Home News Session: ಸಂಸತ್ತಿನ ಮಳೆಗಾಲದ ಅಧಿವೇಶ – ಕೇಂದ್ರ ಸರ್ಕಾರ ಯಾವ ಮಸೂದೆಗಳನ್ನು ಮಂಡಿಸಬಹುದು?

Session: ಸಂಸತ್ತಿನ ಮಳೆಗಾಲದ ಅಧಿವೇಶ – ಕೇಂದ್ರ ಸರ್ಕಾರ ಯಾವ ಮಸೂದೆಗಳನ್ನು ಮಂಡಿಸಬಹುದು?

Hindu neighbor gifts plot of land

Hindu neighbour gifts land to Muslim journalist

Session: ಜುಲೈ 21ರಿಂದ ಪ್ರಾರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹಲವಾರು ಮಸೂದೆಗಳನ್ನು ಮಂಡಿಸಲಿದೆ. ಈ ಬಾರಿ ಮೋದಿ ಸರ್ಕಾರ ಸುಮಾರು 16 ಹೊಸ ಮಸೂದೆಗಳನ್ನು ಸದನದಲ್ಲಿ ಮಂಡಿಸಬಹುದು, ಅವುಗಳಲ್ಲಿ 8 ಹೊಸ ಮಸೂದೆಗಳಾಗಿದ್ದು, 8 ಹಳೆಯ ಮಸೂದೆಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಇಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಳೆಗಾಲದ ಅಧಿವೇಶನವನ್ನು ಘೋಷಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಳೆಗಾಲದ ಅಧಿವೇಶನವನ್ನು ಕರೆಯುವ ಪ್ರಸ್ತಾಪವನ್ನು ಸಹ ಅನುಮೋದಿಸಿದ್ದಾರೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಇರುವುದರಿಂದ ಆಗಸ್ಟ್ 13 ಮತ್ತು 14 ರಂದು ಸದನವು ನಡೆಯುವುದಿಲ್ಲ. ಮಳೆಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು, ಜುಲೈ 20 ರಂದು ಬೆಳಿಗ್ಗೆ 11 ಗಂಟೆಗೆ ಸರ್ವಪಕ್ಷ ಸಭೆ ನಡೆಯಲಿದ್ದು, ಇದರಲ್ಲಿ ಅಧಿವೇಶನದ ಕಾರ್ಯಸೂಚಿಗಳು ಮತ್ತು ಮಸೂದೆಗಳನ್ನು ಚರ್ಚಿಸಲಾಗುವುದು.

ಸಾರ್ವಜನಿಕ ಟ್ರಸ್ಟ್ ತಿದ್ದುಪಡಿ ಮಸೂದೆ 2025, ವ್ಯಾಪಾರಿ ಸಾಗಣೆ ಮಸೂದೆ, ಭಾರತೀಯ ಬಂದರು ಮಸೂದೆ 2025, ಖನಿಜಗಳು ಮತ್ತು ಗಣಿಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, ರಾಷ್ಟ್ರೀಯ ಡೋಪಿಂಗ್ ವಿರೋಧಿ ತಿದ್ದುಪಡಿ ಮಸೂದೆ, ಮಣಿಪುರ ಜಿಎಸ್‌ಟಿ ಮಸೂದೆ ಮತ್ತು ತೆರಿಗೆ ತಿದ್ದುಪಡಿ ಮಸೂದೆ ಸೇರಿವೆ.

ಇದನ್ನೂ ಓದಿ: Praveen Nettar: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ತನಿಖೆ ಚುರುಕು – ಎನ್ಐಎ ಅಧಿಕಾರಿಗಳಿಂದ ರೆಹಮಾನ್ ಕಾರ್-ಬೈಕ್ ವಶ