ದು ಮಾಡುವ ಪ್ರಸ್ತಾಪ ಮಾಡಿದ್ದಕ್ಕೆ ತೀವ್ರ ಆಕ್ರೋಶಗೊಂಡಿರುವ ಸ್ವಾಮೀಜಿಗಳು ಬೆಂಗಳೂರು ಹಾಗೂ ತುಮಕೂರಿನಲ್ಲಿ ಪ್ರತ್ಯೇಕವಾಗಿ ಸಮಾವೇಶ ನಡೆಸಿ, ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

ಸದ್ಯ ಸಮಾವೇಶ ಮೂಲಕ ಸಮಾಜದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಬಾರದು ಎಂಬ ನಿರ್ಣಯವನ್ನು ಅಂಗೀಕಾರ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಲುಕೋಟೆ ಯದುಗಿರಿ ಯತಿರಾಜ ಸ್ವಾಮೀಜಿ, ಗೋಹತ್ಯೆ ನಿಷೇಧ ಮಾಡಬೇಕು ಎನ್ನುವುದು ಯಾವುದೇ ರಾಜಕೀಯ ವಿಷಯ ಅಲ್ಲ. ಮತಾಂತರ ನಿಷೇಧವೂ ಅಲ್ಲ. ಬದಲಾಗಿ ಹಿಂದು ಧರ್ಮ, ಸಂಸ್ಕೃತಿ, ಆಚಾರ ವಿಚಾರ ಕಾಪಾಡಬೇಕು ಎಂಬ ವಿಚಾರ ನಮ್ಮದು. ಗೋಹತ್ಯೆ ನಿಷೇಧ ಸಡಿಲಿಕೆ ಆಗಬಾರದು ಎಂದು ಸಂತರು ಸಂದೇಶ ಕೊಟ್ಟಿದ್ದಾರೆ.

ದುರ್ಬಲವಾದ ಕಾನೂನನ್ನು ಬಿಜೆಪಿ ಸರ್ಕಾರ ಬಲಪಡಿಸಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ದುರ್ಬಲಗೊಳಿಸಬಾರದು. ಲವ್ ಜಿಹಾದ್‌ಗೆ ಅವಕಾಶ ನೀಡಬಾರದು ಎಂಬ ಸಂದೇಶವನ್ನು ಕೊಡಲಾಗಿದೆ. ವ್ಯಕ್ತಿಯ ದೌರ್ಬಲ್ಯಗಳನ್ನು ಬಳಕೆ ಮಾಡಿಕೊಂಡು ಮತಾಂತರ ಮಾಡಬಾರದು ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ ಹೇಳಿದರು.

ಮತಾಂತರ ಆಗಬಾರದು ಎಂದು ನಾವು ಹೇಳುವುದಿಲ್ಲ. ಆದರೆ, ಈ ಮತಾಂತರ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು, ಯಾವುದೇ ಕಾನೂನುನನ್ನು ಸಡಿಲ ಮಾಡಬಾರದು ಎಂದು ನಿರ್ಣಯ ಮಾಡಿದ್ದಾರೆ. ಇದರ ಕುರಿತು ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ನಮ್ಮ ಕಣಕಣದಲ್ಲೂ ಸ್ಪಷ್ಟತೆ ಇದೆ ಎಂದು
ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.

ಸದ್ಯ ಗೋಹತ್ಯೆ ನಿಷೇಧ ಕಾಯಿದೆ ಹಾಗೂ ಮತಾಂತರ ನಿಷೇಧ ಕಾಯಿದೆ ಪರ ತುಮಕೂರಿನಲ್ಲಿ ಸಂತ ಸಮಾವೇಶ ನಡೆದಿದೆ. ಅಲ್ಲದೇ ತುಮಕೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ಸಂತ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶದಲ್ಲಿ 12 ಮಠಗಳ ಸಾಧು ಸಂತರು ಭಾಗಿಯಾಗಿದ್ದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ನಂಬಿದ ಜನರಿಗೆ ಮೋಸವಾಗಿದೆ . ಸರ್ಕಾರ ಸ್ಥಾಪಿತವಾಗಿ ಎರಡೇ ತಿಂಗಳಲ್ಲಿ ಜನರು ಗ್ಯಾರಂಟಿ ನಂಬಿ, ನಾವು ಮೋಸ ಹೋದೆವು ಎಂದು ಜನರು ಹೇಳುತ್ತಿದ್ದಾರೆ.

ಗೊಲ್ಲಳ್ಳಿ ಮಠದ ವಿಭವ ವಿದ್ಯಾಶಂಕರ ಶ್ರೀ ಮಾತನಾಡಿ, ನಮ್ಮ ದೇಶದಲ್ಲಿ ತಾಯಿಗಿಂತ ಹೆಚ್ಚಾಗಿ ಗೋವನ್ನು ಪೂಜಿಸುತ್ತೇವೆ. ಅವಳ ಹತ್ಯೆ ಸಹಿಸಲು ಆಗೋದಿಲ್ಲ. ಆದ ಕಾರಣ ಗೋಹತ್ಯೆ ನಿಷೇಧ ಕಾಯಿದೆ ಮುಂದುವರಿಯಬೇಕು. ಗೋ ರಕ್ಷಣೆ ಆಗಬೇಕು. ಮತಾಂತರ ನಿರ್ಬಂಧ ಕಾಯಿದೆ ಕೂಡ ಮುಂದುವರಿಯಬೇಕು. ಲವ್ ಜಿಹಾದ್ ಕೂಡ ಒಂದು ಪಿಡುಗಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸೈಬರ್ ಅಪರಾಧ ತಡೆಗೆ ಮೈಸೂರು ಮಹಾರಾಜ: ಸೈಬರ್ ತಡೆಗೆ ರಾಯಭಾರಿಯಾಗಲು ಮುಂದೆ ಬಂದ ಯದುವೀರ್ ಒಡೆಯರ್ !