Home News ಹಾಕಿಕೊಂಡ ಲೆಹೆಂಗಾ ಡ್ರೆಸ್ ಭಾರ ಇದೆಯಾ ಎಂದು ಕೇಳಿದ್ದಕ್ಕೆ ಸ್ಟೇಜ್ ನಲ್ಲೇ ‘ ಬನ್ನಿ ಎತ್ತಿ...

ಹಾಕಿಕೊಂಡ ಲೆಹೆಂಗಾ ಡ್ರೆಸ್ ಭಾರ ಇದೆಯಾ ಎಂದು ಕೇಳಿದ್ದಕ್ಕೆ ಸ್ಟೇಜ್ ನಲ್ಲೇ ‘ ಬನ್ನಿ ಎತ್ತಿ ನೋಡಿ’ ಅನ್ನೋದಾ ಈ ನಟಿ | ವೀಕ್ಷಕ ಗ್ಯಾಲರಿಯಲ್ಲಿ ಕೂತಿದ್ದ ಗಂಡನಿಗೆ ಶಾಕ್ !!

Hindu neighbor gifts plot of land

Hindu neighbour gifts land to Muslim journalist

ಮನೊರಂಜನಾ ಚಾನೆಲ್ ಕಲರ್ಸ್ ಕನ್ನಡದಲ್ಲಿ ಈಗ ಅನುಬಂಧ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಕಿರುತೆರೆ ತಾರೆಗಳ ಝಲಕ್ ಸದ್ದು ಮಾಡುತ್ತಿದೆ.
ಅಕ್ಟೋಬರ್ 15ರಂದು ರಾತ್ರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಅನುಬಂಧ ಅವಾರ್ಡ್‌ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದು ನಿವೇದಿತಾ ಗೌಡ. ಬಿಗ್‌ಬಾಸ್ ಖ್ಯಾತಿಯ ಸುಂದರಿ, ರ್ಯಾಪರ್ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಗೇಮ್‌ನಲ್ಲಿ ಭಾಗವಹಿಸಿದ್ದರು.

ಫನ್ ಗೇಮ್ ಆಡಿಸಿದ ನಿರೂಪಕ ಸೃಜನ್ ಲೋಕೇಷ್‌ಗೆ ಫನ್ನಿ ಫನ್ನಿ ಉತ್ತರ ಕೊಟ್ಟಿರೋ ನಿವೇದಿತಾ ಗೌಡ ಗೇಮ್ ಹವರ್ ಎಂಜಾಯ್ ಮಾಡುವುದರ ಜೊತೆಗೆ ಪ್ರೇಕ್ಷಕರನ್ನೂ ನಗಿಸಿದ್ದಾರೆ. ಪತಿ ಚಂದನ್ ಶೆಟ್ಟಿ ಪ್ರೇಕ್ಷಕನಾಗಿ ಪತ್ನಿಯ ಗೇಮ್ ನೋಡಿ ರಿಯಾಕ್ಟ್ ಮಾಡಿದ್ದು ಇನ್ನೂ ಸೊಗಸಾಗಿತ್ತು. ಆದ್ರೆ ಚಂದನ್ ರ ಚಂದದ ನಗು ಹೆಚ್ಚು ಕಾಲ ಉಳಿದಿರಲಿಲ್ಲ.

ಗೇಮ್ ಆಡಲು ಬಂದು ಆಟ ಗೆದ್ದ ನಿವೇದಿತಾ ಗಾಢ ಹಸಿರು ಬಣ್ಣದ ಲೆಹಂಗಾ ಧರಿಸಿಕೊಂಡು ಬಂದಿದ್ದಳು. ಉದ್ದದ ಲಂಗ ಅಲಿಯಾಸ್ ಲೆಹೆಂಗಾ ವನ್ನು ನಿವೇದಿತಾಗೆ ಸಂಭಾಳಿಸೋದು ಕಷ್ಟ ಆಗುತ್ತಿತ್ತು. ಅಥವಾ ಆ ರೀತಿ ಆಕೆ ನಟಿಸುತ್ತಿದ್ದಳು !
ಬಹುಶಃ ಅದೆಲ್ಲ ಸ್ಕ್ರಿಪ್ತೆಡ್ ಇದ್ದಿರಬಹುದು. ಆ ಗೇಮ್ ಕೊನೆಯಲ್ಲಿ ನಿವೇದಿತಾಗೆ ಸೃಜನ್ ಪ್ರಶ್ನೆ ಮಾಡಿದ್ದರು.
” ಈ ಬಟ್ಟೆ ತುಂಬಾ ಭಾರ ಇದೆಯಾ ?” ಹಾಗಂತ ಕೇಳಿದ ತಕ್ಷಣ, “ಬನ್ನಿ ಎತ್ತಿ ನೋಡಿ” ಎಂದಿದ್ದಾರೆ ನಿವೇದಿತಾ. ಡಬ್ಬಲ್ ಮೀನಿಂಗ್ ಉತ್ತರ ಬರುವಂತೆ ಹೇಳಿಸಲಾಗಿದ್ದ ನಿವೇದಿತಾ ಮಾತಿಗೆ ವೀಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ.
ಇದು ಫ್ಯಾಮಿಲಿ ಶೋ ಹಾಗೆಲ್ಲಾ ಆಗಲ್ಲ ಎಂದಿರೋ ಸೃಜನ್ ಮಾತಿಗೆ ಚಂದನ್ ನಗಳಾರದೆ ಗಂಟು ಮುಖಮಾಡಿ ನಕ್ಕಿದ್ದಾರೆ.

ಅಲ್ಲಿಗೆ ಕಲರ್ಸ್ ಕನ್ನಡ ಮತ್ತು ಸೃಜನ್ ಲೋಕೇಶ್ ಅವರ ಪ್ಲಾನ್ ಸಕ್ಸಸ್ ಆಗಿದೆ. ಮುಗ್ಧಳಲ್ಲದ, ಮುಗ್ದ ಎಂದು ಸದಾ ಬಿಂಬಿಸಲ್ಪಡುವ ನಿವೇದಿತಾರ ನೇರ ಮಾತಿಗೆ ವೀಕ್ಷಕ ಖುಷ್. ಈಗ ಕಾರ್ಯಕ್ರಮದ ಪ್ರೋಮೋಗಳು, ಫೋಟೋ, ವಿಡಿಯೋಗಳು ಈಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಎಲ್ಲರೂ ಖುಷ್ , ಗಂಡ ಚಂದನ್ ಒಬ್ಬನನ್ನು ಬಿಟ್ಟು !!