Home News ಮಾ.15-18: ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಟು ಮಹೋತ್ಸವ-ಆಮಂತ್ರಣ ಬಿಡುಗಡೆ

ಮಾ.15-18: ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಟು ಮಹೋತ್ಸವ-ಆಮಂತ್ರಣ ಬಿಡುಗಡೆ

Hindu neighbor gifts plot of land

Hindu neighbour gifts land to Muslim journalist

ಸುಳ್ಯ : ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವವು ಮಾ.15 ರಿಂದ ಮಾ.18 ರವರೆಗೆ ನಡೆಯಲಿದೆ ಎಂದು ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ರೈ ಹೇಳಿದ್ದಾರೆ.

 

ಅವರು ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಟು ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯ ಬಳಿಕ ಕಾರ್ಯಕ್ರಮದ ವಿವರಣೆ ನೀಡಿದರು.ಉತ್ಸವದ ಆಮಂತ್ರಣ ಪತ್ರಿಕೆಯನ್ನು ಕೃಷ್ಣ ಕಾಮತ್ ಬಿಡುಗಡೆಗೊಳಿಸಿದರು.

 

ಕುಂಡುಂಕುಯಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಧೀನಕ್ಕೊಳಪಡುವ, ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ, ಗ್ರಾಮದೇವರಾದ ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನ ವ್ಯಾಪ್ತಿಯ, ಕುತ್ತಿಕೋಲು ಶ್ರೀ ತಂಬೂರಾಟ್ಟಿ ಭಗವತಿ ಕ್ಷೇತ್ರದ ಪರಿದಿಯಲ್ಲಿ ಬರುವ ಸುಳ್ಯ ಪ್ರಾದೇಶಿಕ ಸಮಿತಿಯ ಭಾರತೀಯ ತಿಯಾ ಸಮಾಜದ ಆಡಳಿತಕ್ಕೆ ಒಳಪಡುವ ತಾಲೂಕಿನ ಏಕೈಕ ವಯನಾಟ್ ಕುಲವನ್ ದೈವಸ್ಥಾನವಾಗಿರುವ ಅರಂಬೂರಿನಲ್ಲಿ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ, ಎಲ್ಲರ ಸಹಕಾರದಲ್ಲಿ 300 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ನಡೆಯಲಿದ್ದು ತಾಲೂಕು,ಜಿಲ್ಲೆ, ಅಂತರ್ ರಾಜ್ಯದಿಂದಲೂ ಭಕ್ತರು ಲಕ್ಷೋಪಾದಿಯಾಗಿ ಬರುವ ನಿರೀಕ್ಷೆ ಇದೆ, ಶ್ರೀ ಕೇತ್ರದಲ್ಲಿ ಈಗಾಗಲೇ ಸ್ಥಳಿಯರ ಸಹಕಾರದಲ್ಲಿ ಉತ್ಸವಕ್ಕೆ ಬೇಕಾದ ಎಲ್ಲಾ ತಯಾರಿಗಳು ಭರದಿಂದ ಸಾಗುತ್ತಿದೆ ಎಂದು ಹೇಳಿದರು.ಸ್ಥಳೀಯರು ತಮ್ಮ ಕೃಷಿ ಭೂಮಿಯನ್ನು ಉತ್ಸವಕ್ಕೆ ಅಣಿಗೊಳಿಸಲು ನೀಡುತ್ತಿರುವುದೂ ಹಾಗೂ ಗ್ರಾಮಸ್ಥರು ಶ್ರಮ ಸೇವೆಯಲ್ಲಿ ಸಂತೋಷದಾಯವಾಗಿದೆ, ಎಂದರು.

 

ಉತ್ಸವಕ್ಕೆ ಮುನ್ನ ಫೆ. 20 ರ ಗುರುವಾರ ಪೂ11.38 ರಿಂದ1:24 ಕೂವಂ ಅಳಕ್ಕಲ್ ( ಭತ್ತ ಅಳೆಯುವುದು)

ನಂತರ ವೀಳ್ಯ ಕೊಡುವುದು ಅಡಯಾಳಂ ಕೊಡುಕ್ಕಳ್) ಪ್ರಸಾದ ವಿತರಣೆ ಅನ್ನದಾನ, ರಾತ್ರಿ 6.30 ರಿಂದ ದರ್ಶನ ಕೈವೀದ್ ನಡೆಯಲಿದೆ.

 

ಮಾ.15ರಂದು ಹಸಿರುವಾಣಿ ಮೆರವಣಿಗೆ, ಶ್ರೀ ಮೂಕಾಂಭಿಕಾ ಭಜನಾ ಮಂದಿರ ವಠಾರದಿಂದ ನಡೆದು ಬರಲಿದೆ.ಬಳಿಕ ಕಲವರ ನಿರಕಲ್,ವಿಷ್ಣುಮೂರ್ತಿ ಸಪರಿವಾರ ದೈವಗಳಿಗೆ ಕೂಡುವುದು,ಶ್ರೀ ಕೊರ್ತಿಯಮ್ಮ ಕೋಲಗಳು ರಾತ್ರಿ 1.30ರಿಂದ ಶ್ರೀ ಪೊಟ್ಟನ್ ದೈವ ನಡೆಯಲಿದೆ, ಮಾ.16 ರಂದು ಶ್ರೀ ವಿಷ್ಣು ಮೂರ್ತಿ ದೈವ, ಶ್ರೀ ಚಾಮುಂಡಿಯಮ್ಮ, ಶ್ರೀ ಗುಳಿಗ ದೈವ, ಕೈವಿದ್ ಶ್ರೀ ವಯನಾಟ್ ಕುಲವನ್ ಹಾಗೂ ಸಪರಿವಾರ ದೈವಗಳಿಗೆ ಕೂಡುವುದು ನಡೆಯಲಿದೆ.

 

ಮಾ 17ರಂದು ಶ್ರೀ ಕಾರ್ನವನ್ ದೈವದ ವೆಳ್ಳಾಟಂ, ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ, ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ನಂತರ ಬಪ್ಪಿಡಲ್, ರಾತ್ರಿ ವಿಷ್ಣುಮೂರ್ತಿದೈವಕ್ಕೆ ಕೂಡುವುದು, ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ.

 

ಮಾ.18ರಂದು ಶ್ರೀ ಕಾರ್ನವನ್ ದೈವ, ಶ್ರೀ ಕೊರಚ್ಚನ್ ದೈವ, ಶ್ರೀ ಕಂಡನಾರ್ ಕೇಳನ್ ದೈವ,ಶ್ರೀ ವಯನಾಟ್ ಕುಲವನ್ ದೈವ ಸೂಟೆ ಸಮರ್ಪಣೆ ನಡೆದು, ಶ್ರೀ ವಿಷ್ಣು ಮೂರ್ತಿ ದೈವ, ರಾತ್ರಿ ಮರ ಪಿಳರ್ಕಲ್ ನಂತರ ಕೈವಿದ್ ನಡೆಯಲಿದೆ ಎಂದು ವಿವರಿಸಿದರು.

 

ಸುದ್ದಿಗೋಷ್ಟಿಯಲ್ಲಿ ಉಧ್ಯಮಿ ಕೃಷ್ಣ ಕಾಮತ್ , ಮಹೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಪವಿತ್ರನ್ ಗುಂಡ್ಯ,ಕೋಶಾಧಿಕಾರಿ ಜತ್ತಪ್ಪ ರೈ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕೋಶಾಧಿಕಾರಿ ರಧೀಶನ್ ಅರಂಬೂರು, ಕುಟುಂಬದ ಯಜಮಾನ ಕುಂಞಿಕಣ್ಣ ಎ, , ಆಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಕಾರ್ಯಾಧ್ಯಕ್ಷ ನಾರಾಯಣ ಕೇಕಡ್ಕ ,ಎನ್ ಎ ರಾಮಚಂದ್ರ, ಕೆ.ಎಸ್ ಕೃಷ್ಣಪ್ಪ ಕೆದಂಬಾಡಿ, ಕುಂಞಿರಾಮನ್ ಶ್ರೀ ಶೈಲ, ರಾಧಾಕೃಷ್ಣ ಪರಿವಾರಕಾನ,ಪದ್ಮಯ್ಯ ಪಡ್ಪು, ಪ್ರಮುಖರಾದ ಅಶೋಕ್ ಪೀಚೆ, ಎ.ಸಿ ವಸಂತ, ಗಂಗಾಧರ ನೆಡ್ಚಿಲ್ ,ಜಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು