Home News Mangalore: ಶ್ವಾನ ಪ್ರಿಯೆ, ಮಂಗಳೂರಿನ ರಜನಿಶೆಟ್ಟಿ ಮೇಲೆ ಕಲ್ಲಿನಿಂದ ಹಲ್ಲೆ !! ಕಾರಣ ಕೇಳಿದ್ರೆ ನೀವೂ...

Mangalore: ಶ್ವಾನ ಪ್ರಿಯೆ, ಮಂಗಳೂರಿನ ರಜನಿಶೆಟ್ಟಿ ಮೇಲೆ ಕಲ್ಲಿನಿಂದ ಹಲ್ಲೆ !! ಕಾರಣ ಕೇಳಿದ್ರೆ ನೀವೂ ಮರುಗುತ್ತೀರಾ!!

Mangalore
Image source- Kannada news

Hindu neighbor gifts plot of land

Hindu neighbour gifts land to Muslim journalist

Mangalore: ಬೀದಿ ನಾಯಿಗಳ ಆಶ್ರಯದಾತೆಯಾಗಿರುವ ಮಂಗಳೂರಿನ ರಜನಿ ಶೆಟ್ಟಿ (Rajani Shetty) ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡಿರುವ ಅವರು ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೌದು, ಬೀದಿ ನಾಯಿಗಳ ವಿಚಾರವಾಗಿ ರಜನಿ ಜೊತೆ ನೆರೆಮನೆ ನಿವಾಸಿ ಮಂಜುಳಾ ಶೆಟ್ಟಿ ಎನ್ನುವವರು ಪದೇ ಪದೇ ನಿರಂತರವಾಗಿ ಜಗಳ ಮಾಡುತ್ತಿದ್ದರು. ಸದ್ಯ ಇದೇ ವಿಚಾರವಾಗಿ ಮಂಗಳೂರು(Mangalore) ನಗರದ ಬಲ್ಲಾಲ್ ಬಾಗ್(Ballal bag) ಎಂಬಲ್ಲಿ ಇಂದು ಬೆಳಗ್ಗೆ ಶ್ವಾನ ಪ್ರೇಮಿ ರಜನಿ ಮೇಲೆ ಹಲ್ಲೆ ಮಾಡಿದ್ದಾರೆ. ಕಲ್ಲಿನಿಂದ ಹೊಡೆಯುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ವೈರಲ್​ ಆಗುತ್ತಿದೆ.

ಅಂದಹಾಗೆ ಘಟನೆಯಿಂದ ರಜನಿ ಶೆಟ್ಟಿ ಅವರ ಕೈಗೆ ಗಾಯಗಳಾಗಿವೆ. ಈ ಹಿನ್ನೆಲೆ ಅವರು ನಗರದ ವೆನ್‌ಲಾಕ್ ಸರ್ಕಾರಿ ಆಸ್ಪತ್ರೆಗೆ(Venlak hospital) ದಾಖಲಾಗಿದ್ದಾರೆ. ಘಟನೆ ಬಗ್ಗೆ ರಜನಿ ಶೆಟ್ಟಿ ಮಂಜುಳಾ ವಿರುದ್ಧ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ರಜನಿ ಶೆಟ್ಟಿ ಮೂಲತಃ ಮುಂಬಯಿ(Mumbai)ನವರಾಗಿದ್ದು, ಬಾಲ್ಯದಿಂದಲೂ ಪ್ರಾಣಿಪ್ರಿಯೆ. ಅವರು ಪ್ರತಿನಿತ್ಯ 600ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಅಲ್ಲದೆ ಇತ್ತೀಚೆಗೆ ನಗರದ ಬಲ್ಲಾಳ್‌ಬಾಗ್‌ ಮೈದಾನವೊಂದರ ಬಳಿಯಿರುವ 30 ಅಡಿ ಬಾವಿಗೆ ಆಕಸ್ಮಿಕವಾಗಿ ನಾಯಿಯೊಂದು ಬಿದ್ದಿತು. ಇದನ್ನು ರಕ್ಷಣೆ ಮಾಡಲು ಹಲವಾರು ಮಂದಿ ಮೀನ ಮೇಷ ಎಣಿಸುತ್ತಿದ್ದಾಗ ರಜನಿ ಅವರು ಈಜು ಬರದೇ ಇದ್ದರೂ ಬಾವಿಗಿಳಿದು ಶ್ವಾನವನ್ನು ಕಾಪಾಡಿದರು.

 

ಇದನ್ನು ಓದಿ: Uttar Pradesh: ಗೆಳತಿಯಾಗಿ ಪತ್ನಿಯ ಮೂಗು ಕತ್ತರಿಸಿ, ಜೇಬಿನಲ್ಲಿ ಹಾಕಿಕೊಂಡು ಎಸ್ಕೇಪ್ ಆದ ಪತಿ ಮಹಾವೀರ !