Home News ಲಿಫ್ಟ್ ಗಿಂತಲೂ ವೇಗವಾಗಿ ಏಣಿಯಿಂದ ಕೆಳಗೆ ಇಳಿಯುತ್ತಾನೆ ಪುಟ್ಟ ಪೋರ !!| ಈತನ ಸಾಹಸಕ್ಕೆ ಮೆಚ್ಚುಗೆ...

ಲಿಫ್ಟ್ ಗಿಂತಲೂ ವೇಗವಾಗಿ ಏಣಿಯಿಂದ ಕೆಳಗೆ ಇಳಿಯುತ್ತಾನೆ ಪುಟ್ಟ ಪೋರ !!| ಈತನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ನೆಟ್ಟಿಗರು

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಸಾಕಷ್ಟು ಜನರು ಇದರಿಂದ ಮನೋರಂಜನೆ ಪಡೆಯುತ್ತಾರೆ. ಕೆಲವು ದಿಗ್ಭ್ರಮೆಗೊಳಿಸುವ ವಿಡಿಯೋಗಳಾದರೆ ಕೆಲವು ಹೊಟ್ಟೆ ಹುಣ್ಣಾಗಿಸಿ ನಗು ತರಿಸುತ್ತವೆ. ಹಾಗೆಯೇ ಇನ್ನೊಂದು ಆಶ್ಚರ್ಯಕರ ವಿಡಿಯೋ ವೈರಲ್ ಆಗಿದೆ.

ಪುಟ್ಟ ಬಾಲಕರ ಸಾಹಸದ ವಿಡಿಯೊಗಳನ್ನು ನೋವು ಆಗಾಗ ನೋಡುತ್ತಿರಬಹುದು. ಆದರೆ ಇಲ್ಲೋರ್ವ ಬಾಲಕ ಏಣಿ ಇಳಿಯುತ್ತಿರುವ ವೇಗ ನೋಡಿ ಹಲವರು ಆಶ್ಚರ್ಯಗೊಂಡಿದ್ದಾರೆ. ವೇಗದಲ್ಲಿ ಏಣಿ ಇಳಿದು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಬಾಲಕ ನಡೆದು ಸಾಗುತ್ತಾನೆ.

ಬಾಲಕ ಏಣಿಯ ಮೇಲೇರಿದ್ದಾನೆ. ಕೆಳಗಿಳಿಯಲು ಹೊಸ ವಿಧಾನವನ್ನು ಅನುಸರಿಸಿ ವೇಗದಲ್ಲಿ ಕೆಳಗಿಳಿದಿದ್ದಾನೆ. ಕೆಲವರು ಏಣಿ ಏರುವುದನ್ನು ಚಿಕ್ಕ ಮಕ್ಕಳಿಗೆ ಅಭ್ಯಾಸ ಮಾಡಿಸಬೇಡಿ ಎಂದು ಹೇಳಿದ್ದಾರೆ. ಇನ್ನು ಕೆಲವರು ಬಾಲಕನ ಕೌಶಲ್ಯ ನೋಡಿ ಬೆರಗಾಗಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನೋಡುವಂತೆ ಬಾಲಕ ಏಣಿಯ ಮೇಲೆ ಆರಾಮವಾಗಿ ಕುಳಿತಿದ್ದಾನೆ. ಆತನ ಮುಖದಲ್ಲಿ ಯಾವುದೇ ಭಯ ಕಾಣುತ್ತಿಲ್ಲ. ವೇಗದಲ್ಲಿ ಸರಸರನೆ ಏಣಿ ಇಳಿದು ಕೆಳ ಬಂದಿದ್ದಾನೆ. ಯಾವುದೇ ಆತಂಕವಿಲ್ಲದೇ ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ನಡೆದು ಸಾಗುತ್ತಿದ್ದಾನೆ.

https://www.instagram.com/reel/CVFPE9LjgT0/?utm_source=ig_web_copy_link

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡಾಗಿನಿಂದ 84 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳು ಲಭ್ಯವಾಗಿವೆ. ಹಲವರು ತಮಾಷೆಯ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಈತ ಲಿಫ್ಟ್​ಗಿಂತಲೂ ವೇಗದಲ್ಲಿ ಕೆಳಗಿಳಿದುಬಿಟ್ಟ ಎಂದು ಓರ್ವರು ಹೇಳಿದ್ದಾರೆ. ಇನ್ನು ಕೆಲವರು ಬಾಲಕ ತುಂಬಾ ಚುರುಕಾಗಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋವನ್ನು ಹಲವರು ಮೆಚ್ಚಿಕೊಂಡಿದ್ದು ದೃಶ್ಯ ಇದೀಗ ವೈರಲ್ ಆಗಿದೆ.