Home News UP: ನವ ವಿವಾಹಿತನಿಗೆ ಎಣ್ಣೆ ಹೊಡೆಸಿ ಖಾಸಗಿ ಅಂಗ ಕತ್ತರಿಸಿದ ಮಂಗಳಮುಖಿಯರು!!

UP: ನವ ವಿವಾಹಿತನಿಗೆ ಎಣ್ಣೆ ಹೊಡೆಸಿ ಖಾಸಗಿ ಅಂಗ ಕತ್ತರಿಸಿದ ಮಂಗಳಮುಖಿಯರು!!

Hindu neighbor gifts plot of land

Hindu neighbour gifts land to Muslim journalist

UP: ಇತ್ತೀಚಿಗಷ್ಟೇ ಮದುವೆಯಾಗಿದ್ದ ನವ ವಿವಾಹಿತ ಯುವಕನನ್ನು ಲೈಂಗಿಕ ಅಲ್ಪಸಂಖ್ಯಾತರು ಎಳೆದು ಇದು ಆತನ ಖಾಸಗಿ ಅಂಗವನ್ನು ಕತ್ತರಿಸಿರುವಂತಹ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

 

ಉತ್ತರ ಪ್ರದೇಶದ ರಾಂಪುರದಲ್ಲಿ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ. ತನ್ನ ಅಕ್ಕ ಪಕ್ಕ ಎಲ್ಲೇ ಕಾರ್ಯಕ್ರಮ ನಡೆದರೂ ಡ್ಯಾನ್ಸ್ ಕಾರ್ಯಕ್ರಮ ಕೊಡಲು ಹೋಗುತ್ತಿದ್ದ ನವ ವಿವಾಹಿತ ಯುವಕನನ್ನು ದ್ವೇಷದ ಹಿನ್ನೆಲೆಯಲ್ಲಿ ಎಳೆದೊಯ್ದ ಲೈಂಗಿಕ ಅಲ್ಪಸಂಖ್ಯಾತರು ಮಾದಕ ಪಾನೀಯ ಕುಡಿಸಿ ಅವನ ಖಾಸಗಿ ಅಂಗವನ್ನು ಕತ್ತರಿಸಿದ್ದಾರೆ.

 

ರಸ್ತೆಯಲ್ಲಿ ತೀವ್ರ ನರಳಾಡುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ಬೆನ್ನಲ್ಲಿಯೇ ಸಂತ್ರಸ್ತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದ್ದು, ತನಿಖೆ ನಡೆಸುತ್ತಿದ್ದಾರೆ.

 

ಈ ಕುರಿತಾಗಿ ಸಂತ್ರಸ್ತ ಯುವಕ ಮಾತನಾಡಿದ್ದು, ನಾನು ಬದಾಯೂಂನ ಬಿಸೌಲಿಗೆ ಒಂದು ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ಈ ವೇಳೆ ಶಹಾಬಾದ್‌ನಲ್ಲಿ ಇಬ್ಬರು ಲೈಂಗಿಕ ಅಲ್ಪಸಂಖ್ಯಾತರು ನನ್ನನ್ನು ಭೇಟಿಯಾದರು. ಅವರ ಜೊತೆಗೆ ಇನ್ನೂ ಮೂರು ಜನರಿದ್ದರು. ಇವರೆಲ್ಲರೂ ನನಗೆ ಪರಿಚಿತರಾಗಿದ್ದರು. ಎಲ್ಲರೂ ಸುಖಾ ಸುಮ್ಮನೇ ನನ್ನ ಜೊತೆಗೆ ಜಗಳ ಮಾಡಿದರು. ನಂತರ ಬಲವಂತವಾಗಿ ಶಹಾಬಾದ್ ಪ್ರದೇಶದ ಒಂದು ಹಳ್ಳಿಗೆ ಕರೆದೊಯ್ದರು. ಅಲ್ಲಿ ಐವರು ಸೇರಿಕೊಂಡು ಕೋಲ್ಡ್ ಡ್ರಿಂಕ್ ಕುಡಿಸಿದರು. ಕೋಲ್ಡ್ ಡ್ರಿಂಕ್ ಕುಡಿದ ನಂತರ ಕಣ್ಣು ಮಂಜು ಮಂಜಾಗಿ ಪ್ರಜ್ಞೆ ತಪ್ಪಿ ಹೋಯಿತು. ಎಚ್ಚರವಾದಾಗ ನನಗೆ ಖಾಸಗಿ ಭಾಗದಲ್ಲಿ ನೋವು ಕಾಣಿಸಿಕೊಂಡಿತು. ಆಗ ಏನೆಂದು ನೋಡಿಕೊಂಡರೆ ನ್ನ ಖಾಸಗಿ ಅಂಗವನ್ನೇ ಕತ್ತರಿಸಲಾಗಿತ್ತು ಎಂದು ಆರೋಪ ಮಾಡಿದ್ದಾನೆ.