Home News ಮದುವೆಯಾಗಲು ವಧು ಬೇಕೆಂದು ಟೀ ಸ್ಟಾಲ್ ಮುಂದೆ ಬ್ಯಾನರ್ ಹಾಕಿದವನಿಗೆ ಒಲಿದು ಬಂತು ಸೌಂದರ್ಯ ಸ್ತ್ರೀಯರ...

ಮದುವೆಯಾಗಲು ವಧು ಬೇಕೆಂದು ಟೀ ಸ್ಟಾಲ್ ಮುಂದೆ ಬ್ಯಾನರ್ ಹಾಕಿದವನಿಗೆ ಒಲಿದು ಬಂತು ಸೌಂದರ್ಯ ಸ್ತ್ರೀಯರ ದಂಡು!!ಹಲವು ವರ್ಷಗಳಿಂದ ಅಲೆದು ಸವೆದಿದ್ದ ಆತನ ಬಾಳಿನಲ್ಲಿ ಮೂಡಿದೆ ಮಂದಹಾಸ

Hindu neighbor gifts plot of land

Hindu neighbour gifts land to Muslim journalist

ಟೀ ಶಾಪ್ ಮುಂದೆ ಹೆಂಡತಿ ಬೇಕಾಗಿದ್ದಾಳೆ ಎಂಬ ಬೋರ್ಡ್ ಹಾಕಿದ ವ್ಯಕ್ತಿಗೆ ಈಗ ಕನಸಲ್ಲೂ ಕಂಡಿರದಂತಹ ಅಚ್ಚರಿ ಕಾದಿದೆ.ಅದೃಷ್ಟವೆಂಬಂತೆ ವಿದೇಶಗಳಿಂದಲೂ ಸಾಲು ಸಾಲು ಪ್ರಪೋಸಲ್ ಗಳು ಆತನ ಪಾಲಿಗೆ ಒಲಿದುಬಂದಿದ್ದು, ಒಂದುವೇಳೆ ಅಷ್ಟೂ ಹುಡುಗಿಯರನ್ನು ಕಟ್ಟಿಕೊಂಡರೆ ಸವೆಯುವುದಂತೂ ಗ್ಯಾರಂಟಿ ಎಂಬ ತಮಾಷೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇಂತಹದೊಂದು ಘಟನೆ ನಡೆದದ್ದು ದೇವರ ನಾಡು ಕೇರಳದಲ್ಲಿ. ಕೇರಳದ ತ್ರಿಶೂರ್ ವಲ್ಲಿಚಿರ ನಿವಾಸಿಯಾದ ಉನ್ನಿಕೃಷ್ಣನ್ ಎಂಬಾತನೇ ಆ ಅದೃಷ್ಟ ಒಲಿದ ವ್ಯಕ್ತಿ.ಇದಕ್ಕೆಲ್ಲಾ ಕಾರಣ ಸಾಮಾಜಿಕ ಜಾಲತಾಣ. ಹೌದು, ಈ ಸ್ಟೋರಿ ಹೇಳುವ ಮೊದಲು ಸಾಮಾಜಿಕ ಜಾಲತಾಣವನ್ನೊಮ್ಮೆ ನೆನಪಿಸಿಕೊಂಡರೆ ಇನ್ನೂ ಚೆನ್ನ. ಸೋಶಿಯಲ್ ಮೀಡಿಯಾ ಸಹಾಯ ಕೇಳಿ ಬಂದವರನ್ನು ಎಂದಿಗೂ ನಿರಾಸೆಗೊಳಿಸಲಿಲ್ಲ, ಇದಕ್ಕೆ ಹಲವಾರು ಉದಾಹರಣೆಗಳಿವೆ. ಅಂತೆಯೇ ಈ ಘಟನೆಯಲ್ಲಿ ಕೂಡಾ ಸಾಮಾಜಿಕ ಜಾಲತಾಣದ ಪಾತ್ರ ಮಹತ್ತರವಾದುದು.ಮದುವೆಯಾಗಲು ಹುಡುಗಿಗಾಗಿ ಸುಮಾರು ಹುಡುಕಾಡಿದ ಆತ ಬ್ರೋಕರ್ ಗಳನ್ನೂ ಸಂಪರ್ಕಿಸಿ ಸೋತು ಹೋಗಿದ್ದ. ಕೊನೆಗೆ ಆತ ತನ್ನ ಟೀ ಶಾಪ್ ನ ಎದುರು ಮದುವೆಯಾಗಲು ಹುಡುಗಿ ಬೇಕಾಗಿದ್ದಾಳೆ ಎಂದು ಮೊಬೈಲ್ ನಂಬರ್ ಸಹಿತ ಬೋರ್ಡ್ ಹಾಕಿದ್ದು.

ಬೋರ್ಡ್ ಬಳಿ ತಾನು ಕೂತು ಸುಮ್ಮನೆ ಒಂದು ಸೆಲ್ಫಿ ತೆಗೆದು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದೇ ತಡ,ಆಸ್ಟ್ರೇಲಿಯಾ, ಇಂಗ್ಲೆಂಡ್ ಗಳಲ್ಲಿ ನೆಲೆಸಿರುವ ಕೇರಳ ಮೂಲದ ಯುವತಿಯರು ಫೋನ್ ಕರೆ ಮಾಡಿ ತಮ್ಮನ್ನು ವರಿಸಲು ಅಂಗಲಾಚುತ್ತಿದ್ದಾರಂತೆ.

ಜಾತಿ ಯಾವುದಾದರೂ, ಜಾತಕ ಸರಿ ಹೊಂದಿಕೆಯಗದಿದ್ದರೂ, ಬಾಳ ಸಂಗಾತಿ ಚಂದ ಇರಬೇಕೆಂದು ಬಯಸಿದ ಆತ ಕರೆ ಮಾಡಿದ ಅಷ್ಟೂ ಯುವತಿಯರಿಗೆ ಡೀಟೇಲ್ಸ್ ಕಳುಹಿಸಿದ್ದಾನೆ. ಸದ್ಯ ಹಲವು ಯುವತಿಯರು ಸಾಲಿನಲ್ಲಿದ್ದು, ಯಾರಿಗೆ, ಆತನನ್ನು ವರಿಸುವ ಭಾಗ್ಯ ಯಾರಿಗೆ ಒಲಿಯಲಿದೆ ಎಂಬುವುದು ಆತನ ನಿರ್ಧಾರದಿಂದ ತಿಳಿಯಬೇಕಿದೆ.ಹಲವು ವರ್ಷಗಳಿಂದ ಮದುವೆಗಾಗಿ ಹುಡುಗಿ ಹುಡುಕಿದ ಆತ, ಇನ್ನೇನು ಸೋಲುತ್ತಾನೆ ಎನ್ನುವಷ್ಟರಲ್ಲಿ ಅದೃಷ್ಟದ ಗೆಲುವು ಆತನ ಪಾಲಿಗೆ ಒಲಿದಿರುವುದು ಅಚ್ಚರಿಯಾಗಿದೆ.ಸದ್ಯ ಒಬ್ಬರಿಗಿಂತ ಒಬ್ಬರು ಸೌಂದರ್ಯದ ಬೊಂಬೆಗಳಾಗಿದ್ದು ಯಾರನ್ನು ವರಿಸಲಿ ಎಂದು ಚಿಂತೆಯಲ್ಲಿ ಆಲೋಚಿಸುತ್ತಿದ್ದಾನೆ ಉನ್ನಿಕೃಷ್ಣನ್.