Home News ಹೆತ್ತಬ್ಬೆಯ ಅಗಲಿಕೆಯನ್ನು ಸಹಿಸಲಾರದೆ ಸಮಾಧಿಯನ್ನೇ ಅಗೆದು ಹೆಣವನ್ನು ಮನೆಯಲ್ಲಿ ಇರಿಸಿಕೊಂಡ ಮಗ !!

ಹೆತ್ತಬ್ಬೆಯ ಅಗಲಿಕೆಯನ್ನು ಸಹಿಸಲಾರದೆ ಸಮಾಧಿಯನ್ನೇ ಅಗೆದು ಹೆಣವನ್ನು ಮನೆಯಲ್ಲಿ ಇರಿಸಿಕೊಂಡ ಮಗ !!

Hindu neighbor gifts plot of land

Hindu neighbour gifts land to Muslim journalist

ಕಣ್ಣಿಗೆ ಕಾಣುವ ದೈವ ಸ್ವರೂಪವೇ ತಾಯಿ. ಇಂತಹ ತಾಯಿಯ ಅಗಲಿಕೆಯನ್ನು ತಡೆದುಕೊಳ್ಳಲಾಗದ ಮಗನೊಬ್ಬ ಏನು ಮಾಡಿದ್ದಾನೆ ಗೊತ್ತಾ?? ತನ್ನ ತಾಯಿಯ ಸಮಾಧಿಯನ್ನು ಅಗೆದು ಶವವನ್ನು ಮನೆಯಲ್ಲಿಟ್ಟಿಕೊಂಡಿದ್ದಾನೆ. ಇದೀಗ ಆತನನ್ನು ಚೆನ್ನೈಯ ಕುನ್ನಂ ಪೊಲೀಸರು ಬಂಧಿಸಿದ್ದಾರೆ.

ವಿ ಬಾಲಮುರುಗನ್ (38) ಬಂದಿದ್ದ ಮಗ. ಈತ ಕುನ್ನಂ ಸಮೀಪದ ಪರವೈ ಗ್ರಾಮದ ನಿವಾಸಿಯಾಗಿದ್ದು, ತನ್ನ ತಾಯಿಯ ಸಮಾಧಿಯನ್ನು ರಹಸ್ಯವಾಗಿ ಅಗೆದು ಆಕೆಯ ಶವವನ್ನು ಮನೆಗೆ ತಂದು ರಕ್ಷಿಸಿದ್ದಾನೆ ಎಂದು ವರದಿಯಾಗಿದೆ. ಬಾಲಮುರುಗನ್ ತಾಯಿ ದೀರ್ಘಕಾಲದ ಅನಾರೋಗ್ಯದಿಂದ ಹತ್ತು ತಿಂಗಳ ಹಿಂದೆ ನಿಧನರಾಗಿದ್ದರೆ ತಂದೆ ಹತ್ತು ವರ್ಷಗಳ ಹಿಂದೆ ನಿಧನರಾಗಿದ್ದರು.

ಮುರುಗನ್ ಅವಿವಾಹಿತ ಮತ್ತು ನಿರುದ್ಯೋಗಿಯಾಗಿರುವುದರಿಂದ ಅವನ ಪೋಷಕರು ಅವನನ್ನು ನೋಡಿಕೊಳ್ಳುತ್ತಿದ್ದರು. ಪೋಷಕರ ನಿಧನದ ನಂತರ ಅವನು ಆಗಾಗ ಗ್ರಾಮದಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಯೊಂದಿಗೆ ಮಾತನಾಡುತ್ತಿದ್ದನು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮಾನಸಿಕವಾಗಿ ಅಸ್ವಸ್ಥನಾಗಿರುವ ಮುರುಗನ್ ಅವನು ಈ ಹಿಂದೆ ತನ್ನ ತಾಯಿಯ ಶವವನ್ನು ಹೊರತೆಗೆಯಲು ಪ್ರಯತ್ನಿಸಿದ್ದ. ಆದರೆ ಸ್ಥಳೀಯರು ಮಧ್ಯಪ್ರವೇಶಿಸಿ ಅವನನ್ನು ಸಮಾಧಿ ಸ್ಥಳದಲ್ಲಿ ತಡೆದಿದ್ದರು.

ಈಗ ಆತನ ಸಂಬಂಧಿಕರೊಬ್ಬರು ರಾತ್ರಿ ಊಟ ಕೊಡಲು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅವನ ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ಸಂಬಂಧಿಕರಿಗೆ ಅನುಮಾನ ಬಂದಿದ್ದು, ಕುನ್ನಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾವು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕುನ್ನಂ ಪೊಲೀಸರು ತಿಳಿಸಿದ್ದಾರೆ.