Home News ಮಂಗಳೂರು: ಅನ್ಯಕೋಮಿನ ವ್ಯಕ್ತಿ ಮೇಲೆ ತಲವಾರು ಅಟ್ಯಾಕ್; 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು!!!

ಮಂಗಳೂರು: ಅನ್ಯಕೋಮಿನ ವ್ಯಕ್ತಿ ಮೇಲೆ ತಲವಾರು ಅಟ್ಯಾಕ್; 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು!!!

Mangaluru

Hindu neighbor gifts plot of land

Hindu neighbour gifts land to Muslim journalist

Mangaluru : ಆಗಸ್ಟ್ 20ರಂದು ಅನ್ಯಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿದ ಘಟನೆ ನಡೆದಿದೆ. ಇದೀಗ, ಘಟನೆ ನಡೆದ ಒಂದು ದಿನದೊಳಗೆ ಪೋಲಿಸರು ಈ ಕೃತ್ಯ ಎಸಗಿದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು (Mangaluru) ಹೊರವಲಯದ ಕಾವೂರು ಎಂ.ವಿ.ಶೆಟ್ಟಿ ಕಾಲೇಜು ಬಳಿ ಅನ್ಯಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿದ ಘಟನೆ ನಡೆದಿತ್ತು. ಸ್ಕೂಟಿಯಲ್ಲಿ ಬಂದ ಕಿಡಿಗೇಡಿಗಳ ತಂಡ ಅನ್ಯ ಕೋಮಿನ ವಕ್ತಿಯನ್ನು ಅಡ್ಡ ಹಾಕಿ ತಲವಾರು ದಾಳಿ ಮಾಡಿದ್ದರು. ಈ ಸಂದರ್ಭ ಅನ್ಯಕೋಮಿನ ವ್ಯಕ್ತಿ ತಲವಾರು ದಾಳಿಯಿಂದ ಹೇಗೋ ತಪ್ಪಿಸಿಕೊಂಡಿದ್ದ. ಹೀಗಿದ್ದರೂ ಕೂಡ ಆತನ ಮುಖಕ್ಕೆ ಗಾಯವಾಗಿತ್ತು. ಈ ಪ್ರಕರಣದ ಕುರಿತಂತೆ ಅನ್ಯ ಕೋಮಿನ ವ್ಯಕ್ತಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ, ಪೊಲೀಸರು (police)ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಘಟನೆ ನಡೆದ ದಿನದೊಳಗೆ ಬಂಧಿಸಿದ್ದಾರೆ.

ಈ ಕೃತ್ಯ ಎಸಗಿದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, ಪಂಜಿಮೊಗರು ನಿವಾಸಿ ಚರಣ್ ರಾಜ್ (23), ಸುಮಂತ್ ಬರ್ಮನ್ (24), ಅವಿನಾಶ್ (24)ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ತಲವಾರು ಹಾಗೂ ದ್ವಿಚಕ್ರವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ವಂಡರ್ ಲಾ ಪಾರ್ಕ್ ನಲ್ಲಿ ಘೋರ ದುರಂತ! ಮೇಲಿನಿಂದ ಬಿದ್ದು ವ್ಯಕ್ತಿ ಸಾವು!!!