Home News Rajinikant: ತಲೈವಾ ರಜನಿಕಾಂತ್ ತನ್ನ ಜೀವನದಲ್ಲಿ ಮಾಡಿದ ಅತಿ ದೊಡ್ಡ ತಪ್ಪು ಯಾವುದು ಗೊತ್ತೇ?

Rajinikant: ತಲೈವಾ ರಜನಿಕಾಂತ್ ತನ್ನ ಜೀವನದಲ್ಲಿ ಮಾಡಿದ ಅತಿ ದೊಡ್ಡ ತಪ್ಪು ಯಾವುದು ಗೊತ್ತೇ?

Rajinikant
Latest news: vistara news

Hindu neighbor gifts plot of land

Hindu neighbour gifts land to Muslim journalist

Rajinikant: ಎಷ್ಟೇ ಖ್ಯಾತ ನಟರಾಗಿದ್ದರು ಸಹ ಸಣ್ಣ ವೀಕ್ನೆಸ್ ಅವರನ್ನು ಜೀವನದಲ್ಲಿ ಹೊರ ಬರದಂತೆ ಮಾಡುತ್ತದೆ. ಅಂತೆಯೇ ಬಾಲಿವುಡ್ ಮತ್ತು ಸೌತ್ ಸೂಪರ್‌ಸ್ಟಾರ್ ರಜನಿಕಾಂತ್ (Rajinikant) ಅವರು ಜೀವನದಲ್ಲಿ ಮಾಡಿದ ತಪ್ಪು ಒಪ್ಪಿಕೊಂಡಿದ್ದಾರೆ.

ಹೌದು, ಕುಡಿತದ ಚಟಕ್ಕೆ ಬಲಿಯಾಗಿರುವ ಕುರಿತು ಮಾತನಾಡಿರುವ ಸೂಪರ್ ಸ್ಟಾರ್ ರಜನಿಕಾಂಟ್ `ಮದ್ಯ ಇಲ್ಲದೆ ಇದ್ದಿದ್ದರೆ ನಾನು ಸಮಾಜ ಸೇವೆ ಮಾಡುತ್ತಿದ್ದೆ. ಕುಡಿತದ ಚಟ ನನ್ನ ಜೀವನದ ದೊಡ್ಡ ತಪ್ಪು` ಎಂದು ಹೇಳಿದ್ದಾರೆ.

ಸದ್ಯ ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ ‘ಜೈಲರ್’ ಆಗಸ್ಟ್ 10 ರಂದು ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ಚಿತ್ರದ ಬಿಡುಗಡೆಗೂ ಮುನ್ನ ನಿರ್ಮಾಪಕರು ಆಡಿಯೋ ಬಿಡುಗಡೆ ಮಾಡಿದ್ದು, ಇದರಲ್ಲಿ ನಟ ರಜನಿಕಾಂತ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ವಿವಿಧ ವಿಷಯಗಳ ಕುರಿತು ಮಾತನಾಡಿದಾರೆ. ಇದರಲ್ಲಿ ಅವರು ತಮ್ಮ ಮದ್ಯದ ಚಟದ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ. ತನ್ನ ಕುಡಿತದ ಚಟವು ಜೀವನದ ದೊಡ್ಡ ತಪ್ಪು ಎಂದು ಬಣ್ಣಿಸಿದ ಅವರು, ಇದು ನಿಮ್ಮ ಆರೋಗ್ಯ ಮತ್ತು ಸಂತೋಷ ಎರಡನ್ನೂ ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮಧ್ಯಪಾನದ ಚಟದ ಬಗ್ಗೆ ಮಾತನಾಡುತ್ತಾ, ‘ಮದ್ಯ ಇಲ್ಲದೇ ಇದ್ದಿದ್ದರೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೆ. ಕುಡಿತದ ಚಟ ನನ್ನ ಜೀವನದ ದೊಡ್ಡ ತಪ್ಪು. ಸಂಪೂರ್ಣವಾಗಿ ಮದ್ಯ ಸೇವಿಸಬೇಡಿ ಎಂದು ನಾನು ನಿಮಗೆ ಹೇಳುವುದಿಲ್ಲ. ನಿಮಗೆ ಬೇಕು ಎನಿಸಿದಾಗ ಯಾವಾಗಲಾದರೂ ಒಮ್ಮೆ ತೆಗೆದುಕೊಳ್ಳಿ. ಆದರೆ ಪ್ರತಿದಿನ ಮಾತ್ರ ಮದ್ಯಪಾನ ಮಾಡಬೇಡಿ. ಯಾಕಂದರೆ ಅದು ನಿಮ್ಮ ಅರೋಗ್ಯದ ಜೊತೆಗೆ ನಿಮ್ಮ ಸುತ್ತಾ ಇರುವವರ ಸಂತೋಷವನ್ನು ಹಾಳು ಮಾಡುತ್ತದೆ. ನೀವು ಸೇವಿಸುವುದರಿಂದ ನಿಮ್ಮ ಜೀವನ ತಲೆಕೆಳಗಾಗುತ್ತದೆ. ನಿಮ್ಮ ಪೋಷಕರು, ಹೆಂಡತಿ, ಮಕ್ಕಳು ಎಲ್ಲರೂ ಇದರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಅದಕ್ಕೆ ಕುಡಿತ ಬೇಡ” ಎಂದು ರಜನಿಕಾಂತ್ ಹೇಳಿದ್ದಾರೆ.

ರಜನಿಕಾಂತ್ ಅವರು ತಮಿಳು ನಾಟಕ ಚಾರುಕೇಸಿಯ 50 ನೇ ದಿನದ ಆಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆಗ ಅವರು ಚಟ ಬಿಡಿಸಿದ್ದಕ್ಕಾಗಿ ತಮ್ಮ ಪತ್ನಿ ಲತಾ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಅಲ್ಲದೆ, ವೈ.ಜಿ.ಮಹೇಂದ್ರನ್ ಅವರಿಗೆ ನಾನು ಚಿರಋಣಿ ಎಂದು ಹೇಳಿದ್ದರು. ನಾನು ಕಂಡಕ್ಟರ್ ಆಗಿದ್ದಾಗ ಪ್ರತಿದಿನ ಮದ್ಯಪಾನ ಮಾಡುತ್ತಿದ್ದೆ ಮತ್ತು ಪ್ರತಿದಿನ ಎಷ್ಟು ಸಿಗರೇಟ್ ಸೇದುತ್ತಿದ್ದೆ ಎಂಬುದಕ್ಕೆ ಲೆಕ್ಕವಿಲ್ಲ. ನಾನ್ ವೆಜ್ ನೊಂದಿಗೆ ದಿನವನ್ನು ಆರಂಭಿಸಿ ದಿನಕ್ಕೆರಡು ಬಾರಿಯಾದರೂ ನಾನ್ ವೆಜ್ ತಿನ್ನುತ್ತಿದ್ದೆ ಎಂದಿದ್ದಾರೆ.

‘ನನ್ನ ಪ್ರಕಾರ ಈ ಮೂರನ್ನು ದೀರ್ಘಕಾಲ ಸೇವಿಸುವವರು 60ರ ನಂತರ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ವಾಸ್ತವದಲ್ಲಿ ನನ್ನ ಮೇಲೆ ಪ್ರೀತಿಯ ಸುರಿಮಳೆಗೈದು ನನ್ನನ್ನು ಬದಲಾಯಿಸಿದವಳು ನನ್ನ ಪತ್ನಿ ಲತಾ. ಅವರು ನನಗೆ ಶಿಸ್ತುಬದ್ಧ ಜೀವನ ನಡೆಸಲು ಪ್ರೇರಣೆ ನೀಡಿದರು ಎಂದಿದ್ದಾರೆ.

ಸದ್ಯಕ್ಕೆ ತಮ್ಮ ಮುಂಬರುವ ಚಿತ್ರ ಜೈಲರ್ ನಲ್ಲಿ ಸೂಪರ್‌ಸ್ಟಾರ್ ಮುತ್ತುವೆಲ್ ಪಾಂಡಿಯನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ತಮನ್ನಾ ಭಾಟಿಯಾ, ಶಿವ ರಾಜ್‌ಕುಮಾರ್, ಜಾಕಿ ಶ್ರಾಫ್, ಮೋಹನ್ ಲಾಲ್ ಮತ್ತು ಯೋಗಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ.

 

ಇದನ್ನು ಓದಿ: Bihar: ಹನಿಮೂನ್ ಕನಸಲ್ಲಿದ್ದ ಗಂಡ, ರೈಲಿನಲ್ಲಿ ಪ್ರಯಾಣ ಮಾಡುವಾಗಲೇ ಕಾಣೆಯಾದ ನವವಧು! ಅಷ್ಟಕ್ಕೂ ಆಕೆ ಹೋಗಿದೆಲ್ಲಿ?