

ಓದುವುದರಲ್ಲಿ ತನ್ನ ಮಗನಿಗೆ ಸ್ಪರ್ಧೆ ನೀಡುತ್ತಿದ್ದ ಸಹಪಾಠಿಗೆ ಮಹಿಳೆಯೊಬ್ಬಳು ವಿಷ ನೀಡಿ ಹತ್ಯೆಗೈದಿರುವ ಕಳವಳಕಾರಿ ಘಟನೆ ನಡೆದಿದೆ
ಆ ಬಾಲಕ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ಆತ ಓದುವುದರಲ್ಲಿ ಮುಂದಿದ್ದ. ಅಂದು ಬಾಲಾ ಮಣಿಕಂದನ್ ಎಂಬ ಈ ವಿದ್ಯಾರ್ಥಿ ಮನೆಗೆ ಹಿಂದುರುಗಿದಾಗ ತೂಕಡಿಸಲು ಆರಂಭಿಸಿದ..ಆಗ ಆತನ ತಾಯಿ ಶಾಲೆಯಲ್ಲಿ ಏನಾದರೂ ಸೇವಿಸಿದ್ದೀಯಾ ಎಂದು ತಾಯಿ ಕೇಳಿದಾಗ, ವಾಚ್‍ಮ್ಯಾನ್ ತನಗೆ ಜ್ಯೂಸ್ ನೀಡಿದ್ದು, ಅದನ್ನು ಕುಡಿದ ನಂತರ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದಾನೆ.
ಕೂಡಲೇ ಮಣಿಕಂದನ್ ಬಾಲನನ್ನು ಕಾರೈಕ್ಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಾಚ್‍ಮ್ಯಾನ್ ಏಕೆ ಜ್ಯೂಸ್ ನೀಡಿರಬಹುದು ಎಂದು ಪೋಷಕರು ಮತ್ತು ಆತನ ಸಂಬಂಧಿಕರು ವಿಚಾರಿಸಿದಾಗ ಮಹಿಳೆಯೊಬ್ಬರು ತನ್ನ ಬಳಿಗೆ ಬಂದು ಎರಡು ಜ್ಯೂಸ್ ಬಾಟಲಿಗಳನ್ನು ನೀಡಿ, ಬಾಲಾ ಅವರ ಮನೆಯವರು ಕಳುಹಿಸಿದ್ದಾರೆ ಎಂದು ತಿಳಿಸಿರುವುದಾಗಿ ಹೇಳಿದ್ದಾನೆ.
ಚಿಕಿತ್ಸೆ ಫಲಾಕಾರಿಯಾಗದೇ ಶನಿವಾರ ರಾತ್ರಿ ಬಾಲ ಮೃತಪಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೃತ ವಿದ್ಯಾರ್ಥಿಯ ಪೋಷಕರು ಹಾಗೂ ಸಂಬಂಧಿಕರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬರು ವಾಚ್‍ಮ್ಯಾನ್‍ಗೆ ಜ್ಯೂಸ್ ನೀಡುತ್ತಿರುವುದು ಕಂಡುಬಂದಿದೆ. ನಂತರ ಆಕೆಯನ್ನು ಬಾಲನ ಸಹಪಾಠಿ ಅರುಲ್ ಮೇರಿಯ ತಾಯಿ ಸಗಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದ ಪೊಲೀಸರು ಸಗಾಯರಾಣಿ ವಿಕ್ಟೋರಿಯಾಳನ್ನು ಕೂಡಲೇ ಬಂಧಿಸಿದ್ದಾರೆ.
ವಿಚಾರಣೆಯ ವೇಳೆ ಆಘಾತಕಾರಿ ಅಂಶ ಬಯಲಾಗಿದೆ. ಆಕೆಯ ತನ್ನ ಮಗ ಅರುಲ್ ಮೇರಿ ಮತ್ತು ಬಾಲಾ ನಡುವೆ ಅಂಕಗಳಿಸುವ ವಿಚಾರವಾಗಿ ಮತ್ತು ತರಗತಿಯಲ್ಲಿ ರ್ಯಾಂಕ್ ಪಡೆಯಲು ಪೈಪೋಟಿ ಇತ್ತು. ಇದರಿಂದಾಗಿ ಶಾಲೆಯಲ್ಲಿ ಆಗಾಗ ಸಣ್ಣ-ಪುಟ್ಟ ಜಗಳವಾಗುತ್ತಿತ್ತು. ಇದರಿಂದ ಅಸಮಾಧಾನಗೊಂಡು, ಆತನನ್ನು ಕಂಡರೆ ತನ್ನ. ಮಗನೇ ಪ್ರತಿಬಾರಿ ಕ್ಲಾಸಲ್ಲಿ ಫಸ್ಟ್ ಬರಬಹುದು ಎಂದು ಬಗೆದು ಈ ಕೃತ್ಯ ವೆಸಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.













