Home News KSRTC: ಪುರುಷ ಪ್ರಯಾಣಿಕರು ಕೂರುವ ಆಸನದಲ್ಲಿ ಪುರುಷರೇ ಕೂರಬೇಕು- ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗದಿಂದ ಆದೇಶ

KSRTC: ಪುರುಷ ಪ್ರಯಾಣಿಕರು ಕೂರುವ ಆಸನದಲ್ಲಿ ಪುರುಷರೇ ಕೂರಬೇಕು- ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗದಿಂದ ಆದೇಶ

Hindu neighbor gifts plot of land

Hindu neighbour gifts land to Muslim journalist

Mysore: ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಸ್ಸಿನಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅಷ್ಟು ಮಾತ್ರವಲ್ಲದೇ ಗಂಡಸರು ಕುಳಿತುಕೊಳ್ಳುವ ಸೀಟಿನಲ್ಲಿಯೂ ಹೆಣ್ಮಕ್ಕಳು ಕುಳಿತುಕೊಳ್ಳುತ್ತಾರೆ. ನಾವು ದುಡ್ಡು ಕೊಟ್ಟು ಟಿಕೆಟ್‌ ತೆಗೆದುಕೊಂಡರೂ ನಮಗೆ ಸೀಟ್‌ ಸಿಗುತ್ತಿಲ್ಲ, ಹೆಂಗಸರು ಕುಳಿತುಕೊಳ್ಳುತ್ತಾರೆ, ಬಿಟ್ಟು ಕೊಡಿ ಎಂದು ಹೇಳಿದರೂ ನಮಗೇ ಜೋರು ಮಾಡುತ್ತಾರೆ ಎಂದು ಗಂಡಸರು ಬಸ್ಸಿನ ಚಾಲಕ, ನಿರ್ವಾಹಕರಿಗೆ ಹೇಳಿದರೂ ಪರಿಹಾರ ಇಲ್ಲಿಯವರೆಗೆ ದೊರಕಿರಲಿಲ್ಲ.

ಆದರೆ ಇದೀಗ ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಗಂಡಸರ ನೋವು ಅರ್ಥವಾಗಿದ್ದು, ಇನ್ನು ಮುಂದೆ ಪುರುಷ ಪ್ರಯಾಣಿಕರಿಗೆಂದು ಮೀಸಲಿರುವ ಸೀಟುಗಳನ್ನು ಅವರಿಗೆ ಬಿಟ್ಟು ಕೊಡಬೇಕು. ಈ ಕುರಿತು ಗಮನ ಹರಿಸಬೇಕು ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕರು ಹಾಗೂ ಸಿಬ್ಬಂದಿಗೆ ಇತೀಚೆಗೆ ಆದೇಶ ಹೊರಡಿಸಿದೆ.

ಕೆಎಸ್​ಆರ್​ಟಿಸಿ ಆದೇಶದ ಪ್ರತಿಯಲ್ಲೇನಿದೆ?

“ಮೈಸೂರು ನಗರ ಸಾರಿಗೆ ವಾಹನಗಳಲ್ಲಿನ ಮರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳಾ ಪ್ರಯಾಣಿಕರು ಕುಳಿತುಕೊಳ್ಳುತ್ತಿದ್ದು, ಪುರುಷ ಪ್ರಯಾಣಿಕರಿಗೆ ಆಸನಗಳು ಸಿಗುವುದಿಲ್ಲವೆಂದು ಶ್ರೀ ವಿಷ್ಣುವರ್ಧನ.ಎಸ್ ಎಂಬವರು ಕೇಂದ್ರ ಕಚೇರಿಗೆ ಉಲ್ಲೇಖದಂತೆ ದೂರು ಸಲ್ಲಿಸಿರುವುದು ಸರಿಯಷ್ಟೆ. ಅದರಂತೆ ತಮ್ಮ ಘಟಕಗಳಿಂದ ಕಾರ್ಯಾಚರಣೆಯಾಗುವ ಎಲ್ಲಾ ವಾಹನಗಳಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿಸಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಲು ಕ್ರಮಕೈಗೊಳ್ಳುವಂತೆ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ ಹಾಗೂ ತೆಗೆದುಕೊಂಡ ಕ್ರಮದ ಉರಿತು ಅನುಸರಣಾ ವರದಿ ಕಳುಹಿಸಬೇಕು” ಎಂದು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.