Home News Manipur: ಮಣಿಪುರ ಬೆತ್ತಲೆ ಪ್ರಕರಣ: ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸುಪ್ರೀಂ ಚಾಟಿ – ‘...

Manipur: ಮಣಿಪುರ ಬೆತ್ತಲೆ ಪ್ರಕರಣ: ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸುಪ್ರೀಂ ಚಾಟಿ – ‘ ನಿಮ್ಮಿಂದ ಆಗದಿದ್ದರೆ ನಾವು ಕ್ರಮ ಕೈಗೊಳ್ತೀವಿ ‘ !

Manipur

Hindu neighbor gifts plot of land

Hindu neighbour gifts land to Muslim journalist

Manipur: ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur) ಕುಕಿ-ಜೋಮಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಪುರುಷರ ನೇತೃತ್ವದ ಜನಸಮೂಹವು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಮೇ 4 ರಂದು ನಡೆದಿದೆ. ವಿಡಿಯೋ ನಿನ್ನೆ ವೈರಲ್ ಆಗಿದೆ. ಮಹಿಳೆಯರ ಮೇಲೆ ಮೊದಲು ಪುರುಷರಿಂದ ಸಾಮೂಹಿಕವಾಗಿ ಅತ್ಯಾಚಾರವೆಸಗಲಾಯಿತು. ನಂತರ ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಅಡ್ಡಾಡುವಂತೆ ಒತ್ತಾಯಿಸಲಾಯಿತು ಎನ್ನಲಾಗಿದೆ. ಘಟನೆ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸ‌ದ್ಯ ಘಟನೆ ಬಗ್ಗೆ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಮೋದಿ ಮಣಿಪುರದ ಹಿಂಸಾಚಾದ ಘಟನೆ ಕಂಡು ಅತೀವ ದುಃಖ ಉಂಟಾಗಿದೆ. ಯಾವುದೇ ನಾಗರಿಕ ಸಮಾಜಕ್ಕೆ ಇದು ನಾಚಿಕೆಗೇಡಿನ ಸಂಗತಿ. ತಪ್ಪಿತಸ್ಥರನ್ನು ಎಂದಿಗೂ ಬಿಡುವುದಿಲ್ಲ, ಘಟನೆಯ ಹಿಂದಿರುವವರನ್ನು ಖಂಡಿತ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಘಟನೆ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಚಾಟಿ ಏಟು ಬೀಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದು,
ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಅಲ್ಲದೆ, ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲು ನಿರ್ದೇಶಿಸಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ಸುಪ್ರೀಂಕೋರ್ಟ್ ಕ್ರಮಕೈಗೊಳ್ಳುತ್ತದೆ ಎಂದು ಖಡಕ್ ಆಗಿ ಹೇಳಿದೆ.
ಈ ಪ್ರಕರಣದ ವಿಚಾರಣೆಯನ್ನು ಜುಲೈ 28ರಂದು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ಘಟನೆಯಿಂದ ದೇಶವೇ ತಲೆತಗ್ಗಿಸುವಂತಾಗಿದೆ. ಮಹಿಳೆಯರ ರಕ್ಷಣೆಯ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು ಮಾತ್ರವೇ ಹೊರಬರುತ್ತವೆ ಹೊರತು ನೈಜವಾಗಿ ಆಕೆಯ ರಕ್ಷಣೆ ಆಗುವುದೇ ಇಲ್ಲ. ಪಕ್ಷಗಳು ರಾಜಕೀಯದ ತಳ ಭದ್ರ ಪಡಿಸುತ್ತಿರುವ ಜೊತೆಗೆ ಬೇಸರ, ಸಂತಾಪ, ಆಕ್ರೋಶ ಹೊರಹಾಕುತ್ತಾರೆ ಹೊರತು ಹೆಣ್ಣಿಗೆ ನ್ಯಾಯ‌ ಸಿಗೋದು ಬಲುದೂರವೆ ಎಂಬುದು ಹಲವರ ಅಭಿಪ್ರಾಯ.

 

ಇದನ್ನು ಓದಿ: Narendra Modi- Sonia Gandhi: ಕುತೂಹಲ ಕೆರಳಿಸಿದ ಸೋನಿಯಾ – ಪ್ರಧಾನಿ ಮೋದಿ ಭೇಟಿ !