Home News Murder: ಆಸ್ತಿಗಾಗಿ ಸಹೋದರರ ಸವಾಲ್: ಪುತ್ತೂರಿನ ಅಣ್ಣನನ್ನು ಚಾಕು ಇರಿದು ಕೊಲೆ ಮಾಡಿದ ತಮ್ಮ !

Murder: ಆಸ್ತಿಗಾಗಿ ಸಹೋದರರ ಸವಾಲ್: ಪುತ್ತೂರಿನ ಅಣ್ಣನನ್ನು ಚಾಕು ಇರಿದು ಕೊಲೆ ಮಾಡಿದ ತಮ್ಮ !

Murder

Hindu neighbor gifts plot of land

Hindu neighbour gifts land to Muslim journalist

Murder: ಆಸ್ತಿಗಾಗಿ ಸಹೋದರರ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ (Murder) ಅಂತ್ಯವಾದ ಘಟನೆ ಕೊಡಗು ಜಿಲ್ಲೆಯ ಚೆಂಬು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ.

ಪುತ್ತೂರಿನ (Puttur) ಸಂಪ್ಯ ನಿವಾಸಿ ಉಸ್ಮಾನ್ ಶುಕ್ರವಾರ ಕುದ್ರೆಪಾಯದಲ್ಲಿನ ತಮ್ಮ ಜಾಗಕ್ಕೆ ಹೋಗಿದ್ದರು. ಈ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ಮಾತು ಮಿತಿ ಮೀರಿ, ಕೋಪ ಹೆಚ್ಚಾಗಿ ಸಹೋದರ ಉಸ್ಮಾನ್ ಅವರಿಗೆ ಚಾಕುವಿನಿಂದ ಚುಚ್ಚಿದ್ದಾರೆ.

ಘಟನೆಯಿಂದ ಗಂಭೀರ ಗಾಯಗೊಂಡ ಉಸ್ಮಾನ್ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಕೊಡಗು ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಅಣ್ಣತಮ್ಮದಿರಾದ ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿತ್ತು. ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇಂದು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ.

ಉಸ್ಮಾನ್ ಎಂಬವರು ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ ಜಾಗವಿದೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಇವರು ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ. ಕೊಡಗು ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

 

ಇದನ್ನು ಓದಿ: Viral News: 6000 ವರ್ಷಗಳ ಹಿಂದಿನ ಚ್ಯೂಯಿಂಗ್ ಗಮ್ ಪತ್ತೆ, ಅದನ್ನು ಜಗಿಯುವ ಮುನ್ನ ಆ ಹುಡುಗಿ ಊಟ ಮಾಡಿದ್ದಳಂತೆ !