Home News Liquor Price: ಮದ್ಯಪ್ರಿಯರಿಗೆ ಗುಡ್​​ನ್ಯೂಸ್​; ಕರ್ನಾಟಕದಲ್ಲಿ ಮದ್ಯದ ಬೆಲೆ ಇಳಿಕೆ!

Liquor Price: ಮದ್ಯಪ್ರಿಯರಿಗೆ ಗುಡ್​​ನ್ಯೂಸ್​; ಕರ್ನಾಟಕದಲ್ಲಿ ಮದ್ಯದ ಬೆಲೆ ಇಳಿಕೆ!

Liquor Price

Hindu neighbor gifts plot of land

Hindu neighbour gifts land to Muslim journalist

Liquor Price:  ಕರ್ನಾಟಕದಲ್ಲಿ ಮದ್ಯಪ್ರಿಯರಿಗೆ ಗುಡ್​ನ್ಯೂಸ್​ ಒಂದು ಇದೆ. ಹೌದು, ಕರ್ನಾಟದಕಲ್ಲಿ ಪ್ರೀಮಿಯಂ ಮದ್ಯದ ದರ (Liquor Price) ಬೇರೆ ರಾಜ್ಯಗಳಿಂತ ಹೆಚ್ಚಾಗಿದೆ. ಆದ್ದರಿಂದ ರಾಜ್ಯದಲ್ಲೂ ಅದೇ ಬೆಲೆ ಪ್ರೀಮಿಯಂ ಮದ್ಯ ಸಿಕ್ಕರೆ ಹೊರ ರಾಜ್ಯದಿಂದ ಮದ್ಯ ಖರೀದಿಗೆ ಬ್ರೇಕ್ ಹಾಕಬಹುದು ಹಾಗೂ ಕಡಿಮೆ ಮೊತ್ತಕ್ಕೆ ಉತ್ತಮ ಗುಣಮಟ್ಟದ ಮದ್ಯ ಪೂರೈಕೆ ಮಾಡಬಹುದು. ಇದರಿಂದ ರಾಜ್ಯದ ಅಬಕಾರಿ ಇಲಾಖೆಯ ಆದಾಯವೂ ಹೆಚ್ಚಾಗಲಿದೆ ಎಂಬುವುದು ಅಬಕಾರಿ ಇಲಾಖೆಯ ಉದ್ದೇಶವಾಗಿದೆ.

ಸದ್ಯ ಕರ್ನಾಟಕದಾದ್ಯಂತ ಬ್ರಾಂಡೆಡ್ ಮದ್ಯದ ಬೆಲೆ ಶೇಕಡಾ 15 ರಿಂದ 25 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಎಂಬ ಮಾಹಿತಿ ಬೆಳಕಿಗೆ ಬಂದಿದೆ. ರಾಜ್ಯ ಅಬಕಾರಿ ಇಲಾಖೆಯು ಜೂನ್‌ನಲ್ಲಿ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು, 2024 ಕ್ಕೆ ನೋಟಿಪೈ ಮಾಡಿತ್ತು. ಇದರಂತೆ ಮದ್ಯದ ಬೆಲೆಗಳ ಕಡಿಮೆಯಾಗಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಅಂತಿಮ ಅಧಿಸೂಚನೆಯು ಕರ್ನಾಟಕದ ನೆರೆ ರಾಜ್ಯಗಳಲ್ಲಿನ ಮದ್ಯದ ದರಗಳಿಗೆ ಹೊಂದಾಣಿಕೆ ಆಗುವಂತೆ ಭಾರತದಲ್ಲಿ ತಯಾರಿಸಿರುವ ಮದ್ಯದ (ಐಎಂಎಲ್) ಅಬಕಾರಿ ಸುಂಕದ ಸ್ಲ್ಯಾಬ್‌ಗಳ ಸಂಖ್ಯೆಯನ್ನು 18 ರಿಂದ 16 ಕ್ಕೆ ಇಳಿಸುವ ಸಾಧ್ಯತೆ ಇದೆ.

ಇನ್ನು, ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಬೇಸಿಗೆ ಅವಧಿಯಲ್ಲಿ ಮದ್ಯ ಪ್ರಿಯಕರು ಬಿಯರನ್ನು ಆದ್ಯತೆಯ ರಿಫ್ರೆಶ್‌ಮೆಂಟ್ ಅಂತ ಆಯ್ಕೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಅಂತಿಮ ಅಧಿಸೂಚನೆ ಮತ್ತು ಪರಿಷ್ಕೃತ ದರಗಳು ಜುಲೈ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದ್ದರೂ, ರಾಜಕೀಯ ಕಾರಣಗಳಿಂದ ಅಧಿಸೂಚನೆಯನ್ನು ತಡೆಹಿಡಿಯಲಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಅಲ್ಲದೇ ಹೊಸ ಪರವಾನಗಿ ಕೊಡುವ ವಿಳಂಬ ಆಗಿರುವುದರಿಂದ ಅಧಿಸೂಚನೆ ಹೊರಬರುವುದು ತಡವಾಗುತ್ತಿದೆ.

ಸದ್ಯ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಬೆಲೆ ವ್ಯತ್ಯಾಸ ಕಾಣಲು ಕನಿಷ್ಠ ಒಂದರಿಂದ ಎರಡು ತಿಂಗಳು ತೆಗೆದುಕೊಳ್ಳಬಹುದು ಎಂದು ಚಿಲ್ಲರೆ ಮದ್ಯ ವ್ಯಾಪಾರದ ಮೂಲಗಳು ತಿಳಿಸಿವೆ.