Home News Voter ID : ವೋಟರ್ ID ಬಗ್ಗೆ ಬಂತು ಬಿಗ್ ಅಪ್ಡೇಟ್- ಹೀಗೆ ಮಾಡದಿದ್ದರೆ...

Voter ID : ವೋಟರ್ ID ಬಗ್ಗೆ ಬಂತು ಬಿಗ್ ಅಪ್ಡೇಟ್- ಹೀಗೆ ಮಾಡದಿದ್ದರೆ ನಿಮ್ಮ ಐಡಿ ಕ್ಯಾನ್ಸಲ್ ! ಕೂಡಲೇ ಪರಿಶೀಲಿಸಿ

Voter ID

Hindu neighbor gifts plot of land

Hindu neighbour gifts land to Muslim journalist

Voter ID: ಮತದಾರರ ಪಟ್ಟಿ(Voter ID)ಪರಿಷ್ಕರಣೆಗೆ ಇದೀಗ ಸರ್ಕಾರ ಮುಂದಾಗಿದ್ದು, ಇದೀಗ ಮನೆ ಮನೆಗೇ ಅಧಿಕಾರಿಗಳು(Officer’s)ಬಂದು ಪರಿಶೀಲನೆ ನಡೆಸಲಿದ್ದಾರೆ.

ಹೌದು, ನಾಲ್ಕು ತಿಂಗಳಿಗೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ. ಹೀಗಾಗಿ ವೇಳಾಪಟ್ಟಿಯನ್ನು ನಿಗದಿಪಡಿಸಿದಂತೆ ಜುಲೈ 21 ರಿಂದ ಪರಿಷ್ಕರಣೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ(Kalburgi) ಜಿಲ್ಲೆಯಾದ್ಯಂತ ಬೂತ್‌ ಮಟ್ಟದ ಅಧಿಕಾರಿಗಳು( ಬಿಎಲ್‌ಒ) ನಿಮ್ಮ ಮನೆಗಳಿಗೇ ಬರಲಿದ್ದಾರೆ.

ಅಂದಹಾಗೆ ‘ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ-2024’ ಇದರ ಅಂಗವಾಗಿ ಜುಲೈ 21 ರಿಂದ ಆಗಸ್ಟ್ 21ರ ವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಬಿ.ಎಲ್.ಓ.ಗಳು(BOL) ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮಾಡುತ್ತಾರೆ. ಈ ವೇಳೆ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹಸೆರು ಸೇರಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಏನೆಲ್ಲಾ ಪರಿಷ್ಕರಣೆ ಮಾಡಲಾಗುತ್ತದೆ?
ಮನೆ ಮನೆಗೆ ತೆರಳುವ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಅರ್ಜಿಗಳನ್ನು ಸಾರ್ವಜನಿಕರಿಂದ ಪಡೆದು ಮೊಬೈಲ್ ತಂತ್ರಾಂಶದ ಮೂಲಕ ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಲಿದ್ದಾರೆ. ಅಲ್ಲದೆ ನಿಧನ, ಡಬಲ್ ಎಂಟ್ರಿ ಪ್ರಕರಣಗಳು ಕಂಡುಬಂದಲ್ಲಿ ಅಂತವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

ಯುವ ಮತದಾರರೇ ಗಮನಿಸಿ:
ಈ ಹಿಂದೆ ಜನವರಿ-1ಕ್ಕೆ ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಮತದಾರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಬಾರತ ಚುನಾವಣಾ ಆಯೋಗ ಪ್ರಜಾ ಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 14ಕ್ಕೆ ತಿದ್ದುಪಡಿ ತಂದು ಪ್ರತಿ ವರ್ಷ ಜನವರಿ-1, ಏಪ್ರಿಲ್-1, ಜುಲೈ-1 ಹಾಗೂ ಅಕ್ಟೋಬರ್-1ಕ್ಕೆ ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಪರಿಷ್ಕರಣೆ ಮಾಡಲಾಗುತ್ತಿದೆ. ಇದನ್ನು ವಿಶೇಷವಾಗಿ ಯುವ ಮತದಾರರು ಸದುಪಯೋಗ ಪಡೆದುಕೊಳ್ಳಬೇಕೆಂದರು.

 

ಇದನ್ನು ಓದಿ: Manipur Violence: ಮಣಿಪುರ ಮಹಿಳೆ ಬೆತ್ತಲೆ ಪ್ರಕರಣ: ನೀಚ ಕೃತ್ಯಕ್ಕೆ ತಕ್ಕ ಶಾಸ್ತ್ರಿ- ಆರೋಪಿ ಮನೆಗೆ ಮಹಿಳೆಯರಿಂದಲೇ ಬೆಂಕಿ !