Home News Bantwala: ವಿದ್ಯಾರ್ಥಿ ನಾಪತ್ತೆ ಪ್ರಕರಣ; ಮನೆಯಿಂದ ಬಟ್ಟೆಯನ್ನು ಮೊದಲೇ ಕೊಂಡು ಹೋಗಿಟ್ಟಿದ್ದ ದಿಗಂತ್‌!

Bantwala: ವಿದ್ಯಾರ್ಥಿ ನಾಪತ್ತೆ ಪ್ರಕರಣ; ಮನೆಯಿಂದ ಬಟ್ಟೆಯನ್ನು ಮೊದಲೇ ಕೊಂಡು ಹೋಗಿಟ್ಟಿದ್ದ ದಿಗಂತ್‌!

Hindu neighbor gifts plot of land

Hindu neighbour gifts land to Muslim journalist

Bantwala: ಫರಂಗಿಪೇಟೆ ಕಿದೆಬೆಟ್ಟಿನ ದಿಗಂತ್‌ ಪತ್ತೆಯಾದ ನಂತರ ಈ ಪ್ರಕರಣ ಕುರಿತಂತೆ ಮಾಹಿತಿಯೊಂದು ಹೊರಬಿದ್ದಿದೆ. ಫೆ.25 ರಂದು ಆತ ಮನೆಯಿಂದ ಹೊರ ಹೋಗುವಾಗಲೇ ಬ್ಯಾಗೊಂದರಲ್ಲಿ ಕೆಲವು ಉಡುಪುಗಳನ್ನು ಕೊಂಡು ಹೋಗಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.

ಬ್ಯಾಗ್‌ನಲ್ಲಿ ಶರ್ಟ್‌ಗಳನ್ನು ಹಾಕಿ ಮೊದಲೇ ರೈಲು ಹಳಿಯ ಬಳಿ ಇಟ್ಟಿರುವ ಸಂಶಯ ವ್ಯಕ್ತವಾಗಿದೆ. ಸಿಸಿಕೆಮರಾದಲ್ಲಿ ಪರಂಗಿಪೇಟೆಯ ವ್ಯಾಯಾಮ ಶಾಲೆಯಲ್ಲಿ ತಿರುಗಿರುವ ದೃಶ್ಯ ಸೆರೆಯಾಗಿದೆ. ಆತನಲ್ಲಿ ಬೇರೆ ಮೊಬೈಲ್‌ ಇದ್ದಿರುವ ಸಾಧ್ಯತೆ ಕೂಡಾ ಇದೆ ಎನ್ನಲಾಗಿದೆ.

ಡಿಮಾರ್ಟ್‌ನಲ್ಲಿ ಆತ ಸಿಕ್ಕಾಗ ಆತನ ಕೈಯಲ್ಲಿ ಬ್ಯಾಗ್‌ ಇದ್ದು ಅದರಲ್ಲಿ ಬಟ್ಟೆಗಳು ಇತ್ತು. ಬಟ್ಟೆಗಳನ್ನು ಕೊಂಡು ಹೋಗಿರುವ ಕುರಿತು ಆತನ ಮನೆಯವರಿಗೆ ಗೊತ್ತಾಗಿಲ್ಲ ಎಂದು ಹೇಳಲಾಗಿದೆ. ಆತ ಉಡುಪಿಯಲ್ಲಿ ಬಿಸ್ಕೆಟ್‌ ಜೊತೆಗೆ ಚಾಕು, ಸ್ಟಾಪ್ಲೆರ್‌ ಖರೀದಿ ಮಾಡಿದ್ದಾನೆ ಎನ್ನಲಾಗಿದೆ. ಆತನ ಜೊತೆ ಟೋಪಿಗಳು ಇದ್ದವು. ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಕೌನ್ಸೆಲಿಂಗ್‌ ಮಾಡಿ ಆತನ ಮನಸ್ಸಿನಲ್ಲಿರುವ ಗೊಂದಲಗಳನ್ನು ನಿವಾರಣೆ ಮಾಡಿ ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ.

ಬಾಲಮಂದಿರದಲ್ಲಿರುವ ದಿಗಂತ್‌ ಇದ್ದು, ಆತನನ್ನು ಮಾ.12 ಕ್ಕೆ ಹೈಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.