Home News KSRTC ಬಸ್‌ನಲ್ಲಿ ಫ್ರೀಯಾಗಿ ಓಡಾಟ ಮಾಡಿದ ನಕಲಿ ಕಂಡಕ್ಟರ್!!!‌ ಸತ್ಯ ಬಯಲಾಗಿದ್ದು ಹೇಗೆ ಗೊತ್ತೇ?

KSRTC ಬಸ್‌ನಲ್ಲಿ ಫ್ರೀಯಾಗಿ ಓಡಾಟ ಮಾಡಿದ ನಕಲಿ ಕಂಡಕ್ಟರ್!!!‌ ಸತ್ಯ ಬಯಲಾಗಿದ್ದು ಹೇಗೆ ಗೊತ್ತೇ?

KSRTC

Hindu neighbor gifts plot of land

Hindu neighbour gifts land to Muslim journalist

KSRTC ಕಂಡಕ್ಟರ್‌ ಓರ್ವ ಯೂನಿಫಾರ್ಮ್‌ ಧರಿಸಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಫ್ರೀಯಾಗಿ ಓಡಾಡುತ್ತಿದ್ದು, ಈತನನ್ನು ಹಿಡಿದ ಘಟನೆಯೊಂದು ನಡೆದಿದೆ.

ನಕಲಿ ಕಂಡಕ್ಟರ್‌ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಳಗಾವಿಯ ಅಥಣಿ ಮೂಲದ ಆನಂದ್‌ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದ ಆರೋಪಿ.

ಈತ ತುಮಕೂರು ಡಿಪೋದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಬಸ್‌ ಕಂಡಕ್ಟರ್‌ ಟಿಕೆಟ್‌ ಕೇಳಿದ್ದಾರೆ. ಅದಕ್ಕೆ ಈತ ನಾನು ಕಂಡಕ್ಟರ್‌ ಎಂದು ಹೇಳಿದ್ದು, ಆದರೆ ಇದರಿಂದ ಅನುಮಾನಗೊಂಡ ಬಸ್‌ಕಂಡಕ್ಟರ್‌ ಟೋಕನ್‌ ನಂಬರ್‌ ಏನು ಎಂದು ಕೇಳಿದ್ದಾರೆ. ನಂತರ ಇನ್ನೂ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಈತ ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಅಲ್ಲದೇ, ಫೇಕ್‌ ಬಸ್‌ ಟಿಕೆಟ್‌ಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದ. ಹೀಗಾಗಿ ಈತ ಫೇಕ್‌ ಕಂಡಕ್ಟರ್‌ ಎಂದು ಗೊತ್ತಾಗಿ ಆರೋಪಿಯನ್ನು ಹಿಡಿದು ಗೊರಗುಂಟೆಪಾಳ್ಯ ಡಿಪೋ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.

ನಂತರ ಡಿಪೋ ಅಧಿಕಾರಿಗಳನ್ನು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಮಯದಲ್ಲಿ ವಿಚಾರಣೆ ನಡೆಸಿದಾಗ ಆತ ತನ್ನ ಹೆಸರು ಆನಂದ್‌ ಎಂದು ಹೇಳಿರುವುದಾಗಿ ವರದಿಯಾಗಿದೆ.

ಈತ ಅಥಣಿ ಮೂಲದವನಾಗಿದ್ದು, ಬೆಂಗಳೂರಿನ ಗೊರಗುಂಟೆಪಾಳ್ಯದ ಗ್ಯಾರೇಜ್‌ವೊಂದರಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಪೊಲೀಸರ ವಶದಲ್ಲಿದ್ದು, ತುಮಕೂರು ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ: UP Roadways Free: ರಾಜ್ಯ ಸಾರಿಗೆ ಬಸ್‌ ಟಿಕೆಟ್‌ ದರದಲ್ಲಿ ಭಾರೀ ಕಡಿತ! ಹೊಸದರ ಹಳೆ ದರ ಇಲ್ಲಿದೆ!!!