Home News Prashaanth Kini: ಕರ್ನಾಟಕದ ಮುಂದಿನ ಸಿಎಂ ಆಗಿ ಲಕ್ಷ್ಮೀ ಹೆಬ್ಬಾಳ್ಕರ್ ಆಯ್ಕೆ – ದೆಹಲಿ ಚುನಾವಣೆ...

Prashaanth Kini: ಕರ್ನಾಟಕದ ಮುಂದಿನ ಸಿಎಂ ಆಗಿ ಲಕ್ಷ್ಮೀ ಹೆಬ್ಬಾಳ್ಕರ್ ಆಯ್ಕೆ – ದೆಹಲಿ ಚುನಾವಣೆ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿಯಿಂದ ಅಚ್ಚರಿ ಭವಿಷ್ಯ !!

Hindu neighbor gifts plot of land

Hindu neighbour gifts land to Muslim journalist

Prashanth Kini: ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗುತ್ತಿರುವ ನಡುವೆಯೇ ಈಗ ಫೇಮಸ್ ಜ್ಯೋತಿಷಿಯವರು ಶಾಕಿಂಗ್ ಭವಿಷ್ಯವೊಂದನ್ನ ನುಡಿದಿದ್ದಾರೆ.

ಹೌದು, ದೆಹಲಿ ವಿಧಾನಸಭಾ ಚುನಾವಣೆಯ ಕುರಿತು ಭವಿಷ್ಯ ನೋಡಿದಿದ್ದ ಪ್ರಶಾಂತ ಕಿಣಿ ಎಂಬ ಜ್ಯೋತಿಷಿ ಅವರು ರಾಜ್ಯದಲ್ಲಿ ನೆಕ್ಸ್ಟ್ ಸಿಎಂ ಆಗಿ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರ ಸ್ವೀಕಾರ ಮಾಡಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

ಅಂದಹಾಗೆ ಪ್ರಶಾಂತ್ ಕಿಣಿ 2024 ಅಕ್ಟೋಬರ್ 13ರಂದು ದೆಹಲಿಯ ಭವಿಷ್ಯ ನುಡಿದಿದ್ದರು. ದೆಹಲಿಯ ಅಧಿಕಾರದ ಗದ್ದುಗೆಯನ್ನ ಮಹಿಳೆಯೊಬ್ಬರು ಹಿಡಿಯಲಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದೀಗ ಆ ಭವಿಷ್ಯ ನಿಜವಾಗಿದ್ದು, 27 ವರ್ಷಗಳ ಬಳಿಕ ದೆಹಲಿಯಲ್ಲಿ ಕಮಲ ಅರಳಿದೆ. ರೇಖಾ ಗುಪ್ತ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಕರ್ನಾಟಕ ಭವಿಷ್ಯದ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಶೀಘ್ರವೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದು, ಆ ಸ್ಥಾನವನ್ನೂ ಲಕ್ಷ್ಮೀ ಹೆಬ್ಬಾಳ್ಕರ್ ತುಂಬಲಿದ್ದಾರೆ ಎಂದು ಹೇಳಿದ್ದಾರೆ.

ಪ್ರಶಾಂತ್ ಕಿಣಿ ಅವರ ಪೋಸ್ಟ್ ರಾಜ್ಯ ರಾಜಕಾರಣದಲ್ಲಿ ಚರ್ಚೆ ಹುಟ್ಟು ಹಾಕಿದೆ. ದೆಹಲಿಯಲ್ಲಿ ಕಿಣಿಯವರ ಭವಿಷ್ಯ ನಿಜವಾದ ಹಿನ್ನೆಲೆಯಲ್ಲಿ ಇದು ರಾಜ್ಯಾದ್ಯಂತ ಸಂಚಲನವನ್ನು ಸೃಷ್ಟಿಸಿದೆ.