Home News Tulsi Growing: ಇಂತಹ ಮನೆಗಳಲ್ಲಿ ತಪ್ಪಿಯೂ ತುಳಸಿಗಿಡ ನೆಡಬಾರದು, ಇಲ್ಲಿದೆ ನೋಡಿ ಅಸಲಿ ಕಾರಣ

Tulsi Growing: ಇಂತಹ ಮನೆಗಳಲ್ಲಿ ತಪ್ಪಿಯೂ ತುಳಸಿಗಿಡ ನೆಡಬಾರದು, ಇಲ್ಲಿದೆ ನೋಡಿ ಅಸಲಿ ಕಾರಣ

Tulsi Growing

Hindu neighbor gifts plot of land

Hindu neighbour gifts land to Muslim journalist

Tulsi Growing: ಹಿಂದೂ ಧರ್ಮದಲ್ಲಿ(Hindu) ತುಳಸಿ ಗಿಡಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ತುಳಸಿಯು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು ಜೊತೆಗೆ ತುಳಸಿ ಗಿಡವನ್ನು ತಾಯಿ ಲಕ್ಷ್ಮಿಯ ರೂಪವೆಂದು ನಂಬಲಾಗುತ್ತದೆ. ಹೀಗಾಗಿ, ಭಾರತದಲ್ಲಿ ಬಹುತೇಕ ಪ್ರತಿ ಮನೆಗಳಲ್ಲೂ ಸಹ ತುಳಸಿ ಬೆಳೆಸಿ(Tulsi Growing)ಪೂಜೆ (Pooja)ಮಾಡುವ ಪದ್ಧತಿ ರೂಢಿಯಲ್ಲಿದೆ.

ತುಳಸಿ ಗಿಡವನ್ನು ಸರಿಯಾದ ಕ್ರಮದಲ್ಲಿ ನೆಡದೆ ಇದ್ದಲ್ಲಿ ಮನೆಯಲ್ಲಿ ಕಷ್ಟ ಕಾರ್ಪಣ್ಯಗಳು ಹೆಚ್ಚಾಗಬಹುದು ಎಂಬ ನಂಬಿಕೆಯಿದೆ. ಶಾಸ್ತ್ರದಲ್ಲಿ ಕೆಲವೊಂದು ಮನೆಗಳಲ್ಲಿ ತುಳಸಿ ಗಿಡವನ್ನು(Tulsi At Home) ನೆಡಬಾರದು ಎಂದು ಉಲ್ಲೇಖ ಮಾಡಲಾಗಿದೆ. ಈ ರೀತಿಯ ಮನೆಗಳಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಜೀವನದಲ್ಲಿ ಅಶುಭ ಘಟನೆಗಳು ಸಂಭವಿಸುತ್ತದೆ. ಹಾಗಿದ್ದರೆ, ತುಳಸಿಯನ್ನು ಎಂತಹ ಮನೆಗಳಲ್ಲಿ ನೆಡಬಾರದು?

# ನೆಲದಲ್ಲಿ ನೆಡಬಾರದು
ತುಳಸಿ ಗಿಡವನ್ನು ಹೆಚ್ಚಿನ ಮನೆಗಳಲ್ಲಿ ಪ್ರತ್ಯೇಕ ಕಟ್ಟೆಯಲ್ಲಿ ನೆಡಲಾಗುತ್ತದೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡವನ್ನು ಖಾಲಿ ನೆಲದ ಮೇಲೆ ನೆಡುವುದು ಉತ್ತಮವಲ್ಲ. ತುಳಸಿ ಗಿಡವನ್ನು ಯಾವಾಗಲೂ ಕುಂಡದಲ್ಲಿ ನೆಡಬೇಕು. ಒಂದು ವೇಳೆ ತುಳಸಿ ಗಿಡ ನೆಲದ ಮೇಲೆ ಇದ್ದರೂ ಅದನ್ನು ತೆಗೆದು ಕುಂಡದಲ್ಲಿ ನೆಡುವುದು ಶ್ರೇಯಸ್ಕರ.

# ಮಾಂಸಹಾರ ಸೇವನೆ
ಮಾಂಸಹಾರ ತಯಾರಿಸುವ ಮನೆಗಳಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಭಗವಾನ್‌ ವಿಷ್ಣು ಹಾಗೂ ತಾಯಿ ಲಕ್ಷ್ಮಿಯು ಕೋಪ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ತಾಯಿ ಲಕ್ಷ್ಮಿಯ ಕೋಪಕ್ಕೆ ಈಡಾಗಿ ಆ ಕುಟುಂಬಗಳಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

# ಮದ್ಯ ಸೇವನೆ
ಯಾವ ಮನೆಯಲ್ಲಿ ಮದ್ಯಪಾನ ಮಾಡುವ ಅಭ್ಯಾಸವಿದೆಯೋ ಅಂತಹ ಮನೆಗಳಲ್ಲಿ ತುಳಸಿ ಗಿಡವನ್ನು ತಪ್ಪಿಯೂ ನೆಡಬಾರದು. ಇಲ್ಲವೇ ಮದ್ಯ ಸೇವನೆ ಮಾಡಿದ ನಂತರ ತುಳಸಿ ಗಿಡವನ್ನು ಪೂಜಿಸಬಾರದು. ಇಂತಹ ಮನೆಗಳಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಶುಭ ಫಲಗಳು ಗೋಚರಿಸುವ ಬದಲು ಅಶುಭ ಫಲಗಳು ಹೆಚ್ಚು ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ.

# ಈ ದಿನ ತುಳಸಿ ಕೀಳಬಾರದು
ಭಾನುವಾರ ಮತ್ತು ಏಕಾದಶಿಯ ದಿನದಂದು ನೀವು ತುಳಸಿ ಗಿಡವನ್ನು ಇಲ್ಲವೇ. ತುಳಸಿ ಎಲೆಗಳನ್ನು ಕೀಳಬಾರದು. ಈ ಎರಡು ದಿನಗಳಲ್ಲಿ ತುಳಸಿ ಎಲೆ ಇಲ್ಲವೇ ತುಳಸಿ ಗಿಡ ಕೀಳುವುದರಿಂದ ತಾಯಿ ಲಕ್ಷ್ಮಿ ನಿಮ್ಮ ಮೇಲೆ ಕೋಪಾಗೊಳ್ಳುತ್ತಾಳೆ. ಹೀಗಾಗಿ, ಈ ಎರಡು ದಿನ ತುಳಸಿಯನ್ನು ಮುಟ್ಟದಿದ್ದರೆ ಉತ್ತಮ.

ಇದನ್ನೂ ಓದಿ:Post Office Jobs: ನೀವು 10th ಪಾಸಾಗಿದ್ದೀರಾ? ಅಂಚೆ ಇಲಾಖೆಯಲ್ಲಿ ನಿಮಗಿದೆ ಬಂಪರ್‌ ಉದ್ಯೋಗಾವಕಾಶ, ಮಾಸಿಕ ರೂ.63,000 ಸಂಬಳ!!