Home latest ರಾಜ್ಯದ ಜನತೆಯನ್ನು ಮತ್ತೊಮ್ಮೆ ಭಯಭೀತರನ್ನಾಗಿ ಮಾಡಿದೆ ಕೋಡಿಶ್ರೀ ಭವಿಷ್ಯ !! | ಅಷ್ಟಕ್ಕೂ ಈ ಬಾರಿಯ...

ರಾಜ್ಯದ ಜನತೆಯನ್ನು ಮತ್ತೊಮ್ಮೆ ಭಯಭೀತರನ್ನಾಗಿ ಮಾಡಿದೆ ಕೋಡಿಶ್ರೀ ಭವಿಷ್ಯ !! | ಅಷ್ಟಕ್ಕೂ ಈ ಬಾರಿಯ ಭವಿಷ್ಯವಾಣಿಯಲ್ಲಿ ಏನಿದೆ ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಚಿಕ್ಕಬಳ್ಳಾಪುರ :ನುಡಿದಂತೆ ನಡೆಯೋ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದು,ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರ ಎದುರಾಗಿ ಭೀಕರ ಬರ ಹೆಚ್ಚಾಗಲಿದೆ. ರಾಜಕೀಯದ ಕಲಹ ಅಧಿಕವಾಗಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ .

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ‘ನೈಜ ಶಿಕ್ಷಣದ ಬದಲು ವ್ಯವಸ್ಥೆಯಲ್ಲಿ ಜಾತಿ ಶಿಕ್ಷಣ ಹೆಚ್ಚಾಗ್ತಿದೆ.ನ್ಯಾಯಯುತ ಧರ್ಮದ ಬದಲು ಜಾತಿ ಭೇದ ಭಾವ ಹೆಚ್ಚಾಗ್ತಿದೆ . ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರ ಎದುರಾಗಿ ಬರ ಹೆಚ್ಚಾಗಲಿದೆ. ಪ್ರಕೃತಿ ವಿಕೋಪಗಳಿಂದ ಮಾನವನಿಗೆ ತೊಂದರೆಯಾಗಲಿದೆ’ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.

ಆಶ್ವಿಜದಿಂದ ಸಂಕ್ರಾಂತಿಯೊಳಗೆ ದೇಶದಲ್ಲಿ ದೊಡ್ಡ ಅವಘಡ ಸಂಭವಿಸಲಿದ್ದು, ಅಸಹನೆ, ದ್ವೇಷ, ರಾಜಕೀಯ ಕಲಹ ಹೆಚ್ಚಾಗುತ್ತದೆ. ಗಾಳಿ ಗಂಡಾಂತರ ಎದುರಾಗಿ ಬರ ಹೆಚ್ಚಾಗಲಿದೆ. ಪ್ರಕೃತಿ ವಿಕೋಪಗಳು ಜನರಿಗೆ ಬಹಳ ತೊಂದರೆ ಕೊಡಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.