Home News ಕೊಳ್ತಿಗೆ ಅನ್ಯಕೋಮಿನ ಯುವಕನ ಮನೆಯಲ್ಲಿ ಅಪ್ರಾಪ್ತ ಹಿಂದು ಯುವತಿ ಪತ್ತೆ ಪ್ರಕರಣ | ವಿವಾಹದ ಸಿದ್ದತೆ...

ಕೊಳ್ತಿಗೆ ಅನ್ಯಕೋಮಿನ ಯುವಕನ ಮನೆಯಲ್ಲಿ ಅಪ್ರಾಪ್ತ ಹಿಂದು ಯುವತಿ ಪತ್ತೆ ಪ್ರಕರಣ | ವಿವಾಹದ ಸಿದ್ದತೆ ಬಾಯ್ಬಿಟ್ಟ ಯುವಕ | ಯುವತಿ ಮನೆಯವರಿಂದ ನಾಪತ್ತೆ ದೂರು ದಾಖಲು | ಆದೂರು ಪೊಲೀಸರ ವಶದಲ್ಲಿ ಜೋಡಿ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು ತಾಲೂಕಿನ ಕೊಳ್ತಿಗೆ ಕುಂಟಿಕಾನ ಎಂಬಲ್ಲಿ ಸಿದ್ದೀಕ್ ಎಂಬಾತ ಅಪ್ರಾಪ್ತ ವಯಸ್ಸಿನ ಹಿಂದು ಯುವತಿಯನ್ನು ಅಪಹರಿಸಿ ಮನೆಯಲ್ಲಿ ಇರಿಸಿಕೊಂಡಿದ್ದಾನೆಂಬ ಮಾಹಿತಿಯರಿತ ಸ್ಥಳೀಯರು ಬುಧವಾರ ಆತನ ಮನೆಯ ಮುಂದೆ ಜಮಾಯಿಸಿ ಸ್ಥಳದಲ್ಲಿ ತುಸು ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಬೆಳ್ಳಾರೆ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಾಗ ಯುವಕನ ಮನೆಯವರು ಬಾಗಿಲು ತೆರೆಯದೆ ಇದ್ದುದು, ಇನ್ನಷ್ಟು ಸಂಶಯಕ್ಕೆ ಕಾರಣವಾಯಿತು. ಕೆಲಹೊತ್ತು ಕಾದ ಪೊಲೀಸರು ಮನೆಯ ಬಾಗಿಲು ತೆರೆದ ಬಳಿಕ ಮನೆಯೊಳಗೆ ಹೋಗಿ ಹುಡುಕಾಡಿದಾಗ ಯುವತಿ ಮನೆಯೊಳಗೆ ಇರಲಿಲ್ಲ. ಈ ವೇ ಅಲ್ಲಿ ಸೇರಿದ್ದ ಮಂದಿ ಯುವತಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದರು. ಗೊಂದಲ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಜನರನ್ನು ಅಲ್ಲಿಂದ ಚದುರಿ ಯುವಕ ಸಿದ್ದೀಕ್‌ನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಬೆಳ್ಳಾರೆ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಾಗ ಯುವಕನ ಮನೆಯವರು ಬಾಗಿಲು ತೆರೆಯದೆ ಇದ್ದುದು, ಇನ್ನಷ್ಟು ಸಂಶಯಕ್ಕೆ ಕಾರಣವಾಯಿತು. ಕೆಲಹೊತ್ತು ಕಾದ ಪೊಲೀಸರು ಮನೆಯ ಬಾಗಿಲು ತೆರೆದ ಬಳಿಕ ಮನೆಯೊಳಗೆ ಹೋಗಿ ಹುಡುಕಾಡಿದಾಗ ಯುವತಿ ಮನೆಯೊಳಗೆ ಇರಲಿಲ್ಲ. ಈ ವೇಳೆ ಅಲ್ಲಿ ಸೇರಿದ್ದ ಮಂದಿ ಯುವತಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದರು. ಗೊಂದಲ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಜನರನ್ನು ಅಲ್ಲಿಂದ ಚದುರಿಸಿ, ಯುವಕ ಸಿದ್ದೀಕ್‌ನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.

ಈ ಮದ್ಯೆ ಯುವತಿಯು ಗೋದ್ರೆಜ್‌ನಲ್ಲಿ ಅಡಗಿ ಕೂತಿದ್ದು,ಆಕೆಯನ್ನು ಜಾಲ್ಸೂರಿನಲ್ಲಿ ಬಿಟ್ಟು ಬಂದಿದ್ದು,ಅಲ್ಲಿ ಸ್ಥಳೀಯರು ವಿಚಾರಿಸಿದಾಗ ಯುವತಿ ಸತ್ಯ ಬಾಯ್ಬಿಟ್ಟಿದ್ದಾಳೆ.

ವಿವಾಹವಾಗಲು ಸಿದ್ಧತೆ
ಫೋನ್ ಮೂಲಕ ಪರಿಚಯವಾದ ಕಾಸರಗೋಡು ಜಿಲ್ಲೆಯ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ದೇಲಂಪಾಡಿಯ ದಲಿತ ಸಮುದಾಯದ ಯುವತಿಯನ್ನು ಆಕೆಯ ಮನೆಯಿಂದ ಕಾರಿನಲ್ಲಿ ಮನೆಗೆ ಕರೆದುಕೊಂಡು ಬಂದಿದ್ದೆ. ಯಾರಿಗಾದರೂ ತಿಳಿದರೆ ಸಮಸ್ಯೆಯಾಗಬಹುದೆಂದು ಆಕೆಯನ್ನು ಪುತ್ತೂರಿಗೆ ಬಿಟ್ಟು ಬಂದಿದ್ದೇನೆ. ಒಂದು ವರ್ಷದಿಂದ ಪರಿಚಯವಿದ್ದು, ವಿವಾಹ ಮಾಡಿಕೊಳ್ಳುವಂತೆ ತಿಳಿಸಿದ್ದಾಳೆ ಎಂದು ಆತ ಪೊಲೀಸರ ಮುಂದೆ ತಿಳಿಸಿದ್ದಾನೆ. ಬೆಳ್ಳಾರೆ ಪೊಲೀಸರು ಯುವತಿಯ ಮನೆಯವರನ್ನು ಸಂಪರ್ಕಿಸಿದ್ದಾರೆ. ಯುವತಿ 17 ವರ್ಷದವಳಾಗಿದ್ದು, ಅಪ್ರಾಪ್ತೆಯಾದ ಆಕೆಯನ್ನು ಅಪಹರಿಸಿದ ದೂರು ನೀಡುವುದಾಗಿ ಪಾಲಕರು ಪೊಲೀಸರಲ್ಲಿ ತಿಳಿಸಿದ್ದಾರೆ.

ಅದರಂತೆ ಇಬ್ಬರನ್ನೂ ಆದೂರು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.