Home News Aadhaar PAN linking: ಆಧಾರ್ ಪಾನ್ ಲಿಂಕ್ ಮಾಡಲು 1,000 ಕಟ್ಟಿದರೂ ಚಲನ್ ಬಂದಿಲ್ವಾ? ಜಸ್ಟ್...

Aadhaar PAN linking: ಆಧಾರ್ ಪಾನ್ ಲಿಂಕ್ ಮಾಡಲು 1,000 ಕಟ್ಟಿದರೂ ಚಲನ್ ಬಂದಿಲ್ವಾ? ಜಸ್ಟ್ ಹೀಗೆ ಮಾಡಿ ಸಾಕು !

Aadhaar PAN linking
image source: Zee business

Hindu neighbor gifts plot of land

Hindu neighbour gifts land to Muslim journalist

Aadhaar PAN linking: ಇದೀಗ ಆಧಾರ್-ಪ್ಯಾನ್ ಜೋಡಣೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಲು ನಿನ್ನೆ (ಜೂನ್ 30) ಅಂತಿಮ ಗಡುವಾಗಿತ್ತು. ಆದರೆ ಅಂತಿಮ ಹಂತದಲ್ಲಿ ಲಿಂಕ್ ಮಾಡಲು ಮುಂದಾದವರಿಗೆ ಹಲವು ಸಮಸ್ಯೆಗಳು ಎದುರಾಗಿದ್ದು, ಶುಲ್ಕ ಪಾವತಿ ಮಾಡಿದ ಬಳಿಕ ಚಲನ್‌ ಡೌನ್‌ಲೋಡ್‌ ಮಾಡಲಾಗದೆ ಅನೇಕ ಮಂದಿ ತೊಂದರೆ ಎದುರಿಸಿದ್ದರು. ಈ ವಿಚಾರ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದ್ದು ತಡರಾತ್ರಿ ಸ್ಪಷ್ಟೀಕರಣ ನೀಡಿದೆ. ಆಧಾರ್‌ನೊಂದಿಗೆ ಪ್ಯಾನ್ ಲಿಂಕ್(Aadhaar PAN linking) ಮಾಡಲು ಚಲನ್ ರಸೀದಿಯನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ ಎಂದು ಐಟಿ ಇಲಾಖೆ(income tax department) ಸ್ಪಷ್ಟಪಡಿಸಿದೆ.

ಆಧಾರ್-ಪ್ಯಾನ್ ಲಿಂಕ್ (Aadhaar PAN linking) ಮಾಡಲು ಚಲನ್ ಪಾವತಿಯ ಸ್ಥಿತಿ ಅಥವಾ ಸ್ಟೇಟಸ್‌ ತಿಳಿಯಲಾಗದೆ ಬಹಳಷ್ಟು ಜನ ತೊಂದರೆಗೊಳಗಾದ ಘಟನೆ ನಿನ್ನೆ (ಜೂ.30) ವರದಿಯಾಗಿದೆ. ಲಾಗಿನ್ ಆದ ನಂತರ ಪೋರ್ಟಲ್‌ನ ‘ಇ-ಪೇ ಟ್ಯಾಕ್ಸ್’ ಟ್ಯಾಬ್‌ನಲ್ಲಿ ಚಲನ್ ಪಾವತಿಯ ಸ್ಥಿತಿ ಹಾಗೂ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಪಾವತಿ ಯಶಸ್ವಿಯಾದರೆ, ಪ್ಯಾನ್ ಹೊಂದಿರುವವರು ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಮುಂದುವರಿಯಬಹುದು ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಿದೆ.

“ಆಧಾರ್‌ನೊಂದಿಗೆ ಪ್ಯಾನ್ ಲಿಂಕ್(Aadhar card pan card linking) ಮಾಡಲು ಚಲನ್ ರಸೀದಿಯನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಇದಲ್ಲದೆ, ಪ್ಯಾನ್ ಹೊಂದಿರುವವರು ಪಾವತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ತಕ್ಷಣ,ಪ್ಯಾನ್ ಕಾರ್ಡ್​​ದಾರರಿಗೆ ಚಲನ್‌ನ ಪ್ರತಿಯನ್ನು ಇಮೇಲ್ ಮೂಲಕ ಕಳುಹಿಸಲಾಗುತ್ತಿದೆ” ಎಂದು ಇಲಾಖೆಯು ತಿಳಿಸಿದೆ.

ಅಲ್ಲದೆ, ಶುಲ್ಕ ಪಾವತಿ ಮತ್ತು ಜೋಡಣೆ ಮಾಡಲು ಒಪ್ಪಿಗೆ ಪಡೆದ ಪ್ರಕರಣಗಳನ್ನು ಪರಿಗಣಿಸುವುದಾಗಿ ಐಟಿ ಇಲಾಖೆ ತಿಳಿಸಿದೆ. ಆದರೆ ಜೂನ್ 30 ರವರೆಗೆ ಶುಲ್ಕ ಪಾವತಿ ಮತ್ತು ಜೋಡಣೆ ಮಾಡದಿರುವ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಲಾಗುವುದಾಗಿ ಇಲಾಖೆಯು ಸ್ಪಷ್ಟನೆ ನೀಡಿದೆ

 

ಇದನ್ನು ಓದಿ: KRS Dam: ಕೆಆರ್ ಎಸ್’ನಲ್ಲಿಯೇ ಮೀಟಿಂಗ್ ಮಾಡಲು ಹೊರಟ್ರಾ ಡಿಸಿಎಂ ಡಿಕೆ ಶಿವಕುಮಾರ್ ?