

Monkey Viral Video: ಕೋತಿಗಳು ಮಾಡುವ ಚೇಷ್ಟೆ ಒಂದಲ್ಲ ಎರಡಲ್ಲಾ. ಅವುಗಳ ಚೇಷ್ಟೆಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Monkey Viral Video) ಆಗುತ್ತಿರುತ್ತವೆ. ಅಂತೆಯೇ ಇಲ್ಲೊಂದು ಕೋತಿ ವಕೀಲರ ಕಚೇರಿಗೆ ಬಂದು ಅಲ್ಲಿನ ಮೇಜಿನ ಮೇಲೆ ಕುಳಿತು ಒಂದೊಂದೆ ದಾಖಲೆ ಪತ್ರವನ್ನು ಪರಿಶೀಲಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿದೆ.
ಹೌದು, ಉತ್ತರ ಪ್ರದೇಶದ ಸಹ್ರಾನ್‌ಪುರದ ವಕೀಲರ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ವಕೀಲರ ಕಚೇರಿಗೆ ಬಂದ ಕೋತಿಯೊಂದು ಅಲ್ಲಿ ಮೇಜಿನ ಮೇಲೆ ಕುಳಿತು, ತಾನೊಬ್ಬ ವಕೀಲನಂತೆ ಅನುಕರಿಸಿ, ಒಂದೊಂದೇ ಕಡತವನ್ನು ತೆಗೆದು ಪುಟ ತಿರುಚಿ ತಿರುಚಿ ನೋಡುತ್ತಾ ಪಕ್ಕಕ್ಕಿಡುವ ರೀತಿ ನೋಡಿದರೆ ಈ ಕೋತಿಗೆ ನಿಜವಾಗಿಯೂ ಕಚೇರಿಯಲ್ಲಿ ಕೆಲಸ ನೀಡಿದ್ದಾರೆ ಅನಿಸುತ್ತದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಮೇಜಿನ ಮೇಲೆ ಕೆಲವರು ಕಡತ ಪತ್ರ ನೋಡುತ್ತಿದ್ದಾರೆ. ಅದೇ ಮೇಜಿನ ಪಕ್ಕದಲ್ಲಿ ಕೋತಿಯೊಂದು ಕುಳಿತಿದ್ದು, ತಾನು ಕೂಡ ವಕೀಲರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಂಬಂತೆ ಪೋಸ್ ನೀಡುತ್ತಿದ್ದು, ಕಡತಗಳನ್ನು ತೆಗೆದು ಒಂದೊಂದೇ ಪುಟವನ್ನು ತಿರುವಿ ನೋಡಿ ಪಕ್ಕಕ್ಕಿಡುತ್ತಿದೆ. ಈ ಕೋತಿಯನ್ನು ನೋಡಿದ ಅಲ್ಲೇ ಇದ್ದ ಸಿಬ್ಬಂದಿಯೊಬ್ಬರು ಕೋತಿಯನ್ನು ದೂರ ಕಳುಹಿಸುವ ಸಲುವಾಗಿ ಬಾಳೆಹಣ್ಣನ್ನು ನೀಡಿದ್ದು, ಆದರೂ ತನಗೆ ಪಂಚ ಪ್ರಾಣ ಆಗಿರುವ ಬಾಳೆಹಣ್ಣನ್ನು ಕೂಡ ಲೆಕ್ಕಿಸದೆ ಫೈಲುಗಳನ್ನು ತಿರುಚುವಲ್ಲಿ ಬ್ಯುಸಿಯಾಗಿದೆ. ಈ ವೇಳೆ ಫೈಲ್ ಮೇಲೆ ಇಟ್ಟ ಬಾಳೆಹಣ್ಣು ನೆಲದ ಮೇಲೆ ಬಿದ್ದಿದ್ದೆ.
ಕೂಡಲೇ ಕೆಳಗೆ ಬಿದ್ದ ಬಾಳೆಹಣ್ಣನ್ನು ಸುಲಿದು ಕೋತಿಗೆ ನೀಡಲು ಒಬ್ಬರು ಮುಂದಾಗಿದ್ದಾರೆ. ಆದರೆ ಕೋತಿ ಮಾತ್ರ ಸುಲಿದ ಬಾಳಹಣ್ಣಿನ ಮೇಲೂ ಆಸಕ್ತಿ ತೋರದೇ ಕೆಳಗೆಸೆದು ಫೈಲ್‌ನ ಪರಿಶೀಲನೆಯಲ್ಲಿ ತೊಡಗಿದ್ದು ಅಲ್ಲಿರುವ ಜನರಿಗೆ ಆಶ್ಚರ್ಯ ಮೂಡಿಸಿದೆ.
ಒಟ್ಟಿನಲ್ಲಿ ಈ ವೀಡಿಯೋ ಸಖತ್ ಮಜಾ ನೀಡಿದ್ದು, ವೀಡಿಯೋ ನೋಡಿದ ಅನೇಕರು ಈ ಕೋತಿ ಫುಲ್ ಬ್ಯುಸಿ ಅನಿಸುತ್ತೆ, ತಿನ್ನೋಕು ಬ್ರೇಕ್ ಇಲ್ಲದಂತೆ ವರ್ಕ್ ಬ್ಯುಸಿ! ಎಂದು ಕಾಮಂಟ್ ಮಾಡಿದ್ದಾರೆ. ಇನ್ನೊಬ್ಬರು ಕೋತಿಗೆ ಕಳೆದ ಜನ್ಮದಲ್ಲಿ ವಕೀಲರ ಕಚೇರಿಯಲ್ಲಿ ಏನೋ ಬಿಟ್ಟು ಹೋಗಿರಬೇಕು ಅನಿಸುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.
https://twitter.com/tyagiih5/status/1713221211130302886













