Home News ಮಾರುತಿ ಸುಜುಕಿ ಬಿಡುಗಡೆ ಮಾಡಿದೆ ಈ ಕಾರಿನ ಹೊಸ ಫೇಸ್ ಲಿಫ್ಟ್ ಮಾದರಿ !! |...

ಮಾರುತಿ ಸುಜುಕಿ ಬಿಡುಗಡೆ ಮಾಡಿದೆ ಈ ಕಾರಿನ ಹೊಸ ಫೇಸ್ ಲಿಫ್ಟ್ ಮಾದರಿ !! | ಕೇವಲ 11 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಿ

Hindu neighbor gifts plot of land

Hindu neighbour gifts land to Muslim journalist

ಮಾರುತಿ ಸುಜುಕಿ ದೇಶದಲ್ಲಿ ಅತ್ಯಧಿಕ ಗ್ರಾಹಕರನ್ನು ಹೊಂದಿದೆ. ತನ್ನ ವಿಶಿಷ್ಟ ಕಾಲುಗಳಿಂದ ಜನಮನ್ನಣೆ ಗಳಿಸಿದೆ. ಆಕಾರಗಳಲ್ಲಿ ಎಂಪಿವಿ ಎರ್ಟಿಗಾ ಕೂಡ ಒಂದು. ಎಂಪಿವಿ ಎರ್ಟಿಗಾ 7.5 ಲಕ್ಷಕ್ಕೂ ಹೆಚ್ಚು ಜನರ ಹೃದಯವನ್ನು ಗೆದ್ದಿದೆ. 2012ರಲ್ಲಿ ಬಿಡುಗಡೆಯಾದ ಎರ್ಟಿಗಾ ಎಂಪಿವಿ ಕೇವಲ 10 ವರ್ಷಗಳಲ್ಲಿ ಇಷ್ಟು ಲಕ್ಷ ಖರೀದಿದಾರರನ್ನು ಸಂಪಾದಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಇದೀಗ ಮಾರುತಿ ಸುಜುಕಿ ಎರ್ಟಿಗಾ ದ ಹೊಸ ಮಾದರಿ ಬಿಡುಗಡೆಯಾಗುತ್ತಿದ್ದು, ಗ್ರಾಹಕರು ಕೇವಲ ಹನ್ನೊಂದು ಸಾವಿರ ರೂಪಾಯಿ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

ಕಂಪನಿಯು ಈ ಜನಪ್ರೀಯ MPV ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಮಾದರಿಯನ್ನು ಬುಕ್ ಮಾಡಲು, ನೀವು 11 ಸಾವಿರ ರೂಪಾಯಿಗಳ ಠೇವಣಿ ಇರಿಸಬೇಕು. ಕಂಪನಿಯ ಪ್ರಕಾರ, ಎರ್ಟಿಗಾ ಈ ವಿಭಾಗದಲ್ಲಿ ಲೀಡರ್ ಆಗಿ ಹೊರಹೊಮ್ಮಿದೆ. ಎರ್ಟಿಗಾ ಒಟ್ಟು ಮೂರು ಆವೃತ್ತಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂದರೆ ಈ ಕಾರು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿಯಲ್ಲಿ ಸಿಗುತ್ತಿದೆ.

ಬಿಎಸ್ 6 ಮಾನದಂಡಗಳು ಬಂದ ನಂತರ, ಇದರ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಈ ವಿಭಾಗದಲ್ಲಿ ಸಿಎನ್‌ಜಿ ರೂಪಾಂತರಿಯನ್ನು ಹೊಂದಿರುವ ಏಕೈಕ ಎಂಪಿವಿ ಇದಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಎಂಪಿವಿ ಎರ್ಟಿಗಾ ತನ್ನ ಖರೀದಿದಾರರನ್ನು ನಿರಂತರವಾಗಿ ಹೆಚ್ಚಿಸಿಕೊಂಡಿದ್ದು, ಈ ವರ್ಷ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಪ್ರಸ್ತುತ, ಇದು ರೆನಾಲ್ಟ್ ಟ್ರೈಬರ್, ಮಹೀಂದ್ರಾ ಮರಾಜ್ಜೊ ಮತ್ತು ಕಿಯಾ ಕ್ಯಾರೆನ್ಸ್‌ನಂತಹ ವಾಹನಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.

ಹೊಸ ಎರ್ಟಿಗಾ ಮುಂದಿನ ವಾರ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ನೆಕ್ಸ್ಟ್ ಜೇನ್ ಎರ್ಟಿಗಾ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ, 1.5-ಲೀಟರ್ ಪೆಟ್ರೋಲ್ ಎಂಜಿನ್, ನವೀಕರಿಸಿದ ಪವರ್‌ಟ್ರೇನ್, ಸುಧಾರಿತ 6-ಸ್ಪೀಡ್ ಸ್ವಯಂಚಾಲಿತ ಪ್ರಸರಣ ಮತ್ತು ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮಾದರಿಯು CNG ಆಯ್ಕೆಯೊಂದಿಗೆ ಸಹ ಲಭ್ಯವಿರಲಿದೆ.