Home News Ambulance fell into ditch: ಸ್ವಲ್ಪ ಅಲುಗಾಡಿದ್ರೂ ಆಂಬ್ಯುಲೆನ್ಸ್ ಪ್ರಪಾತಕ್ಕೆ ಬೀಳ್ತಿತ್ತು, ಅಷ್ಟರಲ್ಲಿ ನಡೆದಿತ್ತು ಮಹಾ...

Ambulance fell into ditch: ಸ್ವಲ್ಪ ಅಲುಗಾಡಿದ್ರೂ ಆಂಬ್ಯುಲೆನ್ಸ್ ಪ್ರಪಾತಕ್ಕೆ ಬೀಳ್ತಿತ್ತು, ಅಷ್ಟರಲ್ಲಿ ನಡೆದಿತ್ತು ಮಹಾ ಪವಾಡ !

Ambulance fell into ditch
Image source: India today

Hindu neighbor gifts plot of land

Hindu neighbour gifts land to Muslim journalist

Ambulance fell into ditch: ಆಂಬ್ಯುಲೆನ್ಸ್ ಒಂದು ಇನ್ನೇನೂ ಪ್ರಪಾತಕ್ಕೆ ಬೀಳಬೇಕು ಎನ್ನುವಷ್ಟರಲ್ಲಿ ಪವಾಡಸದೃಶವೆಂಬುವಂತೆ ಬಚಾವ್ ಆದಂತಹ ಘಟನೆ ಜೈಪುರ್ ನಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಆಂಬ್ಯುಲೆನ್ಸ್ , ಭದ್ರತಾ ಗೋಡೆಗೆ ಡಿಕ್ಕಿ ಹೊಡೆದು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಈ ಘಟನೆಯು ರಾಜಸ್ಥಾನದ ಕರಣ್​ಪುರ ಕಣಿವೆಯಲ್ಲಿರುವ ರಸ್ತೆಯಲ್ಲಿ ನಡೆದಿದೆ.

ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್, ಅಡ್ಡಾದಿಡ್ಡಿಯಾಗಿ ಚಲಿಸಿ, ಕಂದಕದ ಸುತ್ತ ನಿರ್ಮಿಸಲಾಗಿರುವ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದು ಅಲ್ಲಿಯೇ ಜೋತು ಬಿದ್ದಿದೆ (Ambulance fell into ditch). ಅದೃಷ್ಟವಶಾತ್​ ವಾಹನದ ಮುಂಭಾಗದ ಎರಡೂ ಚಕ್ರಗಳು ಕಂದಕದ ತುದಿಯಲ್ಲಿ ನೇತಾಡುತ್ತಿದ್ದರೆ, ವಾಹನದ ಮುಕ್ಕಾಲು ಭಾಗವು ರಸ್ತೆಯ ಮೇಲಿತ್ತು.

ಆಂಬ್ಯುಲೆನ್ಸ್ ಒಳಗೆ ಚಾಲಕ ಹಾಗೂ ಕಾಂಪೌಂಡರ್​ ಇದ್ದರು.​ ಬ್ಯಾಲೆನ್ಸ್​ ತಪ್ಪಿ ಪ್ರಪಾತಕ್ಕೆ ಬೀಳುವ ಭಯದಲ್ಲಿದ್ದ ಇಬ್ಬರು ತಮ್ಮ ಸೀಟಿನಿಂದ ಸ್ವಲ್ಪವೂ ಅಲುಗಾಡದೆ ಹಾಗೆ ಕುಳಿತಿದ್ದರು. ಘಟನೆ ನಡೆದ ಹಲವು ಗಂಟೆಗಳವರೆಗೂ ಇಬ್ಬರೂ ಸ್ವಲ್ಪವೂ ಕದಲದೆ ಕುಳಿತಿದ್ದರು.

ದಾರಿಹೋಕರು ಹಾಗೂ ಸ್ಥಳೀಯರು ಸಕಾಲಕ್ಕೆ ನೆರವಿಗೆ ಧಾವಿಸಿ ಅವರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಇಬ್ಬರೂ ಪವಾಡವೆಂಬಂತೆ ಬದುಕುಳಿದಿದ್ದು, ಇವರಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ. ಇವರಿಬ್ಬರನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

 

ಇದನ್ನು ಓದಿ: Viral Video: ಹನಿ ಹನಿ ಮಳೆಗೆ ಬೆಚ್ಚಗೆ ತಬ್ಬಿಕೊಂಡು ಕಪಲ್ಸ್ ಮಸ್ತ್ ಮಸ್ತ್ ಡ್ಯಾನ್ಸ್ ! ವಿಡಿಯೋ ವೈರಲ್ !!