Home News Murder: ಪತ್ನಿಯನ್ನು ಕೊಂದು ನಾಪತ್ತೆ ಕಥೆ ಕಟ್ಟಿದ ಪತಿ!! ಶ್ವಾನಗಳಿಂದ ಬಯಲಾಯ್ತು ಮಹಿಳೆಯ ಕೊಲೆ ಪ್ರಕರಣ

Murder: ಪತ್ನಿಯನ್ನು ಕೊಂದು ನಾಪತ್ತೆ ಕಥೆ ಕಟ್ಟಿದ ಪತಿ!! ಶ್ವಾನಗಳಿಂದ ಬಯಲಾಯ್ತು ಮಹಿಳೆಯ ಕೊಲೆ ಪ್ರಕರಣ

Murder

Hindu neighbor gifts plot of land

Hindu neighbour gifts land to Muslim journalist

ಸಕಲೇಶಪುರ: ಪತ್ನಿಯನ್ನು ಕೊಂದು ಮಣ್ಣಿನಲ್ಲಿ ಹೂತು ಹಾಕಿ ನಾಪತ್ತೆ ಕಥೆ ಕಟ್ಟಿದ ಪ್ರಕರಣವೊಂದು ಎರಡು ತಿಂಗಳ ಬಳಿಕ ಬಯಲಾಗಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಮಹಿಳೆಯನ್ನು ಜಿಲ್ಲೆಯ ಬಾಗೆ ಗ್ರಾಮದ ಪವನ್ ಕುಮಾರ್ ಎಂಬಾತನ ಪತ್ನಿ ಶಾಂತಿವಾಸು(29) ಎಂದು ಗುರುತಿಸಲಾಗಿದ್ದು, ಕಳೆದ ಎರಡು ತಿಂಗಳುಗಳ ಹಿಂದೆ ಆಕೆ ನಾಪತ್ತೆಯಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕೆಲ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪವನ್ ಬಳಿಕ ಮಹಿಳೆಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಘಟನೆ ನಡೆದ ದಿನವೂ ಇಬ್ಬರ ಮಧ್ಯೆ ಜಗಳವಾಗಿದ್ದು ಬಳಿಕ ಪವನ್ ಮಹಿಳೆಯನ್ನು ಕೊಂದು ಮಣ್ಣಿನಲ್ಲಿ ಹೂತು ಹಾಕಿ ನಾಪತ್ತೆಯ ಕಥೆ ಕಟ್ಟಿದಲ್ಲದೇ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದ.

ಆದರೆ ಒಂದೆರಡು ದಿನಗಳ ಹಿಂದೆ ಶ್ವಾನಗಳು ಆತನ ಮನೆ ಪಕ್ಕದಲ್ಲೇ ಮಣ್ಣಿನಡಿಯಿಂದ ಮೂಳೆಗಳನ್ನು ಹೊರ ತೆಗೆದಿದ್ದು, ಬಳಿಕ ಗುಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೂಡಲೇ ಸ್ಥಳಕ್ಕಾಗಾಮಿಸಿದ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಇಡೀ ಪ್ರಕರಣ ಬಿಚ್ಚಿಟ್ಟಿದ್ದು, ಆರೋಪಿಯ ಬಂಧನದ ಬಳಿಕ ಕೊಲೆ ಪ್ರಕರಣ ಬಯಲಾಗಿದೆ.

 

ಇದನ್ನು ಓದಿ: Traffic Rules: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರಿಗೆ ಬಿಗ್ ಶಾಕ್ – ಯಾವ ತಪ್ಪಿಗೆ ಎಷ್ಟು ಫೈನ್ ಅನ್ನೋ ಕಂಪ್ಲೀಟ್ ಲಿಸ್ಟ್ !