Home News U. T. Khader-Araga Jnanendra: ಸ್ವಾರಸ್ಯಕರ ವಿಷ್ಯಕ್ಕೆ ಸಾಕ್ಷಿಯಾಯ್ತು ವಿಧಾನಸೌಧ ; ‘ ನನ್ನ ಕುರ್ಚಿ...

U. T. Khader-Araga Jnanendra: ಸ್ವಾರಸ್ಯಕರ ವಿಷ್ಯಕ್ಕೆ ಸಾಕ್ಷಿಯಾಯ್ತು ವಿಧಾನಸೌಧ ; ‘ ನನ್ನ ಕುರ್ಚಿ ವಾಸ್ತು ಸರಿ ಉಂಟಾ ? ’ – ಸ್ಪೀಕರ್ ಖಾದರ್ , ‘ ಡೌಟಾದ್ರೆ ರೇವಣ್ಣನ ಕೇಳಿ ’ ಅಂದ ಅರಗ !

U. T. Khader-Araga Jnanendra

Hindu neighbor gifts plot of land

Hindu neighbour gifts land to Muslim journalist

U. T. Khader-Araga Jnanendra : ವಿಧಾನಸೌಧ ಪ್ರವೇಶದ್ವಾರ ಹಾಗೂ ಸ್ಪೀಕರ್‌ ಕುರ್ಚಿಯ ವಾಸ್ತು ಬಗ್ಗೆ ಮಂಗಳವಾರ ವಿಧಾನ ಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ವಿಧಾನಸೌಧಕ್ಕೆ ಬರಲು ಒಂದು ಗೇಟ್‌ ಮಾತ್ರ ತೆರೆಯಲಾಗಿದೆ. ಕೇವಲ ಪಶ್ಚಿಮ ದ್ವಾರದಿಂದ ಎಲ್ಲಾ ಶಾಸಕರು ಬರುವುದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಪೂರ್ವ ದ್ವಾರ ತೆರೆದರೆ ಅನುಕೂಲ ಎಂದು ಸಚಿವ ಕೆ.ಜೆ. ಜಾರ್ಜ್‌ ಹೇಳಿದರು. ಈ ವೇಳೆ ಮಾತನಾಡಿದ ಸ್ಪೀಕರ್‌ ಯು.ಟಿ. ಖಾದರ್‌, ಪೂರ್ವ ದ್ವಾರದಿಂದಲೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ತಿಳಿಸುತ್ತೇನೆ. ಅಲ್ಲಿಯವರೆಗೆ ಅರ್ಧ ಗಂಟೆ ಮೊದಲೇ ಹೊರಟರೆ ತಲುಪಬಹುದು ಎಂದರು.

ಈ ಚರ್ಚೆಯಲ್ಲಿ ನಂದೂ ಒಂದಿರಲಿ ಎಂದು, ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಮಧ್ಯ ಪ್ರವೇಶಿಸಿ, ‘ವಾಸ್ತು ಪ್ರಕಾರ ಮುಚ್ಚಿರಬಹುದು’ ಎಂದು ಹಾಸ್ಯ ಚಟಾಕಿ ಬೀಸಿದರು. ಇದಕ್ಕೆ ಸರಿಯಾಗಿ ಯು.ಟಿ. ಖಾದರ್‌ ಪ್ರತಿಕ್ರಿಯಿಸಿ ‘ನನ್ನ ಕುರ್ಚಿ ವಾಸ್ತು ಸರಿ ಇದೆಯಲ್ಲಾ?’ ಎಂದು ಕೇಳಿದ್ದಾರೆ. ಆಗ ಬಿಜೆಪಿಯ ಸದಸ್ಯ ಆರಗ ಜ್ಞಾನೇಂದ್ರ ‘ಗೊಂದಲ ಇದ್ದರೆ ಎಚ್‌.ಡಿ. ರೇವಣ್ಣ ಬಳಿ ಕೇಳಿ ’ ಎಂದು ಹೇಳುವ (U. T. Khader-Araga Jnanendra) ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಎಚ್. ಡಿ. ರೇವಣ್ಣನವರು ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಈ ಹಿಂದೆ ಸುದ್ದಿಯಾಗಿದ್ದರು ಅನ್ನೋದನ್ನು ಇಲ್ಲಿ ನೆನೆಯಬಹುದು.

ಬಳಿಕ ಸದನಕ್ಕೆ ನಿಗದಿತ ಸಮಯಕ್ಕೆ ಬಂದವರ ಹೆಸರನ್ನು ಖಾದರ್ ಅವರು ಓದಿದರು. ಈ ವೇಳೆ ಶಾಸಕ ಸುರೇಶ್ ಕುಮಾರ್ ಮುಂದೆ ಬಂದು, ‘ ಮೊದಲು ಬಂದವರು ಯಾಕೆ, ಕೊನೆಯವರೆಗೂ ಇದ್ದವರು ಹೆಸರೇಳಿ. ನಾವು ಹಿಂದೆ ಕಾಲೇಜಿನಲ್ಲಿ ಹಾಜರಾತಿ ಹಾಕಿ, ಕ್ಲಾಸ್ ಗೆ ಚೆಕ್ಕರ್ ಹಾಕಿ ಹೋಗ್ತಿದ್ವಿ. ಹಾಗಾಗಿ ಕ್ಲಾಸು ಮುಗಿಸಿ ಹೋಗುವಾಗ ಅಟೆಂಡೆನ್ಸ್ ತೆಗೀತಿದ್ರು’ ಎಂದ ನಗೆ ಚಟಾಕಿಯನ್ನು ಹಾರಿಸಿದ್ದಾರೆ.

ಸದನಕ್ಕೆ ಎಂಟ್ರಿ ಆಗುತ್ತಿರುವಾಗಲೇ ಸ್ಪೀಕರ್ ಖಾದರ್ ಅವರು, ಖುಷಿಖುಷಿಯಾಗಿ ಲವಲವಿಕೆಯಿಂದ ಎಂಟ್ರಿ ಆಗಿದ್ದರು. ‘ ಏನು ಸಾಹೇಬ್ರೆ ತುಂಬಾ ಖುಷಿಯಾಗಿದ್ದೀರಾ’ ಎಂದು ಅವರನ್ನು ಪ್ರಶ್ನಿಸಿದಾಗ, ‘ ನಾನು ಖುಷಿಯಾಗಿದ್ರೆ ನೀವು ಖುಷಿಯಾಗಿರ್ತೀರಾ ನೀವು ಖುಷಿ ಇದ್ರೆ ನಾನು ಖುಷಿ ಇರ್ತೇನೆ’ ಹೀಗೆ ಭಾವಾರ್ಥದ ಮಾತಾಡಿದ್ದಾರೆ. ಮಂಗಳೂರು ತುಳು ಮಲಯಾಳ ಮಿಶ್ರಿತ ಕನ್ನಡದಲ್ಲಿ ಅವರು ಮಾತಾಡಿದ ಸ್ಟೈಲ್ ಗೆ ಎಂದಿನಂತೆ ಉತ್ತರ ಕರ್ನಾಟಕದ ಮಂದಿ ನಗೆ ಬೀರಿದ್ದಾರೆ. ಜಗಳ ಪೆನ್ ಡ್ರೈವ್ ಬಾಂಬು ಸ್ಪೋಟ ಇತ್ಯಾದಿ ಸುದ್ದಿಯ ನಡುವೆ ಒಂದಷ್ಟು ಕಾಮಿಡಿ ಕೂಡ ವಿಧಾನಸೌಧದ ಒಳಗೆ ಹರಿದಾಡಿದೆ.

 

ಇದನ್ನು ಓದಿ: Free Ticket: ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಟಿಕೆಟ್ ಎಳಿಲಾ ಬೇಡ್ವಾ ಅಂತ ಗೊಂದಲಕ್ಕೆ ಬಿದ್ದ ಕಂಡಕ್ಟರ್‌ !