Home News Kerala: ಪೊಲೀಸರಿಂದ ತಪ್ಪಿಸಿಕೊಳ್ಳಲು 2 ಪ್ಯಾಕೆಟ್ MDMA ಡ್ರಗ್ ನುಂಗಿದ ಕೇರಳದ ವ್ಯಕ್ತಿ ಸಾವು!

Kerala: ಪೊಲೀಸರಿಂದ ತಪ್ಪಿಸಿಕೊಳ್ಳಲು 2 ಪ್ಯಾಕೆಟ್ MDMA ಡ್ರಗ್ ನುಂಗಿದ ಕೇರಳದ ವ್ಯಕ್ತಿ ಸಾವು!

Hindu neighbor gifts plot of land

Hindu neighbour gifts land to Muslim journalist

Kozhikide: ಪೊಲೀಸರಿಗೆ ಹೆದರಿ ಡ್ರಗ್ಸ್ ಪ್ಯಾಕೆಟ್ ನುಂಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವಕನೊಬ್ಬ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.

ಕೊಯಿಕ್ಕೋಡ್‌ನ ಮೈಕಾವು ನಿವಾಸಿ ಶನಿದ್ (28) ಮೃತಪಟ್ಟ ಯುವಕ.

ಈತ ಶುಕ್ರವಾರ ಥಮರಸ್ಸೆರಿ ಬಳಿ ಪೊಲೀಸರನ್ನು ಕಂಡು ಹೆದರಿ ಡ್ರಗ್ ನ ಎರಡು ಪ್ಯಾಕೆಟ್‌ಗಳನ್ನು ನುಂಗಿದ್ದ. ಈತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಕೊಯಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿ, ಎಂಡೊಸ್ಕೊಪಿ ಮಾಡಿಸಿದಾಗ ಹೊಟ್ಟೆಯಲ್ಲಿ ಬಿಳಿ ಗ್ರಾನ್ಯೂಲ್ ಗಳು ಕಂಡುಬಂದಿದ್ದವು. ಈತನಿಗೆ ಚಿಕಿತ್ಸೆ ನೀಡಲಾಗಿದ್ದರೂ ಶನಿವಾರ ಅಸುನೀಗಿದ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈತ ಡ್ರಗ್ಸ್ ಸಂಬಂಧಿತ ಹಲವು ಅಪರಾಧಗಳಲ್ಲಿ ತೊಡಗಿದ್ದ ಎಂದಿದ್ದಾರೆ. ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಸಿಕ್ಕ ಬಳಿಕ ಖಚಿತವಾಗಲಿದೆ ಎಂದು ಅವರು ತಿಳಿಸಿದ್ದಾರೆ.