Home News ಕಳೆದೆರಡು ದಿನಗಳ ಹಿಂದೆ ಗುರುಪುರ ಹೊಳೆಗೆ ಹಾರಿದ್ದ ಸ್ಥಳೀಯ ಯುವಕನ ಮೃತದೇಹ ಪತ್ತೆ!!

ಕಳೆದೆರಡು ದಿನಗಳ ಹಿಂದೆ ಗುರುಪುರ ಹೊಳೆಗೆ ಹಾರಿದ್ದ ಸ್ಥಳೀಯ ಯುವಕನ ಮೃತದೇಹ ಪತ್ತೆ!!

Hindu neighbor gifts plot of land

Hindu neighbour gifts land to Muslim journalist

ಕಳೆದೆರಡು ದಿನಗಳ ಹಿಂದೆ ಗುರುಪುರ ಸೇತುವೆಯಿಂದ ಕೆಳಗೆ ಹಾರಿದ್ದ ಯುವಕನೋರ್ವನ ಹುಡುಕಾಟ ನಡೆಸುತ್ತಿದ್ದ ವೇಳೆ ಮರವೂರು ಸೇತುವೆಯ ಹೊಳೆಯಲ್ಲಿ ಶವ ಪತ್ತೆಯಾಗಿದೆ.

ಮೃತ ಯುವಕ

ಘಟನೆ ವಿವರ:ಕೌಟುಂಬಿಕ ಸಮಸ್ಯೆಯಿಂದ ಮನನೊಂದ ಎಡಪದವು-ಗಂಜಿಮಠದ ಯುವಕ ಸತೀಶ್ ತನ್ನ ಆತ್ಮೀಯರೊಬ್ಬರಿಗೆ ವಾಟ್ಸಪ್ ನಲ್ಲಿ “ತಾನು ಗುರುಪುರದ ಸೇತುವೆಯಿಂದ ಹೊಳೆಗೆ ಹಾರಿ ಸಾಯುತ್ತಿದ್ದೇನೆ,ಮನೆಯಲ್ಲಿ ಪತ್ನಿಯಿಂದ ಕಿರಿಕಿರಿ ಆಗುತ್ತಿದೆ ಇದರಿಂದ ಮನನೊಂದ ನನಗೆ ಜೀವನವೇ ಬೇಡವಾಗಿದೆ, ನನ್ನ ಸ್ಕೂಟಿ ಮೊಬೈಲ್ ಸೇತುವೆಯ ಮೇಲಿದ್ದು ನನ್ನನ್ನು ಕ್ಷಮಿಸಿ” ಎಂಬ ಸಂದೇಶ ರವಾನಿಸಿ ಹೊಳೆಗೆ ಹಾರಿದ್ದಾನೆ.ಗಂಜಿಮಠ ಸಮೀಪ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದ ಸತೀಶ್ ಬಗೆಗೆ ಊರಿನಲ್ಲಿ ಒಳ್ಳೆಯ ಅಭಿಪ್ರಾಯವಿದ್ದು ವಿಷಯ ತಿಳಿದ ಕೂಡಲೇ ಬಜಪೆ ಠಾಣೆ ಪೊಲೀಸರ ಸಹಿತ ನುರಿತ ಈಜುಗಾರರಿಂದ ಹುಡುಕಾಟ ಆರಂಭವಾಗಿತ್ತು.

https://youtu.be/bZYdziAy02U

ಆದರೆ ಇಂದು ಮುಂಜಾನೆ ಮರವೂರು ಸೇತುವೆಯ ಹೊಳೆಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.ಮನೆಯವರ ಸಹಿತ ಹಲವರು ಮೃತದೇಹದ ಗುರುತು ಪತ್ತೆಹಚ್ಚಿದ್ದು ಕೈಯ್ಯಲ್ಲಿರುವ ಟ್ಯಾಟೋ ಗುರುತಿನಿಂದಾಗಿ ಈತನದ್ದೇ ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.