Home Jobs ಸರ್ಕಾರಿ ಕೆಲಸಕ್ಕಾಗಿ ವಾಮಮಾರ್ಗ ಹಿಡಿದ ಅಭ್ಯರ್ಥಿಗಳು! ನಿನ್ನೆ ಬಟ್ಟೆಯೊಳಗೆ 5 ಕೆಜಿ ತೂಕದ ಕಲ್ಲು, ಇಂದು...

ಸರ್ಕಾರಿ ಕೆಲಸಕ್ಕಾಗಿ ವಾಮಮಾರ್ಗ ಹಿಡಿದ ಅಭ್ಯರ್ಥಿಗಳು! ನಿನ್ನೆ ಬಟ್ಟೆಯೊಳಗೆ 5 ಕೆಜಿ ತೂಕದ ಕಲ್ಲು, ಇಂದು ಗೋಧಿ ಹಿಟ್ಟು!

Hindu neighbor gifts plot of land

Hindu neighbour gifts land to Muslim journalist

ಸರ್ಕಾರಿ ಕೆಲಸಕ್ಕಾಗಿ ವಾಮಮಾರ್ಗ ಹಿಡಿದ ಅಭ್ಯರ್ಥಿಗಳು! ನಿನ್ನೆ ಬಟ್ಟೆಯೊಳಗೆ 5 ಕೆಜಿ ತೂಕದ ಕಲ್ಲು, ಇಂದು ಗೋಧಿ ಹಿಟ್ಟು!

KSRTC ಡ್ರೈವರ್​ ಮತ್ತು ಕಂಡಕ್ಟರ್​ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯಲ್ಲಿ ಪಾಸ್​ ಆಗಲು ಅಭ್ಯರ್ಥಿಗಳು ತೂಕ ಹೆಚ್ಚಿಸಿಕೊಳ್ಳಲು ನಾನಾತಂತ್ರ ಬಳಸಿ ಪರೀಕ್ಷಕರ ಕಣ್ಣಿಗೆ ಮಣ್ಣೆರಚಲು ಬಂದ ಸಂಗತಿ ನಿನ್ನೆಯಷ್ಟೇ ಬಹಿರಂಗವಾಗಿ, ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವೇಳೆ ಕಬ್ಬಿಣ ಹಾಗೂ ತೂಕದ ಕಲ್ಲುಗಳನ್ನು ಕಟ್ಟಿಕೊಂಡು ಬಂದು ಸಿಕ್ಕಿಬಿದ್ದಿದರು. ಇದೀಗ ಮತ್ತೊಬ್ಬ ಅಸಾಮಿ ಕಬ್ಬಿಣ ಬದಲು ಹಿಟ್ಟಿನ ಮೊರೆ ಹೋಗಿ ತಗಲಾಕೊಂಡಿರುವ ಘಟನೆಯೊಂದು ಮತ್ತೆ ಬೆಳಕಿಗೆ ಬಂದಿದೆ.

ಹೌದು, ಇಲ್ಲೊಬ್ಬ ಭೂಪ ತೂಕ ಹೆಚ್ಚಿಸಲು ಕಬ್ಬಿಣದ ಬದಲು ಹಿಟ್ಟಿನ ಮೊರೆ ಹೋಗಿದ್ದಾನೆ. ಒಂದೊಂದು ಕಾಲಿಗೆ ಒಂದೊಂದು ಕೆಜಿಯ ಗೋಧಿ ಹಿಟ್ಟನ್ನು ಸುತ್ತಿಕೊಂಡು ಬಂದಿದ್ದ. ಗೋಧಿ ಹಿಟ್ಟನ್ನು ನೀರಲ್ಲಿ ಕಲಸಿ ತೊಡೆಯ ಸುತ್ತಲು ಅಂಟಿಸಿಕೊಂಡು ಅದರ ಮೇಲೆ ಬಟ್ಟೆ ಕಟ್ಟಿಕೊಂಡು ಬಂದಿದ್ದ. ಕೆಕೆಆರ್​ಟಿಸಿ ಜಾಗೃತ ದಳದ ಅಧಿಕಾರಿಗಳ ತಪಾಸಣೆ ವೇಳೆ ಅಭ್ಯರ್ಥಿಯ ಈ ಕಳ್ಳಾಟ ಬಯಲಾಗಿದೆ. ಅಲ್ಲದೆ ಇದೀಗ ಹಿಟ್ಟು ಸುತ್ತಿಕೊಂಡು ಬಂದ ಅಭ್ಯರ್ಥಿಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ.

ಇದಕ್ಕೂ ಮೊದಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಯಲ್ಲಿ ಚಾಲಕ ಕಂ ಕಂಡಕ್ಟರ್ ಹುದ್ದೆಗೆ ಆಯ್ಕೆಯಾಗಬೇಕಾದರೆ 55 ಕೆ.ಜಿ. ತೂಕ ಕಡ್ಡಾಯವಾಗಿದೆ. ಹೇಗಾದರೂ ಮಾಡಿ ಸರ್ಕಾರಿ ಕೆಲಸ ಗಿಟ್ಟಿಸಲೇಬೇಕೆಂದು ಅಡ್ಡದಾರಿ ಹಿಡಿದಿದ್ದ ಅಭ್ಯರ್ಥಿಗಳ ಅಕ್ರಮವನ್ನು ನಿನ್ನೆ ಜಾಗೃತ ದಳದ ಅಧಿಕಾರಿಗಳು ಬಯಲು ಮಾಡಿದ್ದರು. ಒಳಉಡುಪುಗಳಲ್ಲಿ ಭಾರವಾದ ಕಬ್ಬಿಣದ ರಾಡ್‌ಗಳು, ತಕ್ಕಡಿಯಲ್ಲಿ ಬಳಸುವ ಕಬ್ಬಿಣದ ಕಲ್ಲುಗಳನ್ನು ಇಟ್ಟುಕೊಂಡು ಬಂದು ಕಣ್ಣಿಗೆ ಮಣ್ಣೆರಚಲು ಯತ್ನಿಸಿ ಅಭ್ಯರ್ಥಿಗಳು ಸಿಕ್ಕಿಬಿದ್ದ ವಿಡಿಯೋ ನಿನ್ನೆ ಬಹಿರಂಗವಾಗಿತ್ತು.