Home News Waterfalls: ಕೊಡಗಿನ ಜಲಪಾತಗಳಿಗೆ ಜೀವಕಳೆ- ಪ್ರವಾಸಿಗರನ್ನು ಕೈಬೀಸಿ‌ಕರೆಯುತ್ತಿವೆ ಜಲಧಾರೆಗಳು

Waterfalls: ಕೊಡಗಿನ ಜಲಪಾತಗಳಿಗೆ ಜೀವಕಳೆ- ಪ್ರವಾಸಿಗರನ್ನು ಕೈಬೀಸಿ‌ಕರೆಯುತ್ತಿವೆ ಜಲಧಾರೆಗಳು

Hindu neighbor gifts plot of land

Hindu neighbour gifts land to Muslim journalist

Waterfalls: ಕಳೆದ ಒಂದು ವಾರದಿಂದ ಸುರಿದ ಮಳೆಗೆ “ಸ್ಕಾಟ್ಲ್ಯಾಂಡ್ ಆಫ್ ಇಂಡಿಯಾ” ಕೊಡಗಿನ ಚಿತ್ರಣವೇ ಬದಲಾಗಿದೆ ಪಶ್ಚಿಮ ಘಟ್ಟದ ಶ್ರೇಣಿಗಳು ಭೂತಾಯಿ ಹಸಿರು ಸೀರೆಯನ್ನಟ್ಟಂತೆ ಕಂಗೋಳಿಸುತ್ತಿದ್ದು, ಈ ನಾಡು ಜಳಕನ್ಯೆರು ವಯ್ಯಾರದಿಂದ ಬೆಟ್ಟಗಳ ಶ್ರೇಣಿ ನಡುವೆ ಧೂಮ್ಮಿಕ್ಕುತ್ತಿವೆ. ಕೊಡಗಿನಲ್ಲಿ ಸಾಕಷ್ಟು ಜಲಪಾತಗಳು ಇದೀಗ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಅದರಲ್ಲೂ ಪಶ್ಚಿಘಟ್ಟದ ಪುಷ್ಪಗಿರಿ ವನ್ಯಜೀವಿ ವಿಭಾದಲ್ಲಿ ಹರಿಯುವ ಕುಮಾರಧರ ನದಿ ಸೋಮವಾರಪೇಟೆ ತಾಲೂಕಿನಲ್ಲಿರುವ ಮಲ್ಲಳ್ಳಿ ಆಕರ್ಷಣೆಯ ಕೇಂದ್ರ ಬಿಂದು, ಸೋಮವಾರಪೇಟೆಯಿಂದ 25 ಕಿಲೋಮೀಟರ್ ಕ್ರಮಸಿದರೆ ಸಾಕು ಸಿಗುತ್ತದೆ ಈ ಅದ್ಭುತ ಜಲಪಾತ. ಇನ್ನು ಸೋಮವಾರಪೇಟೆ ಭಾಗದಲ್ಲಿ ಸಣ್ಣ ಪುಟ್ಟ ಜಲಪಾತಗಳು ನೋಡುವುದಕ್ಕೆ ಸಾಧ್ಯವಿದೆ.

ಸೋಮವಾರಪೇಟೆಯಿಂದ ಮಡಿಕೇರಿ ಕಡೆ ತೆರಳುವ ಮಾರ್ಗದಲ್ಲಿ ಅಂದ್ರೆ ಮಡಿಕೇರಿಯಿಂದ 10 ಕಿಲೋಮೀಟರ್ ದೂರದಲ್ಲಿ ಕೋಟೆ ಅಬ್ಬಿ ಎಂಬ ಅದ್ಭುತ ಜಲಪಾತವಿದೆ ದಟ್ಟ ಕಾನನ, ಕಾಫಿ ತೋಟದ ಮದ್ಯೆ ಸಾಗಿದರೆ ಈ ಅದ್ಭುತ ಜಲಪಾತ ನೋಡುವುದಕ್ಕೆ ಸಾಧ್ಯ. ಇನ್ನು ಮಡಿಕೇರಿ ಸಮೀಪವೇ ಇರುವ ಸದಾ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಜಲಪಾತ ಅಂದರೆ ಅದು ಅಬ್ಬಿ ಜಲಪಾತ. ಇದು ಕೂಡ ಮಡಿಕೇರಿ ನಗರದಿಂದ ಮಂದಾಲ್ಪಟ್ಟಿ (ಮುಗಿಲಪೇಟೆ ) ಹೋಗುವ ಮಾರ್ಗದಲ್ಲಿ ಸಿಗುತ್ತದೆ. ಬೃಹದಾಕಾರದ ಕಪ್ಪು ಬಂಡೆ ಕಲ್ಲಿನ ಮೇಲಿನಿಂದ ಧುಮ್ಮಿಕ್ಕುವ ಜಲಪಾತ ಪ್ರವಾಸಿಗರ ಆಲ್ ಟೈಮ್ ಫೇವರಿಟ್. ವಾಹನ ಇಳಿದು ಮುಖ್ಯದ್ವಾರದಿಂದ ಕಾಫಿ, ಏಲಕ್ಕಿ ತೋಟದ ಮಧ್ಯೆ ಇರುವ ಕಾಲು ದಾರಿಯಲ್ಲಿ ಸಾಗುತ್ತಿದ್ದಂತೆ ದೂರದ ಜಲಪಾತದ ಭೋರ್ಗರೆತ ಸದ್ದು ಕೇಳಿಸುತ್ತದೆ. ಅಂದಹಾಗೆ ಈ ಜಲಪಾತಕ್ಕೆ ಬ್ರಿಟಿಷ್ ರಾಣಿಯೊಬ್ಬಳ ಹೆಸರು ಕೂಡ ಇದೆ. ಬ್ರಿಟಿಷ್ ಅಧಿಕಾರಿಯೊಬ್ಬನ ಮಗಳು ಜೆಸ್ಸಿ ಎಂಬುವವರಿಗೆ ಇಷ್ಟವಾದ ಈ ಜಲಪಾತವನ್ನು “ಜೆಸ್ಸಿ ಫಾಲ್ಸ್ “ಎಂದು ಕರೆಯುತ್ತಾರೆ. ಇನ್ನೂ ಮತ್ತೊಂದು ಪ್ರಮುಖ ಜಲಪಾತದಲ್ಲಿ ಒಂದಾದ ಕಬ್ಬೆ ಬೆಟ್ಟ ತಪ್ಪಲಿನಲ್ಲಿರುವ ಚೇಲಾವರ ಜಲಪಾತ.

ಮಡಿಕೇರಿಯಿಂದ 30 ಕಿಲೋಮೀಟರ್ ದೂರವಿರುವ ಚೇಯಂಡಾಣೆ ಗ್ರಾಮದಲ್ಲಿ ಈ ಜಲಪಾತದ ದರ್ಶನ ಪಡೆಯಬಹುದಾಗಿದೆ, ಕಾಫಿ ತೋಟದ ಮಧ್ಯದಲ್ಲಿರುವ ಆಮೆಯ ಬೆನ್ನು ಆಕಾರದಲ್ಲಿರುವ ಬಂಡೆ ಮೇಲಿನಿಂದ ಭೋರ್ಗರಿಯುವ ಈ ಜಲಪಾತ ಒಂದು ಹಂತಲ್ಲಿ ಅಪಾಯಕಾರಿ ಸಹ ಹೌದು. ಸದ್ಯ ಇಲ್ಲಿ ಭದ್ರತೆ ಮತ್ತು ತಡೆಗೋಡೆ ಸಹ ಮಾಡಲಾಗಿದೆ, ಜಲಪಾತದ ಮೇಲಭಾಗದಲ್ಲಿರುವ ಕಬ್ಬೆ ಬೆಟ್ಟ ಉತ್ತಮ ಟ್ರೇಕ್ಕಿಂಗ್ ಸ್ಪಾಟ್. ಇನ್ನು ಕೊಡಗಿನ ಮತ್ತೊಂದು ರುದ್ರ ರಾಮಣೀಯ ಜಲಪಾತ ಎಂದರೆ ಅದು ಇರ್ಪು ಜಲಪಾತ.

ಮಡಿಕೇರಿಯಿಂದ 50 ಕಿಲೋಮೀಟರು ದೂರದಲ್ಲಿರುವ ಇದು, ನಗರಹೊಳೆ ರಾಷ್ಟ್ರೀಯ ಉದ್ಯಾನವನದ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿ ಲಕ್ಷ್ಮಣ ತೀರ್ಥ ನದಿಯಾಗಿ ಇರ್ಪುನಲ್ಲಿ ಜಾಲಾಧಾರೆ ರೂಪುಗೊಳ್ಳುತ್ತದೆ, ಕಪ್ಪು ಶಿಲೆಯ ಮೇಲೆ ಹಂತಹತವಾಗಿ ಧುಮ್ಮಿಕ್ಕುವ ಈ ಜಲಪಾತಕ್ಕೆ, ರಾಮಾಯಣದ ನಂಟು ಇದೆ.

ವನವಾಸದಲ್ಲಿ ಇದ್ದ ರಾಮನಿಗೆ ಬಾಯಾರಿಕೆ ಆದ ಸಂದರ್ಭ ಲಕ್ಷ್ಮಣ ನೀರು ಹುಡುಕಿಕೊಂಡು ಅಲೆದಾಡುವ ಸಂದರ್ಭ ಭೂಮಿಗೆ ಬಾಣ ಬಿಟ್ಟ ವೇಳೆ ಚಿಮ್ಮಿದ ಜಲವೇ ಈ ಲಕ್ಷ್ಮಣ ತೀರ್ಥ, ಜಲಪಾತದ ಮುಖ್ಯ ಗೇಟ್ ಬಳಿ ಪುರಾಣ ಸಾರುವ ದೇವಾಲಯ ಸಹ ಇದೆ. ಮುಖ್ಯ ಗೇಟ್ ನಿಂದ ಕಾಲ್ನಡಿಗೆ ಮೂಲಕ ಒಂದೆರಡು ಕಿಲೋಮೀಟರ್ ಕ್ರಮಸಿದರೆ ಈ ಜಲಪಾತ ರಾಮಣೀಯ ದೃಶ್ಯ ಕಾಣಲು ಸಾಧ್ಯ.

ಕೊಡಗಿನಲ್ಲಿ ಹೆಜ್ಜೆ ಹೆಜ್ಜೆಗೂ ಜಲಪಾತಗಳ ಸಿಗುತ್ತವೆ, ಇವುಗಳು ದೂರದಿಂದ ನೋಡಿ ಅನುಭವಿಸಬೇಕು, ಹತ್ತಿರ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ನಾವುಗಳು ಎಚ್ಚರಿಕೆಯಿಂದ ಇರಬೇಕು ಎನ್ನುವುದು ನಮ್ಮ ಕಿವಿ ಮಾತು.