Home News ಮಂಗಳೂರಿನ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಿಂದ ನಡೆಯುತ್ತಿದೆಯೇ ಸಾಕ್ಷಿದಾರರ ಕೊಲೆಗೆ ಪ್ಲಾನ್!!? ಮತ್ತೊಮ್ಮೆ...

ಮಂಗಳೂರಿನ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಿಂದ ನಡೆಯುತ್ತಿದೆಯೇ ಸಾಕ್ಷಿದಾರರ ಕೊಲೆಗೆ ಪ್ಲಾನ್!!? ಮತ್ತೊಮ್ಮೆ ಉದ್ವಿಗ್ನಗೊಳ್ಳಲಿದೆಯೇ ಮಂಗಳೂರು!?

Hindu neighbor gifts plot of land

Hindu neighbour gifts land to Muslim journalist

ಕೆಲ ಸಮಯದಿಂದ ಶಾಂತವಾಗಿದ್ದ ಮಂಗಳೂರಿನಲ್ಲಿ ಮತ್ತೊಮ್ಮೆ ನೆತ್ತರು ಹರಿಸಿ ಕೋಮು ದ್ವೇಷ ಸಾಧಿಸಲು ಪ್ಲಾನ್ ನಡೆಯುತ್ತಿದೆ ಎಂಬ ಮಾಹಿತಿಯೊಂದು ಬಂದಿದ್ದು, ಈ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಯ ತುಣುಕೊಂದು ಸದ್ಯ ವೈರಲ್ ಆಗಿದೆ.

ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯ ಪ್ರಮುಖ ಆರೋಪಿ ಪಿಂಕಿ ನವಾಜ್ ಎಂಬಾತ ಕೊಲೆಯ ಬಗ್ಗೆ ಸಾಕ್ಷಿದಾರನಾಗಿರುವ ಕಾಟಿಪಳ್ಳ ಮೂರನೇ ವಾರ್ಡ್ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆಗೆ ವಾಟ್ಸಪ್ ಗ್ರೂಪ್ ಒಂದರಲ್ಲಿ ಬಹಿರಂಗವಾಗಿ ಧಮ್ಕಿ ಹಾಕಿರುವ ಆಡಿಯೋ ಒಂದು ಹರಿದಾಡುತ್ತಿದೆ.

ಗ್ರೂಪ್ ನಲ್ಲಿ ಕೆಲವರ ಫೋಟೋ ಹಾಕಿ ಅದರಲ್ಲಿ’ಸರಿಯಾಗಿ ನೋಡಿಕೊಳ್ಳಿ ನಮ್ಮ ಮುಂದಿನ ಬೇಟೆ ಇವರೇ’ಎಂಬಂತೆ ಬರೆದು ಹಾಕಲಾಗಿದ್ದು, ಆ ಬಳಿಕ ಪಿಂಕಿ ನವಾಜ್ ಸೇರಿ ಕೆಲವರು ಗ್ರೂಪ್ ನಲ್ಲೇ ಚರ್ಚಿಸುತ್ತಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಕೆಲ ಸಮಯದಿಂದ ಶಾಂತವಾಗಿದ್ದ ಮಂಗಳೂರು ಮತ್ತೊಮ್ಮೆ ಕೊಲೆ, ಪ್ರತಿಭಟನೆ, ದಾಳಿ ಗಳು ನಡೆದು ಅಶಾಂತಿ ಸೃಷ್ಟಿಸಲು ಕೆಲವರ ಸಂಚು ಫಲಿಸುವ ಮುನ್ನ ಪೊಲೀಸರು ಎಚ್ಚರ ವಹಿಸುವ ಅಗತ್ಯತೆ ಹೆಚ್ಚಿದೆ.