Home latest ಷಷ್ಠಿ ಸಂಭ್ರಮದ ನಡುವೆ ಕುಕ್ಕೆಗೆ ಇಲ್ಲದಾಯಿತು ಸರಿಯಾದ ಬಸ್ ವ್ಯವಸ್ಥೆ!! ಕೆ.ಎಸ್.ಆರ್.ಟಿ.ಸಿ ಗೆ ಸಾರ್ವಜನಿಕರ ಧಿಕ್ಕಾರ!!

ಷಷ್ಠಿ ಸಂಭ್ರಮದ ನಡುವೆ ಕುಕ್ಕೆಗೆ ಇಲ್ಲದಾಯಿತು ಸರಿಯಾದ ಬಸ್ ವ್ಯವಸ್ಥೆ!! ಕೆ.ಎಸ್.ಆರ್.ಟಿ.ಸಿ ಗೆ ಸಾರ್ವಜನಿಕರ ಧಿಕ್ಕಾರ!!

Hindu neighbor gifts plot of land

Hindu neighbour gifts land to Muslim journalist

ಕಡಬ: ಕುಕ್ಕೇ ಸುಬ್ರಹ್ಮಣ್ಯದಲ್ಲಿ ಷಷ್ಠಿ ರಥೋತ್ಸವದ ನಡುವೆ ಸಾರ್ವಜನಿಕರು ಪಾದರಾಡುವಂತಹ ಪರಿಸ್ಥಿತಿಗೆ ಕೆ.ಎಸ್.ಆರ್.ಟಿ.ಸಿ ಕಾರಣವಾಯಿತು.

ದಕ್ಷಿಣ ಭಾರತದ ಅತ್ಯಂತ ಪವಿತ್ರ ನಾಗ ಕ್ಷೇತ್ರವಾದ ಕುಕ್ಕೇ ಸುಬ್ರಮಣ್ಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಷಷ್ಠಿ ಸಂಭ್ರಮವಿದ್ದು,ಹೊರ ಊರುಗಳಿಂದ ಆಗಮಿಸುವ ಭಕ್ತಾದಿಗಳಿಗಿಂತಲೂ ಈ ದಿನ ಗ್ರಾಮೀಣ ಭಾಗದಿಂದ ಬರುವಂತಹ ಭಕ್ತಾದಿಗಳೇ ಹೆಚ್ಚಿರುತ್ತಾರೆ.

ಇದೆಲ್ಲದರ ನಡುವೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ಹೋಗುವ ಭಕ್ತಾದಿಗಳು ಮುಂಜಾನೆ ಸುಮಾರು ಆರರಿಂದಲೇ ರಸ್ತೆ ಬದಿ ನಿಂತಿದ್ದು, ಸಮಯಕ್ಕೆ ಸರಿಯಾಗಿ ಬರುವ ಬಸ್ಸು ಬಾರದೆ ಪರದಾಡಿದಲ್ಲದೇ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಒಂದು ಬಸ್ಸು ಬಂದರೂ ಮೆಟ್ಟಿಲಲ್ಲಿ ನಿಂತು ಪ್ರಯಾಣಿಸುವ ಪರಿಸ್ಥಿತಿ ಎದುರಾಯಿತು.

ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕರು ಪರದಾಡುವಂತೆ ಮಾಡಿದ ಕೆ ಎಸ್ ಆರ್ ಟಿ ಸಿ ವಿರುದ್ಧ ಸಾರ್ವಜನಿಕರೇ ಕಿಡಿಕಾರಿದ್ದಾರೆ.