Home Interesting ಐದು ವರ್ಷಗಳ ಕಾಲ ನೂರಕ್ಕೂ ಹೆಚ್ಚು ಸ್ಪೋಟಕಗಳನ್ನು ಪತ್ತೆ ಹಚ್ಚಲು ನೆರವಾಗಿದ್ದ ‘ಮಗವಾ’ಇನ್ನು ನೆನಪು ಮಾತ್ರ...

ಐದು ವರ್ಷಗಳ ಕಾಲ ನೂರಕ್ಕೂ ಹೆಚ್ಚು ಸ್ಪೋಟಕಗಳನ್ನು ಪತ್ತೆ ಹಚ್ಚಲು ನೆರವಾಗಿದ್ದ ‘ಮಗವಾ’ಇನ್ನು ನೆನಪು ಮಾತ್ರ |ಚಿನ್ನದ ಪದಕವನ್ನೂ ಮುಡಿಗೇರಿಸಿಕೊಂಡಿದ್ದ ಈ ಮೂಷಿಕ ನ ಅದ್ಭುತ ಕಾರ್ಯಕ್ಕೆ ಎಪಿಒಪಿಒ ಸಂಸ್ಥೆಯಿಂದ ಶ್ರದ್ಧಾಂಜಲಿ

Hindu neighbor gifts plot of land

Hindu neighbour gifts land to Muslim journalist

ಅಪಾಯಕಾರಿ ಗಣಿ ಮತ್ತು ಸ್ಪೋಟಕವನ್ನು ಪತ್ತೆ ಹಚ್ಚಿ,ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಕಾಂಬೋಡಿಯಾದ ಪುಟ್ಟ ಮೂಷಿಕ ‘ಮಗವಾ’ ತನ್ನ‌ 8ನೇ ವಯಸ್ಸಿನಲ್ಲಿ ನಿಧನ ಹೊಂದಿ, ತನ್ನ ಸಾಧನೆಯ ಹೆಜ್ಜೆಗಳ ನೆನಪನ್ನು ಎಲ್ಲರ ಎದೆಯಲ್ಲಿ ಶಾಶ್ವತವಾಗಿರಿಸಿದೆ.

ಇಲಿ ‘ಮಗವಾ’ ಕಳೆದ ವಾರಾಂತ್ಯದಲ್ಲಿ ಮೃತಪಟ್ಟಿದ್ದು,’ಹೀರೊರ್ಯಾಟ್’ ಎಂದೇ ಅದು ಜನಪ್ರಿಯವಾಗಿತ್ತು. ಇಲಿ ಮಗವಾ
ನಾಯಿಯ ಹೊರತಾಗಿ ಪಿಡಿಎಸ್ ಗೋಲ್ಡ್ ಮೆಡಲ್ ಪಡೆದು ಗಿನ್ನೆಸ್ ದಾಖಲೆಗೂ ಪಾತ್ರವಾಗಿದ್ದು,ಈ ಮೆಡಲ್ ಶೌರ್ಯಕ್ಕೆ ಸಂಬಂಧಿಸಿದ ಜಾರ್ಜ್ ಕ್ರಾಸ್ ಮೆಡಲ್‌ಗೆ ಸಮನಾದುದು.

ಐದು ವರ್ಷ ಕಾಲ ಅದು 100ಕ್ಕೂ ಹೆಚ್ಚು ನೆಲಬಾಂಬ್ ಮತ್ತು ಸ್ಪೋಟಕಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗಿದ್ದು,ಇಂಟರ್ ನ್ಯಾಷನಲ್ ಚಾರಿಟಿ ಸಂಸ್ಥೆ ಎಪಿಒಪಿಒ ಈ ಇಲಿಯನ್ನು ಬಳಸಿಕೊಂಡಿತ್ತು. ಇದು ಸ್ಫೋಟಕಗಳಿಂದ ಅನೇಕರ ಪ್ರಾಣವನ್ನು ಉಳಿಸಿದೆ.ಒಂದು ಟೆನಿಸ್ ಕೋರ್ಟ್ ಗಾತ್ರದ
ಪ್ರದೇಶದಲ್ಲಿ ಸ್ಫೋಟಕ ಪತ್ತೆಗೆ ಮನುಷ್ಯನಿಗೆ ಒಂದರಿಂದ
ನಾಲ್ಕು ದಿನ ಬೇಕಾಗಬಹುದು. ಆದರೆ, ಈ ಇಲಿಗೆ ಕೇವಲ 20 ನಿಮಿಷ ಸಾಕು.ಇದು ಈ ಇಲಿಯ ಕಾರ್ಯಕ್ಷಮತೆಗೆ ಸಾಕ್ಷಿ.

ಇದು ದೊಡ್ಡ ಗಾತ್ರದ ಇಲಿಯಾಗಿದ್ದು, ಇದರ ಮೂಲ ಆಫ್ರಿಕ.ತಾಂಜೇನಿಯಾದಲ್ಲಿ ಹುಟ್ಟಿದ ಇಲಿ ಮಗವಾ ಅಲ್ಲಿಯೇ ತರಬೇತಿ ಪಡೆದು ಬಳಿಕ 2016 ರಲ್ಲಿ ಕಾಂಬೋಡಿಯಾಕ್ಕೆ ತೆರಳಿತ್ತು.ಕ್ಷಯರೋಗ ಪತ್ತೆಗೂ ಈ ಇಲಿಯನ್ನು ಬಳಸುತ್ತಿದ್ದರು.ಉತ್ತಮ ಆರೋಗ್ಯವನ್ನು ಹೊಂದಿದ್ದ ಮಗವಾ, ಹೆಚ್ಚಿನ ಸಮಯವನ್ನು ಉಲ್ಲಾಸದಿಂದಲೇ ಇತ್ತು. ಕಳೆದ ವಾರ ಕೂಡಾ ಉತ್ಸಾಹದಿಂದಲೇ ಆಟವಾಡುತ್ತಿತ್ತು. ಆದರೆ ವಾರಾಂತ್ಯದಲ್ಲಿ ಕಳೆಗುಂದಿದ್ದಂತಿದ್ದ ಮಗವಾ ಹೆಚ್ಚು ನಿದ್ರಿಸಲು ಪ್ರಾರಂಭಿಸಿತ್ತು ಹಾಗೂ ಲಘು ಆಹಾರ ಸೇವಿಸುತ್ತಿದ್ದು, ಬಳಿಕ ಮೃತಪಟ್ಟಿದೆ.ಈ ಇಲಿ ಮಾಡಿರುವ ಅದ್ಭುತ ಕಾರ್ಯಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಎಪಿಒಪಿಒ ಸಂಸ್ಥೆಯು ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದೆ.