Home News Multiplex: ಮಲ್ಟಿಪ್ಲೆಕ್ಸ್‌ಗಳು ಟಿಕೆಟ್‌ ಮಾರಾಟದ ಲೆಕ್ಕ ಇಡಬೇಕು-ಹೈಕೋರ್ಟ್‌ ಸೂಚನೆ

Multiplex: ಮಲ್ಟಿಪ್ಲೆಕ್ಸ್‌ಗಳು ಟಿಕೆಟ್‌ ಮಾರಾಟದ ಲೆಕ್ಕ ಇಡಬೇಕು-ಹೈಕೋರ್ಟ್‌ ಸೂಚನೆ

Cinema ticket price

Hindu neighbor gifts plot of land

Hindu neighbour gifts land to Muslim journalist

Multiplex: ಎಲ್ಲಾ ಮಲ್ಟಿಫ್ಲೆಕ್ಸ್‌ಗಳು ಟಿಕೆಟ್‌ ಮಾರಾಟದ ಲೆಕ್ಕ ಇಡಬೇಕು. ಒಂದೊಮ್ಮೆ ಸರಕಾರದ ಆದೇಶ ಎತ್ತಿ ಹಿಡಿದರೆ ಆ ಹಣವನ್ನು ಟಿಕೆಟ್‌ ಖರೀದಿದಾರರಿಗೆ ಮರಳಿಸಬೇಕು ಎಂದು ಹೈಕೋರ್ಟ್‌ ಆದೇಶ ನೀಡಿದೆ.

ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳ ಟಿಕೆಟ್‌ ದರಕ್ಕೆ ಗರಿಷ್ಠ ರೂ.200 ಮಿತಿ ಹೇರಿ ರಾಜ್ಯ ಗೃಹ ಇಲಾಖೆ ಆದೇಶ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ಹೈಕೋರ್ಟ್‌ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದೇಶಕ್ಕೆ ಏಕಸದಸ್ಯ ಪೀಠ ತಡೆ ನೀಡಿತ್ತು. ಈ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಹೊಂಬಾಳೆ ಸಿನಿಮಾಸ್‌ ಪರ ವಕೀಲ ಧ್ಯಾನ್‌ ಚಿನ್ನಪ್ಪ ವಾದ ಮಂಡನೆ ಮಾಡಿದರು. ಅರ್ಜಿದಾರರ ಪರ ವಕೀಲ ಲಕ್ಷ್ಮೀನಾರಾಯಣ್‌ ವಾದ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ. ಎಲ್ಲಾ ಮಲ್ಟಿಫ್ಲೆಕ್ಸ್‌ಗಳು ಟಿಕೆಟ್‌ ಮಾರಾಟ ಮಾಡಿ ಸಂಗ್ರಹಿಸುವ ಹಣದ ಲೆಕ್ಕವನ್ನು ನಿರ್ವಹಿಸಬೇಕು. ಒಂದೊಮ್ಮೆ ನಿಯಮವನ್ನು ಪೀಠ ಎತ್ತಿ ಹಿಡಿದರೆ ಆ ಹಣವನ್ನು ಟಿಕೆಟ್‌ ಖರೀದಿದಾರರಿಗೆ ಮರಳಿಸಬೇಕು ಎಂದು ಆದೇಶ ನೀಡಿದೆ.

ಇದನ್ನೂ ಓದಿ;Corporation Board: 4 ನಿಗಮ ಮಂಡಳಿಗೆ ಪದಾಧಿಕಾರಿಗಳ ನೇಮಕ: ಯಾರಿಗೆ ಯಾವ ಜವಾಬ್ದಾರಿ?

ನಗದಿನಲ್ಲಿ ಖರೀದಿ ಮಾಡಿದ ಟಿಕೆಟ್‌ ಹಣವನ್ನು ನಿರ್ದಿಷ್ಟ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆ ಮಾಡಬಹುದು. ಇದನ್ನು ಸರಕಾರ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಮಲ್ಟಿಫ್ಲೆಕ್ಸ್‌ಗಳು ಸಿನಿಮಾ ಆರಂಭ ಆಗುವುದಕ್ಕೂ ಮುನ್ನ ಜನರಿಗೆ ತಿಳಿಸಬೇಕು ಎಂದು ಕೋರ್ಟ್‌ ಹೇಳಿದೆ.