Home News Manu Bhakar: ‘ನಾನು ಪ್ರತಿಷ್ಠಿತ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಗೆ ಅರ್ಹಳೇ?’ –...

Manu Bhakar: ‘ನಾನು ಪ್ರತಿಷ್ಠಿತ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಗೆ ಅರ್ಹಳೇ?’ – ಅನಗತ್ಯ ಟ್ವೀಟ್ ಮಾಡಿದ ಮನು ಭಾಕರ್, ನ್ಯಾಷನಲ್ ಕ್ರಶ್ ವಿರುದ್ಧ ಸಿಡಿದೆದ್ದ ನೆಟಿಜನ್ಸ್

Hindu neighbor gifts plot of land

Hindu neighbour gifts land to Muslim journalist

Manu Bhakar: ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌- 2024ರಲ್ಲಿ ಎರಡು ಕಂಚಿನ ಪದಕ ಗೆದ್ದ ಬಳಿಕ ಹೊಸಾ ನ್ಯಾಷನಲ್ ಕ್ರಶ್ಶು. ಈ ಏಸ್ ಶೂಟರ್ ಗಳಿಸಿದ ಕಂಚುಗಳು ಚಿನ್ನಕ್ಕಿಂತಾ ಹೆಚ್ಚು! ಒಲಂಪಿಕ್ ಗೇಮ್ಸ್ ಗ್ರಾಮದಿಂದ ಬಂ ಬಳಿಕ ಈಕೆಯನ್ನು ಭಾರತೀಯ ಮಾಧ್ಯಮಗಳು ಮುತ್ತಿಕೊಂಡಿವೆ. ಹಲವಾರು ಸಂದರ್ಶನಗಳಲ್ಲಿ ಆಕೆ ಪಾಲ್ಗೊಂಡಿದ್ದಾಳೆ. ಆದರೀಗ ಮನು ಭಾಕರ್ ಇದ್ದಕ್ಕಿದ್ದಂತೆ ನೆಟ್ಟಿಗರ ಟೀಕೆಗೆ ಗುರೆಯಾಗಿದ್ದಾಳೆ. ಅದಕ್ಕೆ ಕಾರಣ ಅವಳೇ ಮಾಡಿದ್ದಾಳೆ ಎನ್ನಲಾದ ಒಂದು ಟ್ವೀಟ್!!

ಹೌದು, ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics) ಅವಳಿ ಕಂಚಿನ ಪದಕ ವಿಜೇತೆ, ಭಾರತದ ತಾರಾ ಶೂಟರ್‌ ಮನು ಭಾಕರ್‌(Manu Bhaker) ಅನಗತ್ಯವಾಗಿ ಟೀಕೆಗೆ ಒಳಗಾಗಿದ್ದಾರೆ. ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ‘ನಾನು ಪ್ರತಿಷ್ಠಿತ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ(Dhyan Chand Khel Ratna Award) ಪ್ರಶಸ್ತಿಗೆ ಅರ್ಹಳೇ? ನೀವೇ ಹೇಳಿ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ಭಾರೀ ಟೀಕೆಗಳು ಬಂದ ಕಾರಣ ತಕ್ಷಣ ಮನು ತಮ್ಮ ಟ್ವೀಟ್‌ ಡಿಲೀಡ್‌ ಮಾಡಿದ್ದಾರೆ. ಕೆಲವರು ಇದು ಮನು ಅವರ ಟ್ವಿಟರ್‌ ಎಕ್ಸ್‌ ಖಾತೆ ಹ್ಯಾಕ್‌ ಆಗಿರುವ ಸಾಧ್ಯತೆ ಇದೆ ಎಂದರೆ, ಇನ್ನು ಕೆಲವರು ಇದು ಉದ್ದೇಶಪೂರ್ವಕವಾಗಿ ಮಾಡಿರುವ ಟ್ವೀಟ್‌ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇದರ ತ್ಯಾಸತ್ಯತೆ ತಿಳಿದಿಲ್ಲ.

ಇದು ಒಂದೆಡೆಯಾದರೆ ಮತ್ತೊಂದೆಡೆ ಇತ್ತೀಚೆಗೆ ಮನು ಹೋದಲ್ಲೆಲ್ಲ ತಾವು ಗೆದ್ದ ಪದಕಗಳನ್ನು ಒಯ್ಯುತ್ತಿರುವುದೇಕೆ ಕೆಲ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಿದ್ದರು. ಪದಕ ಗೆದ್ದಿರುವುದು ದೇಶಕ್ಕೆ ತಿಳಿದಿದೆ ಆದರೂ ಪ್ರತಿ ಕಾರ್ಯಕ್ರಮಕ್ಕೂ ಎರಡು ಪದಕಗಳೊಂದಿಗೆ ಏಕೆ ಬರುತ್ತೀರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.