Home News Mangaluru: ಕೋಟೆಕಾರು ದರೋಡೆ ಪ್ರಕರಣ; ಮಂಗಳೂರು ಕಮಿಷನರ್‌ರಿಂದ ಸಂಪೂರ್ಣ ಮಾಹಿತಿ

Mangaluru: ಕೋಟೆಕಾರು ದರೋಡೆ ಪ್ರಕರಣ; ಮಂಗಳೂರು ಕಮಿಷನರ್‌ರಿಂದ ಸಂಪೂರ್ಣ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

Mangaluru: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ವಿವರಗಳನ್ನು ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಪೂರ್ನ ವಿವರ ನೀಡಿದ್ದಾರೆ.

ಕೋಟೆಕಾರು ಬ್ಯಾಂಕ್‌ ದರೋಡೆ ಜ.17 ರಂದು ನಡೆದಿತ್ತು. ನಾಲ್ಕು ಜನ ಆರೋಪಿಗಳು ದರೋಡೆ ಮಾಡಿದ್ದರು. 18 ಕೆಜಿ ಚಿನ್ನದ ಜೊತೆ 11 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊದಲನೇ ಹಂತದಲ್ಲಿ ಯಾವುದೇ ಸುಳಿವು ನಮಗೆ ಸಿಗಲಿಲ್ಲ. ಫಿಯೆಟ್‌ ಕಾರಿನ ಆಧಾರದಲ್ಲಿ ನಾವು ತನಿಖೆ ಮುಂದುವರಿಸಿದೆವು. ಟೋಲ್‌, ಸಿಸಿಟಿವಿ ಆಧಾರದಲ್ಲಿ ತನಿಖೆ ಮಾಡಲು ಮುಂದಾದಾಗ ಫಿಯೆಟ್‌ ಕಾರಿನ ರೂಟ್‌ ತಿಳಿಯಿತು. ಸುರತ್ಕಲ್‌ ಬಳಿಯ ಪೆಟ್ರೋಲ್‌ ಪಂಪ್‌ನಲ್ಲಿ ಸಿಸಿಟಿವಿಯ ಸುಳಿವೊಂದು ದೊರಕಿತು. ಇದು ಮಹಾರಾಷ್ಟ್ರ ನಂಬರ್‌ ಪ್ಲೇಟ್‌ ಎಂದು ತಿಳಿಯಿತು. ಕೂಡಲೇ ನಮ್ಮ ತಂಡವು ಮುಂಬೈಗೆ ತೆರಳಿ ಅಲ್ಲಿ ಮಾಹಿತಿಯನ್ನು ಕಲೆ ಹಾಕಿತು.

ತಲಪಾಡಿ ಟೋಲ್‌ ಗೇಟ್‌ ಗೆ ಬಂದ ಆರೋಪಿಗಳಲ್ಲಿ ಇಬ್ಬರು ಇಲ್ಲಿ ತಪ್ಪಿಸಿಕೊಂಡಿದ್ದರು. ಮೊದಲಿಗೆ ಕಣ್ಣನ್‌ ಮಣಿಯನ್ನು ಬಂಧನ ಮಾಡಲಾಯಿತು, ತಮಿಳುನಾಡಿನ ತಿರುವನ್ವೇಲಿಯಲ್ಲಿ. ಆತನಲ್ಲಿ ವಿಚಾರಣೆ ಮಾಡಿದಾಗ ಮುರುಗನ್‌ ಡಿ, ರಾಜೇಂದ್ರನ್‌ನ ಬಂಧನ ಕೂಡಾ ತಿರುವನ್ವೇಲಿಯಲ್ಲಿ ನಡೆಯಿತು. ನಂತರ ಚಿನ್ನ ರಿಕವರಿ ಮಾಡುವುದಕ್ಕೆ ಸ್ಥಳೀಯ ಪೊಲೀಸರ ಸಹಾಯವನ್ನು ಪಡೆಯಲಾಯಿತು.

ಮುರುಗನ್‌ ಡಿ ತಂದೆ ಮನೆಗೆ ಸುರತ್ಕಲ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಮಹೇಶ್‌ಪ್ರಸಾದ್‌ ತಂಡ ದಾಳಿ ಮಾಡಿದ್ದು, ಷಣ್ಮುಗ ಸುದಂರಂ ಅವರನ್ನು ಬಂಧನ ಮಾಡಿ, ಚಿನ್ನ ವಶಕ್ಕೆ ಪಡೆಯಲಾಯಿತು. ಮೊದಲಿಗೆ ಬಂಧಿಸಿದ ಇಬ್ಬರಲ್ಲಿ ಕೇವಲ ಎರಡು ಕೆಜಿ ಚಿನ್ನ ಮಾತ್ರ ದೊರಕಿತ್ತು. ಇದೀಗ ಒಟ್ಟು 18.300 ಕೆಜಿ ಚಿನ್ನ ದೊರಕಿದೆ. ಹಾಗೆನೇ ದರೋಡೆ ಮಾಡಲಾದ 11 ಲಕ್ಷದಲ್ಲಿ 3 ಲಕ್ಷ ಮಾತ್ರ ದೊರಕಿದೆ.

ಕಣ್ಣನ್‌ ಮಣಿ ಮತ್ತು ಮುರುಗನ್‌ ಡಿ ಪರಿಚಯವು 2016 ರಲ್ಲಿ ಮಹಾರಾಷ್ಟ್ರ ಜೈಲಿನಲ್ಲಿ ಆಗಿತ್ತು. ಸ್ಥಳೀಯ ಶಶಿ ಥೇವರ್‌ ಎಂಬಾತ ಕೋಟೆಕಾರ್‌ ಬ್ಯಾಂಕ್‌ನ ಮಾಹಿತಿಯನ್ನು ನೀಡಿದ್ದ. ಮುರುಗನ್‌ ಶಶಿ ಥೇವರ್‌ನನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾನೆ. ಮುರುಗನ್‌ ಡಿ ಆರು ತಿಂಗಳಲ್ಲಿ ಮೂರು ಬಾರಿ ಮಂಗಳೂರಿಗೆ ಬಂದಿದ್ದು, ನ.27 ರಂದು ರಾಜೇಂದ್ರ ಜೊತೆ ಮುರುಗನ್‌ ಡಿ ಬಂದಿದ್ದ. ಆ ಸಂದರ್ಭದಲ್ಲಿ ಶಶಿ ಥೇವರ್‌ ಎಲ್ಲಾ ಎಂಟ್ರಿ-ಎಕ್ಸಿಟ್‌ ಪಾಯಿಂಟ್‌ ನೀಡಿದ್ದ. ಇವರನ್ನು ಆಟೋದ ಮೂಲಕ ಕರೆದುಕೊಂಡು ಹೋಗಿ ಬ್ಯಾಂಕ್‌ನ ಇತರ ಜಾಗಗಳನ್ನು ತೋರಿಸಿಕೊಟ್ಟಿದ್ದ.

ಇವರು ಶುಕ್ರವಾರ ಮಸೀದಿ ಪ್ರಾರ್ಥನೆ ಸಂದರ್ಭದಲ್ಲೇ ದರೋಡೆ ಮಾಡಲು ಸ್ಕೆಚ್‌ ಹಾಕಿದ್ದರು. ಆರೋಪಿಗಳು ಮುಂಬೈನಿಂದ ಫಿಯೇಟ್‌ ಕಾರಿನಲ್ಲಿ ಬಂದಿದ್ದು, ಒಂದು ಜಾಗದಲ್ಲಿ ಸೇರಿ ಪ್ಲಾನ್‌ ಮಾಡಿರುವುದಾಗಿ ಕಮಿಷನರ್‌ ಹೇಳಿದರು. ಮೊದಲಿಗೆ ಕಾರಿನ ಒರಿಜಿನಲ್‌ ನಂಬರ್‌ ಪ್ಲೇಟ್‌ ಟ್ರೇಸ್‌ ಮಾಡಿದ್ದು ದೊಡ್ಡ ಸುಳಿವನ್ನು ನೀಡಿತು. ಮೂವರು ಆರೋಪಿಗಳು ಉತ್ತರ ಭಾರತ ಕಡೆ ಹೋಗಿದ್ದು, ಅವರ ಮಾಹಿತಿ ದೊರಕಿದೆ. ಶೀಘ್ರ ಬಂಧನವಾಗಲಿದೆ. ಇನ್ನು ಉಳಿದಂತೆ ಸ್ಥಳೀಯ ಶಶಿ ಥೇವರ್‌ ಸೇರಿ ನಾಲ್ವರ ಬಂಧನ ಆಗಬೇಕು.

ಆರೋಪಿ ಮುರುಗಂಡಿ ಹೇಳಿರುವ ಪ್ರಕಾರ, ಸ್ಥಳೀಯ ಶಶಿಥೇವರ್‌ಗೆ ಮಂಗಳೂರು ಚೆನ್ನಾಗಿ ಗೊತ್ತಿತ್ತು. ಇವನು ಇಲ್ಲೇ ಇದ್ದವನು ಎಂಬ ಹೇಳಿಕೆ ನೀಡಿದ್ದಾನೆ. ಆದರೆ ತನಿಖೆಯಲ್ಲಿ ಆತ ಮೂಲತಃ ಮುಂಬೈ ಮೂಲದವನು ಎಂಬ ಮಾಹಿತಿ ದೊರಕಿದೆ. ಮುರುಗನ್‌ ಡಿ ಮೇಲೆ ಈ ಮೊದಲೇ ಮುಂಬೈನಲ್ಲಿಯೂ ದರೋಡೆ ಮಾಡಿ 27 ಕೆಜಿ ಚಿನ್ನ ಲೂಟಿ ಮಾಡಿರುವ ಮಾಹಿತಿ ಇದೆ. ದಕಾಯಿತಿ ಮತ್ತು ಕೋಕಾ ಕೇಸ್‌ ಯಶೋವಾ ರಾಜೇಂದ್ರ ಮೇಲೆ ಇದೆ.

1600 ಗ್ರಾಹಕರ ಚಿನ್ನ ದೊರಕಿದ್ದು, ಮುಂಬೈ ಹಾಗೂ ತಮಿಳುನಾಡು ಪೊಲೀಸರು ತುಂಬಾ ಸಹಾಯ ಮಾಡಿದ್ದು. ಹಾಗೆನೇ ತಮಿಳು ಬರುವ ನಮ್ಮ ಸಿಬ್ಬಂದಿ ಕೂಡಾ ನಮಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಕಮಿಷನರ ಅಗರ್‌ವಾಲ್‌ ಹೇಳಿದರು.