Home News Mangalore: ರಸ್ತೆ ಅಪಘಾತದಲ್ಲಿ ಮಹಿಳೆಯ ಸಾವು ಪ್ರಕರಣ; ಟೆಂಪೋ ಚಾಲಕನಿಗೆ 9 ತಿಂಗಳ ಜೈಲು!

Mangalore: ರಸ್ತೆ ಅಪಘಾತದಲ್ಲಿ ಮಹಿಳೆಯ ಸಾವು ಪ್ರಕರಣ; ಟೆಂಪೋ ಚಾಲಕನಿಗೆ 9 ತಿಂಗಳ ಜೈಲು!

Hindu neighbor gifts plot of land

Hindu neighbour gifts land to Muslim journalist

Mangalore: ರಸ್ತೆ ಅಪಘಾತದಲ್ಲಿ ಮಹಿಳೆಯ ಸಾವಿಗೆ ಕಾರಣನಾದ ಗೂಡ್ಸ್‌ ಟೆಂಪೋ ಚಾಲಕ ಸಿದ್ದಲಿಂಗನ ಗೌಡ ವಿ.ಪೊಲೀಸ್‌ ಪಾಟೀಲ್‌ (35) ಎಂಬಾತನಿಗೆ ನ್ಯಾಯಾಲಯವು 9 ತಿಂಗಳು ಜೈಲು ಹಾಗೂ 9 ಸಾವಿರ ರೂ. ದಂಡ ವಿಧಿಸಿದೆ.

2019 ರಲ್ಲಿ ಡಿ.1 ರಂದು ನಗರದ ಕದ್ರಿ ಕಂಬಳದಲ್ಲಿ ಈ ಘಟನೆ ನಡೆದಿತ್ತು.

ವಿನೋದ್‌ ಕುಮಾರ್‌ ಚಲಾಯಿಸುತ್ತಿದ್ದ ಆಟೋದಲ್ಲಿ ಮಹಿಳೆ ಶೈಲಜಾ ರಾವ್‌ (35) ಪ್ರಯಾಣ ಮಾಡುತ್ತಿದ್ದರು. ಸಿದ್ದಲಿಂಗನ ಗೌಡ ಗೂಡ್ಸ್‌ ಟೆಂಪೋವನ್ನು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದಿದ್ದು ಆಟೋಗೆ ಡಿಕ್ಕಿ ಹೊಡೆದಿತ್ತು, ಇದರ ಪರಿಣಾಮ ಶೈಲಜಾ ತೀವ್ರ ಗಾಯಗೊಂಡಿದ್ದರು. ನಂತರ ಆಸ್ಪತ್ರೆಗೆ ದಾಖಲುಗೊಂಡಿದ್ದ ಅವರು ಚಿಕಿತ್ಸೆಗೆ ಫಲಕಾರಿಯಾಗದೆ ಮೃತ ಹೊಂದಿದ್ದರು.

ಟೆಂಪೋ ಚಾಲಕನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎ.22 ರಂದು 9 ತಿಂಗಳ ಜೈಲು ಹಾಗೂ 9 ಸಾವಿರ ರೂ.ದಂಡ ವಿಧಿಸಿ ಆದೇಶ ನೀಡಲಾಗಿದೆ.