

Latest news: ಕಳೆದೆರಡು ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವುದು ವರದಿಯಾಗುತ್ತಿದೆ. ಹಾಗೆನೇ ಜಾರ್ಖಂಡ್‌ನ ವಿವಿಧ ಜಿಲ್ಲೆಗಳಲ್ಲಿ ಕೂಡಾ ಮಳೆರಾಯನ ಆರ್ಭಟ ಹೆಚ್ಚಿದೆ. ಈ ಅಬ್ಬರಕ್ಕೆ ಜಮ್ತಾರಾದ ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಚಂದಾಡಿಹ್ ಲಖನ್‌ಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ ನಾಲ್ವರಲ್ಲಿ ಓರ್ವ ಮಹಿಳೆ, ಮೂವರು ಮಕ್ಕಳು ಇದ್ದಾರೆ.
ಮೃತರನ್ನು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ನಿವಾಸಿ ಧನು ಚೌಧರಿಯ 30 ವರ್ಷದ ಪತ್ನಿ ನೇಹಾ ಚೌಧರಿ, 11 ವರ್ಷದ ಮಗ ಅಂಕಿತ್ ಚೌಧರಿ, 5 ವರ್ಷದ ಗಗನ್ ಚೌಧರಿ ಮತ್ತು ಸುಮಾರು 10 ತಿಂಗಳ ಹೆಣ್ಣು ಮಗು ಎಂದು ಗುರುತಿಸಲಾಗಿದೆ. ಇಚ್ಛಾ ಕುಮಾರಿ. ಭಾನುವಾರ ಸಂಜೆ ಕುಟುಂಬದ ಏಳು ಮಂದಿ ಸ್ಥಳದಲ್ಲಿ ಇದ್ದಾಗ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ನೇಹಾ ಚೌಧರಿ ತಮ್ಮ ಮೂವರು ಮಕ್ಕಳೊಂದಿಗೆ ಟೆಂಟ್‌ನಲ್ಲಿದ್ದು, ಮೊಬೈಲಿನಲ್ಲಿ ರೀಲುಗಳನ್ನು ನೋಡುತ್ತಿದ್ದಳು. ಆಕೆಯ ಮೂರು ಮಕ್ಕಳು ಮಲಗಿದ್ದರು. ಆ ಸಮಯದಲ್ಲಿ ಜೋರಾಗಿ ಮಳೆ ಬಂದು ಏಕಾ ಏಕಿ ಟೆಂಟ್ ಏಲೆ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ.
ಕೂಡಲೇ ಸ್ಥಳೀಯ ಜನರ ಸಹಾಯದಿಂದ ಎಲ್ಲರನ್ನು ಆಂಬ್ಯುಲೆನ್ಸ್ ಮೂಲಕ ನಾರಾಯಣಪುರ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗೆ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರು ಬದುಕುಳಿಯಲಿಲ್ಲ.













