Home News Mysore: ಮೆಡಿಸಿನ್ ಕೊಳ್ಳಲು ಮೆಡಿಕಲ್ ಗೆ ಬಂದ – ಆಲ್ಲೇ ಕುಸಿದು ಬಿದ್ದು ಪ್ರಾಣವನ್ನೂ ಬಿಟ್ಟ...

Mysore: ಮೆಡಿಸಿನ್ ಕೊಳ್ಳಲು ಮೆಡಿಕಲ್ ಗೆ ಬಂದ – ಆಲ್ಲೇ ಕುಸಿದು ಬಿದ್ದು ಪ್ರಾಣವನ್ನೂ ಬಿಟ್ಟ !!

Mysore

Hindu neighbor gifts plot of land

Hindu neighbour gifts land to Muslim journalist

Mysore: ಹಲವು ಸಲ ನಮಗೆ ಅನಾರೋಗ್ಯವಾದಾಗ ಅಥವಾ ಯಾವುದಾದರೂ ಆರೋಗ್ಯ ಸಮಸ್ಯೆಗಳು ಕಂಡಾಗ ಇಲ್ಲ ಪ್ರಾಣವೇ ಹೋಗುತ್ತದೆ ಅನಿಸಿದ ಸಂದರ್ಭದಲ್ಲಿ ಸೇವಿಸಲು ಔಷಧಿಗಳು ಇರುವುದಿಲ್ಲ. ಆದರೆ ಇಲ್ಲೊಬ್ಬ ಆಸ್ವಾಮಿ ಔಷಧಿ ಕೊಳ್ಳಲೆಂದು ಮೆಡಿಕಲ್ ಶಾಪ್ ಹೋಗಿ ಅಲ್ಲೇ ಪ್ರಾಣವನ್ನು ಬಿಟ್ಟಿರುವಂತ ಅಪರೂಪದ ಹಾಗೂ ಅಘಾತಕಾರಿ ಘಟನೆಯೊಂದು ನಡೆದಿದೆ.

ಹೌದು, ಔಷಧಿ ಕೊಳ್ಳಲು ಮೆಡಿಕಲ್‌ ಸ್ಟೋರ್‌ಗೆ ಹೋಗಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ (Heart Attack) ಕುಸಿದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ (Mysore) ನಡೆದಿದೆ.

ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ಜಗದೀಶ್ (38) ಎಂಬುವವರು ಉದಯಗಿರಿಯ (Udayagiri) ಮೆಡಿಕಲ್ ಸ್ಟೋರ್‌ಗೆ (Medical Store) ಔಷಧಿ ಕೊಳ್ಳಲು ಹೋಗಿದ್ದಾರೆ. ಈ ವೇಳೆ ಏಕಾಏಕಿ ಹೃದಯಾಘಾತವಾಗಿ ಅಲ್ಲೇ ಕುಸಿದು ಬಿದ್ದಿದ್ದು ಪ್ರಾಣಬಿಟ್ಟಿದ್ದಾರೆ. ಇನ್ನು ತಕ್ಷಣ ಮೆಡಿಕಲ್ ಸಿಬ್ಬಂದಿ ಜಗದೀಶ್ ಕಡೆಗೆ ಓಡಿ ಹೋಗಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಜಗದೀಶ್ ಪ್ರಾಣಪಕ್ಷಿ ಹಾರಿಹೋಗಿರುವುದು ತಿಳಿದುಬಂದಿದೆ.

ಸದ್ಯ ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಜಗದೀಶ್ ಮೆಡಿಕಲ್ ಸ್ಟೋರ್‌ಗೆ ಔಷಧಿ ಕೊಳ್ಳಲು ಬಂದಾಗ ಜಗದೀಶ್ ನೋವಿನ ಹಿನ್ನೆಲೆ ತಮ್ಮ ಎದೆಗೆ ಕೈಹಿಡಿದುಕೊಂಡು ಬಂದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಮೆಡಿಕಲ್ ಸಿಬ್ಬಂದಿ ಜಗದೀಶ್ ಅವರನ್ನು ವಿಚಾರಿಸುತ್ತಿದ್ದ ವೇಳೆಯೇ ಏಕಾಏಕಿ ಕುಸಿದು ಬಿದ್ದಿರೋದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

 

ಇದನ್ನು ಓದಿ: ನಂದು ಎಲ್ಲೆಲ್ಲಿ, ಏನೇನು, ಹೇಗೇಗಿದೆ ಅನ್ನೋದು ಗೊತ್ತಾಗೋದೆ ಚಡ್ಡಿ, ಬ್ರಾ ಹಾಕಿದ್ಮೇಲಿ – ಶಾಕಿಂಗ್ ಹೇಳಿಕೆ ನೀಡಿದ ಖ್ಯಾತ ನಟಿ