Home News Liquor Rate Hike: ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ !! ಈ ದಿನದಿಂದಲೇ ಹೆಚ್ಚಾಗಲಿದೆ...

Liquor Rate Hike: ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ !! ಈ ದಿನದಿಂದಲೇ ಹೆಚ್ಚಾಗಲಿದೆ ಇವುಗಳ ಬೆಲೆ !!

Liquor Rate Hike
Image source- Hooch blog

Hindu neighbor gifts plot of land

Hindu neighbour gifts land to Muslim journalist

Liquor Rate Hike: ರಾಜ್ಯ ಸರ್ಕಾರವು ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ. ಇದೀಗ ಮತ್ತೆ ರೇಟ್ ಹೆಚ್ಚಳ ಮಾಡಿದ್ದು ಇದೇ ಜುಲೈ 20 ರಿಂದ ಇವುಗಳ ಬೆಲೆ ಹೆಚ್ಚಾಗಲಿದೆ.

ಹೌದು, ಕರ್ನಾಟಕ(Karnataka)ದಲ್ಲಿ ಮದ್ಯ ದರ ಭಾರೀ ಹೆಚ್ಚಳವಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮದ್ಯ ದರ ಏರಿಕೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮದ್ಯದ ಬೆಲೆಯ ಏರಿಕೆಯ ಬಗ್ಗೆ ರಾಜ್ಯ ಬಜೆಟ್‌(Budget) ನಲ್ಲಿ ಈಗಾಗಲೇ ಸಿಎಂ(CM Siddaramaiah) ತಿಳಿಸಿದ್ದಾರೆ.

ಅಂದಹಾಗೆ ಕೆಲ ದಿನಗಳ ಹಿಂದೆ ಬೆಲೆ ಏರಿಕೆ ಬಿಯರ್‌ದು ಮಾತ್ರ ಆಗಿದ್ದು, ಅದು ಕಂಪನಿಗಳೇ ಮಾಡಿಕೊಂಡಿರುವ ಹೆಚ್ಚಳವಾಗಿತ್ತು. ಲಿಕ್ಕರ್‌ ದರ ಹೆಚ್ಚಳವಾಗಿರಲಿಲ್ಲ. ಸರ್ಕಾರಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಅಬಕಾರಿ ಇಲಾಖೆ ಸ್ಪಷ್ಟನೆ ನೀಡಿತ್ತು. ಆದರೀಗ ಬಜೆಟ್ ಮಂಡನೆ ವೇಳೆ ಸ್ವತಃ ಸಿದ್ದರಾಮಯ್ಯ ಅವರೇ ಸುಂಕ ಹೆಚ್ಚಳದ ಬಗ್ಗೆ ಹೇಳಿದ್ದರು. ಅದರಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20ರಿಂದ ಜಾರಿಗೆ ಬರಲಿದೆ.

ಬ್ರಾಂಡಿ(Brandy), ವಿಸ್ಕಿ(Vicki), ರಮ್(Rum), ಜಿನ್ ಸೇರಿದಂತೆ ಎಲ್ಲ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಫ್ಲ್ಯಾಬ್‌ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇ.20 ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.175ರಿಂದ 185 ಅಂದರೆ ಶೇ.10ರಷ್ಟು ಹೆಚ್ಚಳ ಮಾಡುವ ಬಗ್ಗೆ ಗೆಜೆಟ್‌ ಅನ್ನು ಹೊರಡಿಸಿದೆ. ಇಂದು ವೇಳೆ ಬೆಲೆ ಏರಿಕೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕರೇ ಭಾರತೀಯ ಮದ್ಯ (ಐಎಂಎಲ್) ಒಂದು ಪೆಗ್ (60 ಎಂಎಲ್ )ಗೆ 10ರಿಂದ 20 ರೂ. ಹಾಗೂ ಬಿಯ‌ ಬೆಲೆ ಪ್ರತಿ ಬಾಟಲ್‌ಗೆ 3ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನು ಬೆಲೆ ಏರಿಕೆಗೆ ಸಂಬಂಧಪಟ್ಠಂತೆ ಅಬಕಾರಿ ಮೇಲಿನ ಹೆಚ್ಚುವರಿ ಸುಂಕ ಹೆಚ್ಚಳ ಕುರಿತಂತೆ ಸರಕಾರ ಸೋಮವಾರ ಕರಡು ಪ್ರಕಟಿಸಿದ್ದು, 7 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿದೆ.

 

ಇದನ್ನು ಓದಿ: Bank slip viral photo: ಜಾಲತಾಣದಲ್ಲಿ ವೈರಲ್ ಆಯ್ತೊಂದು ಬ್ಯಾಂಕ್ ಸ್ಲಿಪ್ !! ಇದ್ರಲ್ಲಿ ಬರೆದದ್ದೇನೆಂದು ನಿವಾದ್ರೂ ಹೇಳ್ತೀರಾ?